ರೋಸ್ ವಾಟರ್ ಮನೆಯಲ್ಲೇ ಮಾಡಿಕೊಳ್ಳಬಹುದು..!

Video Description

ಮನೆಯಲ್ಲೇ ತಯಾರಿಸಿ ರೋಸ್ ವಾಟರ್ ರೋಸ್ ವಾಟರ್ ಮನೆಯಲ್ಲೇ ಮಾಡಿಕೊಳ್ಳಬಹುದು..! ರೋಸ್ ವಾಟರ್ ಅನ್ನು ಕೇವಲ ಬ್ಯೂಟಿ ಹೆಚ್ಚಿಸಲು ಮಾತ್ರ ಬಳಸಲಾಗುತ್ತದೆ ಎಂದು ಏಮಾರಬೇಡಿ . ಅದರಿಂದ ಇನ್ನೂ ಹಲವಾರು ಪ್ರಯೋಜನಗಳಿವೆ . ದೇಹದ ಚರ್ಮದ ಕಾಂತಿ ಹೆಚ್ಚಿಸುವುದರಿಂದ ಹಿಡಿದು ಚರ್ಮದ ಮೇಲಿನ ಮಚ್ಚೆ ತೆಗೆಯುವವರೆಗೂ ಇದರ ಉಪಯೋಗ ಬಹಳ . ಸೆನ್ಸಿಟಿವ್ ಸ್ಕಿನ್ ಹೊಂದಿರುವವರಿಗೆ ಇದರ ಪ್ರಯೋಜನ ಬಹಳ ಲಾಭಕಾರಿ . ಏಕೆಂದರೆ ಇದು ನೈಸರ್ಗಿಕ ವಿಧಾನದಿಂದ ತಯಾರಾದ ಒಂದು ಒಳ್ಳೆಯ ದ್ರವ . ಇದು ಅತ್ಯಂತ ಸುರಕ್ಷಿತ ಮತ್ತು ಸರಳ ವಿಧಾನ . ಸ್ನಾನ ಮಾಡುವಾಗ ಕೆಲವೊಂದು ಹನಿಗಳಷ್ಟು ರೋಸ್ ವಾಟರ್ ಅನ್ನು ನೀವು ಸ್ನಾನ ಮಾಡುವ ನೀರಿಗೆ ಹಾಕಿ ಬಿಸಿ ಮಾಡಿ . ಅದರ ಘಮಗುಡುವ ಪರಿಮಳ ನಿಮ್ಮನ್ನು ನಿಜಕ್ಕೂ ರಿಲಾಕ್ಸ್ ಮಾಡುತ್ತದೆ . ಮನಸ್ಸಿನ ತಳಮಳವೆಲ್ಲಾ ದೂರವಾಗಿ , ಹೊಸ ಉಲ್ಲಾಸ ನಿಮ್ಮ ಮನಸ್ಸಿನಲ್ಲಿ ಮನೆ ಮಾಡುತ್ತದೆ . ಅಷ್ಟೇ ಅಲ್ಲದೆ ರೋಸ್ ವಾಟರ್ ಹಾಕಿ ಸ್ನಾನ ಮಾಡುವುದರಿಂದ ನಿಮ್ಮ ದೇಹದ ಚರ್ಮಕ್ಕೆ ಕೂಡ ಬಹಳ ಉಪಯೋಗ ಇದೆ . ಚರ್ಮದ ರೋಗಗಳಿಂದ ದೂರ ಮಾಡಿ ಚರ್ಮವನ್ನು ಕಾಂತಿಯುಕ್ತ ಮಾಡುತ್ತದೆ . ಚರ್ಮದ ಕಾಂತಿ ಹೆಚ್ಚು ಮಾಡಲು ರೋಸ್ ವಾಟರ್ ಬಹಳ ಸಹಕಾರಿ ಎಂದು ನಮಗೆಲ್ಲಾ ಗೊತ್ತು . ಮೊಸರಿಗೆ ಸ್ವಲ್ಪ ರೋಸ್ ವಾಟರ್ ಹಾಕಿ ಮುಖದ ಮೇಲೆ ಹಚ್ಚಿ ಅರ್ಧ ಗಂಟೆಗಳ ಕಾಲ ಹಾಗೆ ಬಿಡಿ . ಇದರಿಂದ ಚರ್ಮದ ಕಾಂತಿ ಇಮ್ಮಡಿ ಗೊಳ್ಳುತ್ತದೆ .