ಮೈ ಮೇಲಿನ ಮಚ್ಚೆ ನಿವಾರಣೆ ಹೇಗೆ..?

Video Description

ಮಚ್ಚೆಗಳನ್ನು ತೆಗೆಯಲು ಇಲ್ಲಿದೆ ಉಪಾಯ ನಾವು ಸಣ್ಣವರಾಗಿದ್ದಾಗ ಮುಖದಲ್ಲಿ ಒಂದು ಕಲೆ ಕೂಡ ಇರದೆ ಫಳ ಫಳನೆ ಹೊಳೆಯುವ ಮೈ ಕಾಂತಿ ನಮ್ಮದಾಗಿತ್ತು. ಆದರೆ ಬೆಳೆದು ದೊಡ್ಡವರಾದಂತೆ ಮಚ್ಚೆಗಳು ಹುಟ್ಟಿಕೊಂಡು ಒಮ್ಮೊಮ್ಮೆ ಅಸಹ್ಯವಾಗಿ ಕಾಣಿಸಿಬಿಡುತ್ತವೆ. ಮಚ್ಚೆಗಳು ಚರ್ಮದ ಮೇಲಿನ ಕೋಶಗಳ ಗುಂಪು ಒಂದೆಡೆ ಸೇರಿ ಉಂಟಾಗಿರುವ ಒಂದು ಕಲೆಯಾಗಿದೆ. ಇವುಗಳನ್ನು ತಾಂತ್ರಿಕವಾಗಿ ಮೆಲನೋ ಸೈಟ್ಸ್ ಎಂದು ಕರೆಯಲಾಗುತ್ತದೆ. ಮಚ್ಚೆಗಳಿಗೆ ಬಣ್ಣ ಬಳಿಯುವ ಕೆಲಸವನ್ನು ಇದೇ ಮಾಡುತ್ತದೆ ಎಂದು ಹೇಳಿದರೂ ತಪ್ಪಾಗಲಾರದು. ಮೊದಮೊದಲು ಚರ್ಮದ ಸವೆತದಿಂದ ಉಂಟಾಗುವ ಮತ್ತು ಅತಿಯಾದ ಬಿಸಿಲಿನ ಶಾಖಕ್ಕೆ ಚರ್ಮ ಒಡ್ಡಿಕೊಳ್ಳುವುದರಿಂದ ಚರ್ಮದಲ್ಲಿನ ಮೆಲನಿನ್ ಅಂಶ ಚರ್ಮದ ಆ ಭಾಗವನ್ನು ಕಂದು ಬಣ್ಣಕ್ಕೆ ಬದಲಾಯಿಸಿ ಚರ್ಮಕ್ಕೆ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಮಚ್ಚೆಗಳನ್ನು ಹೋಗಲಾಡಿಸಲು ಕೆಲವೊಂದು ಮನೆಮದ್ದುಗಳಿವೆ. ಅರ್ಧ ಟಿ ಚಮಚ ಬೇಕಿಂಗ್ ಸೋಡಾಕ್ಕೆ 2-3 ಹನಿ ಹರಳೆಣ್ಣೆ ಸೇರಿಸಿ. ಇವುಗಳನ್ನು ಕಲಸಿ ಗಟ್ಟಿಯಾದ ಮಿಶ್ರಣ ತಯಾರಿಸಿಕೊಳ್ಳಿ. ಮಚ್ಚೆ ಇರುವ ಜಾಗಕ್ಕೆ ಈ ಪೇಸ್ಟ್ ಹಚ್ಚಿ. ಬ್ಯಾಂಡ್‌ನ ಸಹಾಯದಿಂದ ಪೇಸ್ಟ್ ಮೇಲೆ ಅಂಟಿಸಿ ಇಡಿ ರಾತ್ರಿ ಹಾಗೆ ಬಿಡಿ. ಬಾಳೆಹಣ್ಣಿನ ಸಿಪ್ಪೆ ಬಳಸಿ ಕೂಡ ಮಚ್ಚೆಯನ್ನು ಹೋಗಲಾಡಿಸಬಹುದು. ಮೊದಲಿಗೆ ಬಾಳೆಹಣ್ಣಿನ ಸಿಪ್ಪೆ ಸುಲಿದು ಅದರ ಬಿಳಿ ಭಾಗವನ್ನು ಮಚ್ಚೆ ಇರುವ ಜಾಗದ ಕಡೆಗೆ ತಿರುಗಿಸಿ ಮಚ್ಚೆಯ ಮೇಲಿಡಿ. ಅದನ್ನು ಅಂಟು ಉಳ್ಳ ಟೇಪ್‌ನ ಸಹಾಯದಿಂದ ಅಂಟಿಸಿ. ಇಡಿ ರಾತ್ರಿ ಹಾಗೆಯೇ ಬಿಟ್ಟು ಮಲಗಿ. ಮಚ್ಚೆ ಹೋಗುವವರೆಗೂ ಈ ವಿಧಾನವನ್ನು ಅನುಸರಿಸಿದರೆ ಆಯಿತು. ಇನ್ನು ಬೆಳ್ಳುಳ್ಳಿ ಕೂಡ ಮಚ್ಚೆ ನಿವಾರಣೆಗೆ ಸೂಕ್ತ ಮನೆಮದ್ದಾಗಿದೆ. ನಾಲ್ಕರಿಂದ ಐದು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದನ್ನು ಜಜ್ಜಿ ಪೇಸ್ಟ್ ಮಾಡಿಕೊಳ್ಳಿ. ಮಚ್ಚೆ ಇರುವ ಜಾಗದ ಮೇಲೆ ಪೇಸ್ಟ್ ಲೇಪಿಸಿ. ಪೇಸ್ಟ್ ಒಣಗುತ್ತಿದ ಹಾಗೆ ಬ್ಯಾಂಡ್ ಏಡ್‌ನಿಂದ ಅಂಟಿಸಿ. ರಾತ್ರಿ ಪೂರ್ತಿ ಹಾಗೆಯೇ ಬಿಡಿ. ಒಂದು ವಾರದವರೆಗೆ ಈ ಪ್ರಕ್ರಿಯೆ ಮಾಡಿ. ಮಚ್ಚೆಗಳು ತನ್ನಿಂದ ತಾನೇ ಮಾಯವಾಗುತ್ತವೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.