ಎದೆಹಾಲು ನಿಲ್ಲಿಸಬೇಕೆ ..? ಹೀಗೆ ಮಾಡಿ..!

Video Description

ಮಗುವಿಗೆ ಎದೆಹಾಲು ನಿಲ್ಲಿಸುವುದು ಹೇಗೆ? ಎದೆಹಾಲು ನಿಲ್ಲಿಸಬೇಕೆ ..? ಹೀಗೆ ಮಾಡಿ..! ತಾಯಿಯ ಎದೆಹಾಲು ಮಗುವಿಗೆ ಅತ್ಯವಶ್ಯಕ. ಒಂದುವರೆ ವರ್ಷದವರೆಗೆ ತಾಯಿ ಎದೆಹಾಲನ್ನು ಮಗುವಿಗೆ ಕುಡಿಸುವುದು ಒಳಿತು. ತದನಂತ್ರ ಮಗುವಿಗೆ ಹಾಲು ಬಿಡಿಸಿ, ನಾರ್ಮಲ್ ಆಹಾರಕ್ರಮಕ್ಕೆ ಬರುವಂತೆ ಮಾಡಲು ಕೆಲವು ನೈಸರ್ಗಿಕ ವಿಧಾನಗಳಿವೆ ಮಗು ಅಂಬೆಗಾಲಿಡುವ ಹೊತ್ತಿಗೆ ಎದೆಹಾಲು ಬಿಡಿಸಿಬಿಡಬೇಕು ಎಂದುಕೊಂಡ ತಾಯಿ, ಅದನ್ನು ಬಿಡಿಸಲಾಗದೇ ಅಸಹಾಯಕಳಾಗುತ್ತಾಳೆ. ಮತ್ತೆ ಮತ್ತೆ ಪ್ರಯತ್ನಿಸಿ ಸೋತ ಬಳಿಕವೂ ಹಲ್ಲು ಬಲಿತ ಮಗು ಎದೆ ಹಾಲಿಗಾಗಿ ಹಂಬಲಿಸುತ್ತದೆ. ಇದನ್ನು ತಪ್ಪಿಸುವುದು ತುಂಬಾ ಕಷ್ಟಕರ. ಲ್ಲಿ ಕೊಟ್ಟಿರುವ ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ ಎದೆಹಾಲು ಬಿಡಿಸುವ ನಿಮ್ಮ ಪರಿಶ್ರಮವನ್ನು ಕಡಿಮೆ ಮಾಡಬಹುದು. ನಿಮ್ಮ ಎದೆಹಾಲು ಕಡಿಮೆಯಾಗ್ಬೇಕು ಅಂದ್ರೆ ವೀಳ್ಯದೆಲೆ ಒಂದು ಬೆಸ್ಟ್ ಮೆಡಿಸಿನ್.. ವೀಳ್ಯೆದೆಲೆಯನ್ನು ನಿಮ್ಮ ಬ್ಲೌಸ್‌ನ ಒಳಗೆ ಇಟ್ಟುಕೊಂಡು ಎದೆಗೆ ಒತ್ತಿಕೊಳ್ಳುವಂತೆ ಇಟ್ಕೊಳ್ಳಿ, ಎಲೆಕೋಸಿನಲ್ಲಿರುವ ಕೆಲವು ಅಂಶಗಳು ನಿಮ್ಮ ಎದೆಹಾಲು ಕಡಿಮೆಗೊಳಿಸಲು ಸಹಕಾರಿಯಾಗಿರುತ್ತೆ. ಎಲೆಕೋಸಿನ ಒಂದೆರಡು ದಳಗಳನ್ನು ತೆಗೆದುಕೊಂಡು ಮಡಚಿ. ನಿಮ್ಮ ಎದೆಯ ಸೈಜ್‌ಗೆ ತಕ್ಕಂತೆ ಅದನ್ನು ನಿಮ್ಮ ರವಿಕೆಯಲ್ಲಿ ಇಟ್ಟುಕೊಳ್ಳಿ.. ಕೆಲವೇ ದಿನ ಹೀಗೆ ಮಾಡೋದ್ರಿಂದ ಎದೆ ಹಾಲು ಇಂಗುತ್ತೆ. ಅವರೆ ಬೇಳೆ ಅಥ್ವಾ ಕಾಳು ಎದೆಹಾಲು ನಿಯಂತ್ರಕಗಳಲ್ಲಿ ಒಂದು. ಅತಿಯಾಗಿ ಹಾಲಿದ್ದು ಎದೆನೋವು ಅನುಭವಿಸುವ ಮಹಿಳೆಯರು ಅಥ್ವಾ ಮಗುವಿಗೆ ಹಾಲು ಬಿಡಿಸಬೇಕು ಅಂದುಕೊಳ್ಳುವವರು ಅವರೆಯನ್ನು ಕೂಡ ಬಳಕೆ ಮಾಡ್ಬಹುದು.