ಮೊಡವೆಗಳು ಮುಖದ ಅಂದವನ್ನು ಹಾಳು ಮಾಡುತ್ತವೆ . ಇದರಲ್ಲಿ ಯಾವುದೇ ಸಂದೇಹವಿಲ್ಲ . ಅದಕ್ಕೆ ಪರಿಹಾರವೆಂದರೆ ತಣ್ಣನೆಯ ನೀರಿಗೆ ಸ್ವಲ್ಪ ಕೋಲ್ಡ್ ರೋಸ್ ವಾಟರ್ ಅನ್ನು ಹಾಕಿ ಬೆರೆಸಿ ಅದರಿಂದ ಮುಖದ ಮೇಲೆ ಎರಚುವಂತೆ ಮಾಡಿ ಮುಖ ತೊಳೆದುಕೊಂಡರೆ ಮುಖದ ಮೇಲಿನ ಮೊಡವೆಗಳ ಸಮೇತ ಮುಖದ ಮೇಲಿನ ಕಲೆಗಳೂ ಸಹ ಮಾಯವಾಗುತ್ತವೆ . ಇದನ್ನು ದಿನಕ್ಕೆ ಮೂರು ಬಾರಿ ಮಾಡುವುದರಿಂದ ಉತ್ತಮ ಫಲಿತಾಂಶ ಕಾಣಬಹುದು . ಅಷ್ಟೇ ಅಲ್ಲದೆ ಕೋಲ್ಡ್ ರೋಸ್ ವಾಟರ್ ಅನ್ನು ಮುಲ್ತಾನಿ ಮಿಟ್ಟಿಯ ಜೊತೆ ಕೂಡ ಉಪಯೋಗಿಸಬಹುದು. ಮುಖದ ಮೇಲೆ ಉಂಟಾದಂತಹ ಸನ್ ಬರ್ನ್ ನಿವಾರಿಸಲು ಎರಡು ಚಮಚ ಟೊಮೆಟೋ ರಸವನ್ನು ರೋಸ್ ವಾಟರ್‌ನೊಂದಿಗೆ ಮಿಶ್ರಣ ಮಾಡಿ, ಮುಖಕ್ಕೆ ಹಚ್ಚುವುದರಿಂದ, ಸನ್ ಬರ್ನ್ ಕ್ರಮೇಣ ಮಾಯವಾಗುತ್ತದೆ. ಮುಖದಲ್ಲಿ ವಯೋಗುಣಕ್ಕನುಗುಣವಾಗಿ ಉಂಟಾಗುವ ಸುಕ್ಕುಗಳನ್ನು ನಿವಾರಿಸಲು ರೋಸ್ ವಾಟರನ್ನು ಗ್ಲಿಸರಿನ್‌ನೊಂದಿಗೆ ಶ್ರೀಗಂಧದ ಪುಡಿಯನ್ನು ಮಿಶ್ರಣ ಮಾಡಿ, ಹಚ್ಚುತ್ತಿದ್ದರೆ, ಸುಕ್ಕುಗಳು ಮಾಯವಾಗಿ, ಮುಖ ತೇಜೋಮಯವಾಗಿ ಕಾಣಿಸುತ್ತದೆ. ರೋಸ್‌ವಾಟರ್ ಮಾರ್ಕೆಟ್‌ನಲ್ಲಿ ರೆಡಿಯಾಗಿ ದೊರೆಯುತ್ತದೆ. ಅವುಗಳ ಗುಣಮಟ್ಟ ನೋಡಿ ಕೊಳ್ಳುವುದು ಉತ್ತಮ. ಸಮಯವಿದ್ದಲ್ಲಿ ನೀವೂ ಕೂಡಾ ಮನೆಯಲ್ಲಿಯೇ ರೋಸ್‌ವಾಟರನ್ನು ತಯಾರಿಸಬಹುದು. ಅದಕ್ಕೆ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ರೋಸ್ ವಾಟರ್‌ಗೆ ಬೇಕಾಗಿರುವ ಗುಲಾಬಿ ದಳಗಳನ್ನು ಸೂರ್ಯೋದಯಕ್ಕೆ ಎರಡು ಗಂಟೆಯ ಮುಂಚೆಯೇ ಬಿಡಿಸಿಡಬೇಕು. ಶ್ ಆಗಿರುವ ಗುಲಾಬಿ ದಳಗಳನ್ನು ಹಾಗೂ ಡಿಸ್ಟಿಲ್ ವಾಟರನ್ನು, ಮಿಶ್ರ ಮಾಡಿ, ಒಂದು ಬಾಟಲಿನಲ್ಲಿ ಮುಚ್ಚಳ ಹಾಕಿ ಇಡಿ. ರೋಸ್ ವಾಟರ್ ತಯಾರಿಸಲು ಕೇವಲ ಗುಲಾಬಿ ದಳಗಳನ್ನಷ್ಟೇ ಬಳಸಬೇಕು. ಇದಕ್ಕೆ ಎಲೆ ಅಥವಾ ಗುಲಾಬಿ ಕಾಂಡವನ್ನು ಬಳಸಬಾರದು. ಗುಲಾಬಿದಳಗಳು ಮೂಲ ಬಣ್ಣಗಳನ್ನು ಕಳೆದುಕೊಂಡು ನೀರು ಆವಿಯಾಗುವಾಗ ಇಲ್ಲವೇ ದಳಗಳಲ್ಲಿ ಎಣ್ಣೆಯಂಶ ಬರುವಾಗ, ಕುದಿಸುವುದನ್ನು ನಿಲ್ಲಿಸಬೇಕು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.