ದೂರ ಪ್ರಯಾಣಕ್ಕೆ ಹೊರಡಲೂ ಬೇಕು ಸ್ವಲ್ಪ ತಯಾರಿ..!

Video Description

ದೂರ ಪ್ರಯಾಣಕ್ಕೆ ನಿಮ್ಮ ಸಿದ್ಧತೆ ಹೀಗಿರಲಿ ದೂರ ಪ್ರಯಾಣಕ್ಕೆ ಹೊರಡಲೂ ಬೇಕು ಸ್ವಲ್ಪ ತಯಾರಿ..! ಜೀವನದ ಸುಂದರ ಅನುಭವವನ್ನು ಸಂಪೂರ್ಣವಾಗಿ ಪಡೆಯಬೇಕೆಂದರೆ ಒಬ್ಬ ವ್ಯಕ್ತಿಯು ಜಗತ್ತಿನ ಮೂಲೆ ಮೂಲೆಗಳಿಗೆ ಪ್ರಯಾಣ ಮಾಡಿ ಪಡೆದುಕೊಳ್ಳಬೇಕು ಎಂದು ಹೇಳುತ್ತಾರೆ. ನಾವೆಲ್ಲರೂ ಪ್ರಯಾಣ ಮಾಡುವುದನ್ನು ಇಷ್ಟ ಪಡುತ್ತೇವೆ ಮತ್ತು ನಮಗೆ ಇಷ್ಟವಾದ ಸ್ಥಳಗಳಗೆ ಹೋಗಿ ಅಲ್ಲಿ ಮೋಜು ಮಾಡಲು ಹಾಗೂ ವಿಶ್ರಾಂತಿ ಪಡೆಯಲು ಬಯಸುತ್ತೇವೆ. ನೀವು ಮನುಷ್ಯನ ಜೀವನದ ಸೌಂದರ್ಯತೆಯ ಬಗ್ಗೆ ತಿಳಿಯಲು ನೋಡುತ್ತಿದ್ದಲ್ಲಿ ಮೊಟ್ಟಮೊದಲಿಗೆ ನೀವು ಮಾಡಬೇಕಾದ ವಿಷಯವೆಂದರೆ ಜಗತ್ತಿನ ವಿವಿಧ ಸಂಸ್ಕೃತಿಗಳ ಬಗ್ಗೆ ಅಧ್ಯಯನ ಮಾಡುವುದು. ಇದು ನೀವು ಪೂರ್ಣ ಕಾಲಿಕ ಪ್ರಯಾಣ ಮಾಡುವುದಾದಲ್ಲಿ ಮಾತ್ರ ನೆರವೇರಲು ಸಾಧ್ಯವಾಗುವುದು. ನಿಸ್ಸಂದೇಹವಾಗಿ ಪ್ರಯಾಣವು ಜೀವನವನ್ನು ಆರಾಮದಾಯಕ ಮತ್ತು ಶಾಂತಿಯುತವಾಗುವಂತೆ ಮಾಡುತ್ತದೆ. ನೀವು ನಿಮ್ಮ ಸ್ವರವನ್ನು ಯಾವುದೇ ಅಡೆತಡೆ ಇಲ್ಲದಂತೆ ನೀವೇ ಕೇಳುವ ಅನುಭವವನ್ನು ಪಡೆಯಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ನೀವು ಪ್ರಯಾಣ ಮಾಡುತ್ತಾ ಮಾಡುತ್ತಾ ಪ್ರತೀ ಹೆಜ್ಜೆಯಲ್ಲಿಯೂ ಹೊಸ ವಿಷಯಗಳ ಅನುಭವವನ್ನು ಪಡೆಯುತ್ತಾ ಹೋಗಬಹುದು. ನೀವು ದೂರದೂರಿಗೆ ಪ್ರಯಾಣ ಮಾಡುತ್ತಿದ್ದೀರಿ ಎಂದಾದಲ್ಲಿ ಕೆಲವೊಂದು ಅಂಶಗಳತ್ತ ಮುಖ್ಯ ಗಮನವನ್ನು ಹರಿಸಬೇಕು ಅದೇನು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ. ಎಲ್ಲಿಗೆ ಮತ್ತು ಹೇಗೆ ಹೋಗಬೇಕು ಎಂಬುದನ್ನು ನಿರ್ಧರಿಸಿಕೊಳ್ಳಿ ಇದರಿಂದ ಬಜೆಟ್‌ನಲ್ಲಿ ನಿಮ್ಮ ಪ್ರಯಾಣವನ್ನು ಕೈಗೊಳ್ಳಬಹುದಾಗಿದೆ. ನೀವಿರುವ ಸ್ಥಳದಲ್ಲಿ ಹೋಟೆಲ್ ರೂಮ್ ಮತ್ತು ಇತರ ಸೌಕರ್ಯಗಳ ಬಗ್ಗೆ ಸೂಕ್ತ ಪರಿಶೀಲನೆಯನ್ನು ಮಾಡಿಕೊಳ್ಳಿ. ಎಷ್ಟು ಹಣವನ್ನು ಆ ಸ್ಥಳಕ್ಕಾಗಿ ನೀವು ಖರ್ಚು ಮಾಡಬೇಕು ಎಂಬುದನ್ನು ನೋಡಿ. ಬಜೆಟ್‌ನ ಮೇಲೆ ಗಮನ ಹರಿಸುವುದು ಅತಿ ಮುಖ್ಯವಾಗಿದೆ. ತಂಗುವ ವ್ಯವಸ್ಥೆ, ಸಾರಿಗೆ, ಆಹಾರ, ಇನ್ನಿತರ ಹೆಚ್ಚುವರಿ ಖರ್ಚುಗಳ ಬಗ್ಗೆ ಲೆಕ್ಕ ಮಾಡಿಕೊಳ್ಳಿ. ಪ್ರಯಾಣವನ್ನು ಆರಂಭಿಸುವ ಮುನ್ನ ಸೂಕ್ತ ಪ್ಲಾನಿಂಗ್ ಮಾಡುವುದು ಮುಖ್ಯವಾಗಿದೆ. ಮೊದಲಿಗೆ ಉಳಿತಾಯ ಮಾಡಿ ತದನಂತರ ಪ್ರಯಾಣಕ್ಕೆ ಸಜ್ಜುಗೊಳ್ಳಿ.ಪ್ರಯಾಣದ ನಡುವೆ ಕೂಡ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಧ್ಯಾನ ಯೋಗ ಮೊದಲಾದವನ್ನು ನಿಮ್ಮ ಪ್ರಯಾಣದ ಒಂದು ಭಾಗವನ್ನಾಗಿಸಿಕೊಳ್ಳಿ ಇದರಿಂದ ನಿಮ್ಮ ಮನಸ್ಸಿಗೆ ದೇಹಕ್ಕೆ ಉಲ್ಲಾಸ ದೊರೆಯುತ್ತದೆ ಮತ್ತು ನೀವು ಇನ್ನಷ್ಟು ಸ್ಥಳಗಳ ಅನ್ವೇಷಣೆಯನ್ನು ಉಲ್ಲಾಸದಿಂದ ಮಾಡಬಹುದು. ನಿಮ್ಮನ್ನು ನೀವೇ ಸಿದ್ಧ ಮಾಡಿಕೊಳ್ಳಿ. ಮೊದಲಿಗೆ ನಿಮಗೆ ಅಗತ್ಯವಾಗಿರುವ ಪ್ರಯಾಣ ಪರಿಕರಗಳ ಒಂದು ಪಟ್ಟಿಯನ್ನು ಮಾಡಿಕೊಳ್ಳಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.