ಅವರೆ ಕಾಳಿನ ಅಡುಗೆ ಸೇವನೆ ಮಾಡ್ಬಹುದು. ಹೂವಿನಲ್ಲೂ ಇಂತದ್ದೊಂದು ಶಕ್ತಿ ಇದೆ ಅಂದ್ರೆ ನೀವು ಆಶ್ಚರ್ಯ ಪಡಲೇಬೇಕು. ಮಲ್ಲಿಗೆ ಹೂವನ್ನು ಕೂಡ ಎದೆಹಾಲು ಕುಗ್ಗಿಸಲು ಬಳಸ್ಬಹುದು. ಮಲ್ಲಿಗೆ ಹೂವಿನ ಪೇಸ್ಟ್ ತಯಾರಿಸಿಕೊಂಡು ನಿಮ್ಮ ಬ್ರಾದೊಳಗೆ ಇಟ್ಟುಕೊಳ್ಳೋದು, ಅಥ್ವಾ ಪರಿಮಳಯುಕ್ತ ಮಲ್ಲಿಗೆ ಹೂವುಗಳನ್ನೇ ಇಟ್ಟುಕೊಳ್ಳೋದ್ರಿಂದ ಕೆಲವೇ ದಿನಗಳಲ್ಲಿ ಹಾಲು ಒಣಗಲು ಇವು ಕಾರಣವಾಗುತ್ತೆ. ಇನ್ನು ಮಗು ನಿಮ್ಮ ಎದೆಹಾಲನ್ನು ಕುಡಿಯೋದನ್ನು ನಿಲ್ಲಿಸಬೇಕು ಅಂದ್ರೂ ನೀವು ಯಾವ್ಯಾವುದೋ ಇಂಜೆಕ್ಷನ್ ಅಥ್ವಾ ಮಾತ್ರೆಗಳ ಮೊರೆ ಹೋಗುವ ಅಗತ್ಯವಿಲ್ಲ. ನೈಸರ್ಗಿಕ ವಿಧಾನದಲ್ಲಿಯೇ ಬಿಡಿಸಬಹುದು. ಅದಕ್ಕಾಗಿ ಬಳಕೆ ಮಾಡಬಹುದಾದ ವಸ್ತುಗಳು ಹೀಗಿವೆ ನೋಡಿ.. ಕಹಿ ಯಾವಾಗ್ಲೂ ಕೂಡ ಸಹಿಸೋಕೊಳ್ಳೋಕೆ ಆಗೋದಿಲ್ಲ. ಕವಿಬೇವಿನ ಎಣ್ಣೆ, ಕಹಿಬೇವಿನ ಸೊಪ್ಪು ಯಾವುದನ್ನು ಬೇಕಾದ್ರೂ ನೀವು ಮಗು ಹಾಲು ಕುಡಿಯೋದನ್ನು ನಿಲ್ಲಿಸೋಕೆ ಬಳಸ್ಬಹುದು. ನಿಮ್ಮ ಎದೆಗೆ ಈ ಎಣ್ಣೆ ಅಥವಾ ಸೊಪ್ಪುನ್ನು ಹಚ್ಚಿಕೊಂಡು ಮಗುವಿಗೆ ಹಾಲುಣಿಸಲು ಮುಂದಾಗಿ, ಆಗ ಮಗು ಅದನ್ನು ತಿಂದು ಅಮ್ಮನ ಎದೆ ಹಾಲು ಕಹಿಯದೆ. ರುಚಿಯಾಗಿಲ್ಲ ಎಂದು ಭಾವಿಸಿ ಎದೆ ಹಾಲು ಕುಡಿಯಲು ಹಾತೊರೆಯುವುದನ್ನ ನಿಲ್ಲಿಸುತ್ತೆ

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.