ಹಲಸಿನ ಬೀಜದ ಹತ್ತಾರು ರೆಸಿಪಿ..!

Video Description

ಹಲಸಿನ ಬೀಜ ಆರೋಗ್ಯ ಆಗರ ಹಲಸಿನ ಬೀಜದ ಹತ್ತಾರು ರೆಸಿಪಿ..! ಮಲೆನಾಡಿನಲ್ಲಿ ವಿಪುಲವಾಗಿ ಬೆಳೆಯುವ ಹಲಸಿನ ಹಣ್ಣು ದೊಡ್ಡ ಗಾತ್ರದ ಮುಳ್ಳುಕವಚವನ್ನು ಹೊಂದಿರುವ ಹಣ್ಣಾಗಿದ್ದು ಏಷ್ಯಾಖಂಡದ ಸಮಶೀತೋಷ್ಣ ವಲಯದಲ್ಲಿ ಹೆಚ್ಚಿನ ಆರೈಕೆಯಿಲ್ಲದೇ ಬೆಳೆಯುತ್ತದೆ. ಈ ಹಣ್ಣುಗಳಲ್ಲಿ ಹೆಚ್ಚಿನ ಪ್ರೋಟೀನ್ ಹಾಗೂ ವಿಟಮಿನ್ ಬಿ, ಪೊಟ್ಯಾಶಿಯಂ, ಕ್ಯಾಲ್ಸಿಯಂ ಹಾಗೂ ಸತುವಿನ ಸಹಿತ ಹಲವಾರು ಪೋಶಕಾಂಶಗಳಿವೆ. ಹಲಸಿನ ಹಣ್ಣನ್ನು ತಿಂದು ಅದರ ಬೀಜವನ್ನು ನಾವು ಬಿಸಾಡುತ್ತೇವೆ. ಆದರೆ ಈ ಬೀಜದಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ ಎಂದು ತಿಳಿದಿದೆಯಾ? ಹಣ್ಣುಗಳ ಬೀಜಗಳನ್ನು ತಿನ್ನುವುದರಿಂದ ಅದರಲ್ಲಿರುವ ಪೋಷಕಾಂಶಗಳು ನಮ್ಮ ದೇಹವನ್ನು ಸೇರುವುದು ಮತ್ತು ಅದರ ಆರೋಗ್ಯ ಲಾಭಗಳು ನಮಗೆ ಲಭ್ಯವಾಗುತ್ತದೆ. ಹಲಸಿನ ಬೀಜಗಳಲ್ಲಿ ಖನಿಜಗಳಾದ ಮೆಗ್ನೀಶಿಯಂ, ಸತು, ಪೊಟ್ಯಾಶಿಯಂ, ಕಬ್ಬಿಣ, ಕ್ಯಾಲ್ಸಿಯಂ ಹಾಗೂ ತಾಮ್ರಗಳು ಅಲ್ಪಪ್ರಮಾಣದಲ್ಲಿವೆ. ಅಲ್ಲದೇ ಅತಿಸೂಕ್ಷ್ಮಜೀವಿ ನಿರೋಧಕ ಸಂಯುಕ್ತಗಳೂ ಇದ್ದು ಇವು ಕೆಲವು ಆಹಾರದ ಮೂಲಕ ದೇಹವನ್ನು ಪ್ರವೇಶಿಸಿರುವ ಸೂಕ್ಷ್ಮ ಬ್ಯಾಕ್ಟೀರಿಯಾಗಳ ದಾಳಿಯನ್ನು ತಡೆಯುತ್ತದೆ ಹಾಗೂ ಕೆಲವಾರು ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತದೆ ಹಲಸಿನ ಬೀಜಗಳನ್ನು ಬೇಯಿಸಿ ನಿಮ್ಮ ನೆಚ್ಚಿನ ಖಾದ್ಯಗಳೊಂದಿಗೆ ಬೆರೆಸಿ ಸೇವಿಸುವ ಮೂಲಕ ರುಚಿಯನ್ನು ಹೆಚ್ಚಿಸಬಹುದು. ಈ ಪ್ರೋಟೀನ್ ಸ್ನಾಯುಗಳ ಬೆಳವಣಿಗೆ ಹಾಗೂ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳಲು ನೆರವಾಗುತ್ತದೆ. ಅಜೀರ್ಣಕ್ಕೆ ಹಲಸಿನ ಬೀಜ ತಕ್ಷಣದ ಪರಿಹಾರ ಒದಗಿಸುತ್ತದೆ. ಇದರಲ್ಲಿರುವ ಪೋಷಕಾಂಶಗಳು ಜೀರ್ಣಕ್ರಿಯೆ ಸುಲಭವಾಗಿಸುತ್ತವೆ ಹಾಗೂ ಆಹಾರವನ್ನು ಪೂರ್ಣವಾಗಿ ಜೀರ್ಣಿಸಿಕೊಳ್ಳಲು ನೆರವಾಗುತ್ತದೆ. ಅಲ್ಲದೇ ಈ ಬೀಜಗಳಲ್ಲಿರುವ ಹೆಚ್ಚಿನ ಪ್ರಮಾಣದ ಕರಗದ ನಾರು ಜೀರ್ಣಕ್ರಿಯೆ ಸುಲಭವಾಗಿಸಲು ಹಾಗೂ ಹೊಟ್ಟೆಯನ್ನು ತುಂಬಿರುವ ಭಾವನೆ ಮೂಡಲು ನೆರವಾಗುತ್ತದೆ. ಇದರಲ್ಲಿರುವ ವಿಟಮಿನ್ ಎ ಕಣ್ಣಿನ ದೃಷ್ಟಿಯನ್ನು ಉತ್ತಮವಾಗಿರಿಸಲು ನೆರವಾಗುತ್ತದೆ. ಕಣ್ಣಿನ ಆರೋಗ್ಯಕ್ಕೆ ವಿಟಮಿನ್ ಎ ಅಗತ್ಯವಾಗಿದ್ದು ಹಲಸಿನ ಬೀಜವನ್ನು ನಿಯಮಿತವಾಗಿ ಸೇವಿಸುವ ಮೂಲಕ ಕಣ್ಣಿನ ಆರೋಗ್ಯವನ್ನು ಉತ್ತಮವಾಗಿರಿಸಿ ಕೊಂಡು ಕಣ್ಣಿನ ಕಾಯಿಲೆಗಳನ್ನು ದೂರವಿರಿಸಬಹುದು. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹಲಸಿನ ಬೀಜಗಳನ್ನು ಸೇವಿಸುವ ಮೂಲಕ ದೇಹದಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚುತ್ತದೆ ಹಾಗೂ ರಕ್ತಹೀನತೆಯನ್ನು ಹೋಗಲಾಡಿಸುತ್ತದೆ. ಹಲಸಿನ ಬೀಜಗಳಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚಿದ್ದು ಹೀಮೋಗ್ಲೋಬಿನ್ ಕೊರತೆ ಎದುರಿಸುತ್ತಿರುವ ವ್ಯಕ್ತಿಗಳಿಗೆ ಸೂಕ್ತವಾದ ಆಹಾರವಾಗಿದೆ. ಹಲಸಿನ ಹಣ್ಣಿನಿಂದ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಬಹುದಾಗಿದ್ದು ವಡೆ, ಲಾಡು, ಹೋಳಿಗೆ, ಸಾರು, ಪಾಯಸ, ಜಾಮೂನು, ಚಕ್ಕುಲಿ ಮೊದಲಾದ ಖಾದ್ಯಗಳನ್ನು ತಯಾರಿಸಬಹುದಾಗಿದೆ

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.