ಕೆಟ್ಟ ಕನಸುಗಳಿಗೆ ಬಾಯ್ ಹೇಳಿ..!

Video Description

ರಾತ್ರಿ ಕೆಟ್ಟ ಕನಸು ಬೀಳಬಾರದು ಎಂದರೆ ಏನು ಮಾಡಬೇಕು ಗೊತ್ತಾ.? ಸ್ವಲ್ಪ ಏಲಕ್ಕಿ ತೆಗೆದುಕೊಂಡು ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಆ ವಸ್ತ್ರವನ್ನು ನಿಮ್ಮ ದಿಂಬಿನ ಪಕ್ಕದಲ್ಲಿ ಇಟ್ಟುಕೊಳ್ಳಿ. ಇದರಿಂದ ನಿದ್ದೆ ಚೆನ್ನಾಗಿ ಬರುತ್ತದೆ. ಹಾಸಿಗೆಗೆ ಹೊರಳಿದ ಕೂಡಲೆ ನಿದ್ದೆಗೆ ಜಾರುತ್ತೀರ. ಅಷ್ಟೇ ಅಲ್ಲ ಈ ರೀತಿ ಮಾಡುವುದರಿಂದ ಕೆಟ್ಟ ಕನಸುಗಳು ಬೀಳಲ್ಲ. ಬಹಳ ಹಾಯಾಗಿ ನಿದ್ರಿಸಬಹುದು. ದಕ್ಷಿಣದ ಕಡೆ ತಲೆಯಿಟ್ಟು, ಉತ್ತರದ ಕಡೆ ಕಾಲು ಇಟ್ಟು ನಿದ್ರಿಸಿದರೆ ಚೆನ್ನಾಗಿ ನಿದ್ದೆ ಬರುತ್ತದೆ. ವಾಸ್ತುಪ್ರಕಾರ ಅಂದುಕೊಂಡ ಕೆಲಸಗಳು ನೆರವೇರುತ್ತವೆ. ಲಕ್ ಕೂಡಿಬರುತ್ತದೆ. ನಿದ್ದೆ ಹೋಗುವ ಮುನ್ನ ಕನಿಷ್ಠ 5 ನಿಮಿಷಗಳ ಕಾಲ ಧ್ಯಾನ ಮಾಡಿದರೆ ಉತ್ತಮ ಪ್ರತಿಫಲ ಸಿಗುತ್ತದೆ. ಕಣ್ಣು ಮುಚ್ಚಿಕೊಂಡು ಯಾವುದಾದರೂ ಒಂದು ವಸ್ತುವಿನ ಮೇಲೆ ದೃಷ್ಟಿ ಕೇಂದ್ರೀಕರಿಸಬೇಕು. ಮನಸ್ಸನ್ನು ಆ ವಸ್ತುವಿನ ಮೇಲೆ ಕೇಂದ್ರೀಕರಿಸಬೇಕು. ಮನಸ್ಸಿನಲ್ಲಿ ಯಾವುದೇ ಇತರೆ ಆಲೋಚನೆ ಬರಲು ಬಿಡಬಾರದು. ಇದರಿಂದ ಮನಸ್ಸು ಪ್ರಶಾಂತವಾಗಿ, ಹಗುರವಾಗಿ ಒಳ್ಳೆಯ ನಿದ್ದೆ ಬರುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.