ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳೋದು ಹೇಗೆ..?

Video Description

ಮನಸನ್ನು ಪ್ರಶಾಂತವಾಗಿಡಲು ಹೀಗೆ ಮಾಡಿ..! ನಮ್ಮ ದೇಹದ ಆರೋಗ್ಯದಂತೆ ಮನಸ್ಸಿನ ಆರೋಗ್ಯ ಕೂಡ ಬಹಳ ಮುಖ್ಯವಾದುದು. ನಮ್ಮ ಇಂದಿನ ಒತ್ತಡದ ಬದುಕಿನಲ್ಲಿ ನಾವು ಮನಸ್ಸಿಗೆ ಹೆಚ್ಚಿನ ಒತ್ತಡವನ್ನು ಹೇರುತ್ತಿದ್ದೇವೆ. ಆದಷ್ಟು ಪ್ರಶಾಂತ ವಾತಾವರಣದಲ್ಲಿದ್ದು ಮನಸ್ಸಿಗೆ ಸ್ವಾಸ್ಥ್ಯವನ್ನು ಒದಗಿಸಬೇಕು. ಬೇರೆಯವರ ಬಗ್ಗೆ ಅಸೂಯೆಪಡದೆ ನಮ್ಮ ಕರ್ತವ್ಯಗಳಲ್ಲಿ ಮಗ್ನರಾಗಿ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಕ್ಷಮೆಯನ್ನು, ವಿನಯವನ್ನು ರೂಢಿಸಿಕೊಂಡು ನಮ್ಮಲ್ಲಿ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು. ನಾವು ಸೇಡಿನ ಭಾವನೆಯಿಂದ ಇದ್ದಷ್ಟು ಅದು ನಮ್ಮನ್ನೇ ಕೊಲ್ಲುತ್ತದೆ. ನಮ್ಮಲ್ಲಿ ಕ್ಷಮಾ ಗುಣವನ್ನು ನಾವು ಬೆಳೆಸಿಕೊಳ್ಳಬೇಕು. ಧ್ಯಾನದಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಿ. ದಾನ, ಕರ್ತವ್ಯಪರತೆ, ನಿರ್ದಿಷ್ಟ ಹಾಗೂ ಸಾರ್ವತ್ರಿಕವಾದ ವ್ರತಗಳ ಆಚರಣೆ, ಸತ್ಕಾರ್ಯ ನಿರ್ವಹಣೆ, ಒಟ್ಟಾರೆ ಭಗವಂತನ ಚಿಂತನೆಗೆ ಒತ್ತು ನೀಡಿದರೆ ಆರೋಗ್ಯಕರ ಮನಸ್ಸು ನಮ್ಮದಾಗುವುದರಲ್ಲಿ ಸಂಶಯವಿಲ್ಲ. ಅನಾರೋಗ್ಯಕರವಾದ ಹಾಗೂ ಛಿದ್ರ ವಿಚಾರಗಳು ನಮ್ಮ ಮನಸ್ಸನ್ನು ಪ್ರವೇಶಿಸದಂತೆ ಎಚ್ಚರವಹಿಸಬೇಕು. ಅಡೆ-ತಡೆಗಳನ್ನು ಭೇದಿಸಿ ಬರುವ ಬಯಕೆಗಳು, ಗೊಂದಲಗಳನ್ನು ತಡೆದು, ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸಬೇಕು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.