ಮುಖದ ಕೊಬ್ಬನ್ನು ಕರಗಿಸೋದು ಹೇಗೆ..?

Video Description

ಮುಖದ ಕೊಬ್ಬನ್ನು ಕರಗಿಸಲು ಇಲ್ಲಿದೆ ಪರಿಹಾರ ಮುಖದ ಕೊಬ್ಬನ್ನು ಕರಗಿಸೋದು ಹೇಗೆ..? ನಿಮ್ಮ ಮುಖ ದಪ್ಪಗಿದ್ದರೆ ನಿಮ್ಮ ದೇಹ ಕೂಡ ಕೊಬ್ಬಿನಿಂದ ಕೂಡಿರುವಂತೆ ಕಾಣುತ್ತದೆ. ಅದಕ್ಕಾಗಿ ನೀವು ಕೆಲವೊಂದಿಷ್ಟು ಮುಖದ ವ್ಯಾಯಾಮಗಳನ್ನು ಮಾಡಬೇಕಾಗುತ್ತದೆ ಜೊತೆಗೆ ನಿಮ್ಮ ದೇಹದಲ್ಲಿ ಕೂಡಿಕೊಂಡಿರುವ ಕೊಬ್ಬಿನಂಶವನ್ನು ಕಡಿಮೆ ಮಾಡಿಕೊಂಡು ಊಟ ತಿಂಡಿಯಲ್ಲಿ ಕೂಡ ನೀವು ಕೆಲವೊಂದು ಬದಲಾವಣೆಗಳನ್ನು ಮಾಡಬೇಕು. ಉಪ್ಪನ್ನು ಹೆಚ್ಚಾಗಿ ಸೇವಿಸುವುದೇ ಮುಖ ಊದಿಕೊಳ್ಳಲು ಮುಖ್ಯ ಕಾರಣ. ಆಹಾರವನ್ನು ಕಡಿಮೆ ಉಪ್ಪಿನೊಂದಿಗೆ ಅಥವಾ ಉಪ್ಪೇ ಇಲ್ಲದಂತೆ ತಿಂದರೆ ಆರೋಗ್ಯಕ್ಕೂ ಒಳ್ಳೆಯದು. ಸುಲಭವಾಗಿ ಜೀರ್ಣಗೊಳ್ಳಬಹುದಾದಂತಹ ಮತ್ತು ನಾರಿನಂಶ ಹೆಚ್ಚಿರುವ ಕೆಲವು ಸಾಂಬಾರು ಪದಾರ್ಥಗಳನ್ನು ಉಪಯೋಗಿಸಿದರೆ ರುಚಿಯೂ ನೀಡುತ್ತದೆ ಹೆಚ್ಚು ಉಪ್ಪಿನ ಬಳಕೆಯೂ ನಿಲ್ಲುತ್ತದೆ. ನೀರಿಗಿಂತ ದೇಹಕ್ಕೆ, ಚರ್ಮಕ್ಕೆ ಉತ್ತಮ ಟಾನಿಕ್ ಇಲ್ಲ. ಹೆಚ್ಚು ನೀರು ಕುಡಿಯುವುದರಿಂದ ಚರ್ಮವನ್ನು ಕ್ಲೆನ್ಸ್ ಮಾಡಿ ದೇಹವನ್ನು ಹಗುರಗೊಳ್ಳುವಂತೆ ಮಾಡುತ್ತದೆ. ಇದು ಹೆಚ್ಚು ತಿನ್ನುವುದನ್ನೂ ತಡೆಯುತ್ತದೆ. ಆದ್ದರಿಂದ ದಿನಕ್ಕೆ 8 ದೊಡ್ಡ ಲೋಟಗಳಷ್ಟು ನೀರು ಸೇವಿಸಿದರೆ ತೂಕವೂ ಕಡಿಮೆಯಾಗುತ್ತೆ. ಹಸಿ ತರಕಾರಿ, ಹಣ್ಣು, ಮೊಳಕೆಒಡೆದ ಹೆಸರುಕಾಳು ಮುಂತಾದುವು ಮುಖದಲ್ಲಿ ವಯಸ್ಸಾಗುವಂತೆ ಕಾಣುವುದನ್ನು ತಡೆಯುತ್ತದೆ. ಶಕ್ತಿ ನೀಡಿ ಒಳ್ಳೆಯ ನಿದ್ದೆಯನ್ನೂ ಕೊಡುತ್ತದೆ. ಆರೋಗ್ಯದ ವಿಷಯಕ್ಕೆ ಬಂದರೆ ಸಕ್ಕರೆ ಅಂಶ ಹೆಚ್ಚಿರುವ ಆಹಾರದ ಸೇವನೆ ಒಳ್ಳೆಯದಲ್ಲ. ಕೆಲವು ಸಕ್ಕರೆ ಅಂಶದ ತಿನಿಸುಗಳು ಮುಖದಲ್ಲಿ ಬೊಜ್ಜು ಉಂಟುಮಾಡುತ್ತದೆ ಮತ್ತು ರಕ್ತನಾಳಗಳಲ್ಲಿ ಉರಿ ಅನುಭವವನ್ನೂ ನೀಡುತ್ತದೆ. ನೀರಿನಂಶ ಹೆಚ್ಚಿರುವ ಆಹಾರದ ಸೇವನೆಯಿಂದ ಸಕ್ಕರೆ ಅಂಶ ಹೆಚ್ಚಾಗಿ ಹೊಂದಿರುವ ಚಾಕಲೇಟ್, ಕೇಕ್ ಮುಂತಾದುವನ್ನು ಕಡಿಮೆ ಮಾಡಬೇಕು. ಕ್ಯಾಲ್ಸಿಯಂ ಪೂರಿತ ಆಹಾರವೂ ಕೂಡ ಮುಖದ ಬೊಜ್ಜನ್ನು ಕಡಿಮೆ ಮಾಡುವಲ್ಲಿ ಹೆಚ್ಚು ಸಹಕಾರಿ. ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗುವುದರಿಂದ ಈ ರೀತಿ ಮುಖದಲ್ಲಿ ಬೊಜ್ಜು ಸೇರಿಕೊಳ್ಳಲು ಕಾರಣವಾಗುತ್ತದೆ. ಅದಕ್ಕಾಗಿ ಕ್ಯಾಲ್ಸಿಯಂ ಹೆಚ್ಚಿರುವ ಆಹಾರ ಸೇವನೆ ನಿಮ್ಮ ಡಯಟ್ ಲಿಸ್ಟ್ ನಲ್ಲಿರಲಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.