ಕೋಕಂ ಜ್ಯೂಸ್ ಮನೆಯಲ್ಲೇ ಮಾಡಿಕೊಳ್ಳಿ..!

Video Description

ಆರೋಗ್ಯಕ್ಕೆ ಹಿತಕಾರಿ ಕೋಕಂ ಜ್ಯೂಸ್ ಕೋಕಂ ಜ್ಯೂಸ್ ಮನೆಯಲ್ಲೇ ಮಾಡಿಕೊಳ್ಳಿ..! ಕೋಕಂ ಹಲವಾರು ಪೌಷ್ಠಿಕಾಂಶಗಳನ್ನು ಒಳಗೊಂಡಿದೆ. ಇದರಲ್ಲಿ ವಿಟಮಿನ್ ಸಿ, ಬಿ ಕಾಂಪ್ಲೆಕ್ಸ್ ಮತ್ತು ಪೊಟ್ಯಾಶಿಯಂ, ಮ್ಯಾಂಗನೀಸ್, ಮೆಗ್ನೀಶಿಯಂ ಮೊದಲಾದ ಖನಿಜಗಳೂ ಇವೆ. ಇವೆಲ್ಲವೂ ಆರೋಗ್ಯವನ್ನು ವೃದ್ಧಿಸುವಲ್ಲಿ ಒಂದಲ್ಲ ಒಂದು ರೀತಿ ಸಹಕರಿಸುತ್ತವೆ. ಕೋಕಂ ಜ್ಯೂಸ್ ಅನ್ನು ಊಟದ ಬಳಿಕ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಒಣಗಿಸಿದ ತಿರುಳು ಸಹಾ ಪೋಷಕಾಂಶಗಳ ಆಗರವಾಗಿದೆ. ಹುಳಿಯಾದ ರುಚಿಗೆ ಇದರಲ್ಲಿರುವ ಮ್ಯಾಲಿಕ್ ಆಮ್ಲ, ಅಸೆಟಿಕ್ ಆಮ್ಲ, ಹೈಡ್ರೋಸಿಟ್ರಿಕ್ ಆಮ್ಲ ಮತ್ತು ಹೈಡ್ರಾಕ್ಸಿ ಸಿಟ್ರಿಕ್ ಆಮ್ಲಗಳು ಕಾರಣವಾಗಿವೆ. ಇವುಗಳ ಉಪಸ್ಥಿತಿಯ ಕಾರಣ ಇದೊಂದು ಉತ್ತಮ ಬ್ಯಾಕ್ಟೀರಿಯಾ ನಿವಾರಕ, ಸೋಂಕು ನಿವಾರಕ, ಉರಿಯೂತ ನಿವಾರಕ ಹಾಗೂ ಕ್ಯಾನ್ಸರ್ ನಿವಾರಕವೂ ಆಗಿದೆ. ನಿಯಮಿತವಾಗಿ ಕೋಕಂ ಶರಬತ್ತು ಕುಡಿಯುತ್ತಾ ಬರುವುದರಿಂದ ಆರೋಗ್ಯಕ್ಕೆ ಹಲವು ರೀತಿಯ ಲಾಭಗಳಿವೆ. ಅಜೀರ್ಣಕ್ಕೆ ಪುನರ್ಪುಳಿ ಜ್ಯೂಸ್ ಉತ್ತಮ ಪರಿಹಾರವಾಗಿದೆ. ಅಜೀರ್ಣದ ಕಾರಣ ಉದ್ಭವವಾಗುವ ಹೊಟ್ಟೆಯಲ್ಲಿ ಉರಿ, ಮಲಬದ್ದತೆ, ಕರುಳಿನ ಹುಣ್ಣು ಮೊದಲಾದ ತೊಂದರೆಗಳು ಇಲ್ಲವಾಗುತ್ತವೆ. ಏಕೆಂದರೆ ಇದರಲ್ಲಿರುವ ಆಮ್ಲಗಳು ಜಠರರಸವನ್ನು ಸಮರ್ಪಕ ಆಮ್ಲೀಯತೆಯಲ್ಲಿಡಲು ಸಹಕರಿಸಿ ಜೀರ್ಣಕ್ರಿಯೆಯನ್ನು ಸುಲಲಿತವಾಗಿಸುತ್ತದೆ. ಅಲ್ಲದೇ ಒಂದು ವೇಳೆ ಇತರ ಆಹಾರಗಳ (ವಿಶೇಷವಾಗಿ ಅಜಿನೋಮೋಟೋ ಇರುವ ಆಹಾರಗಳು) ಕಾರಣ ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಾಗುವುದಿದ್ದರೆ ಆ ಆಮ್ಲೀಯತೆಯ ಪ್ರಖರತೆಯನ್ನು ಕಡಿಮೆಗೊಳಿಸಿ ತೊಂದರೆಯಾಗುವುದರಿಂದ ರಕ್ಷಿಸುತ್ತದೆ. ಕೆಲವರಿಗೆ ಹೂವಿನ ಪರಾಗ, ಧೂಳಿನಿಂದಲೂ ಅಲರ್ಜಿಯುಂಟಾಗಿ ಚರ್ಮದ ಕೆಲವೆಡೆ ಅತೀವ ತುರಿಕೆಯುಂಟಾಗುತ್ತದೆ. ಇದರಿಂದ ಚರ್ಮದ ಮೇಲೆ ಚಿಕ್ಕ ದದ್ದುಗಳು ಎದ್ದು ಕೆರೆತದ ಕಾರಣ ಚರ್ಮದಲ್ಲಿ ಗಾಯಗಳಾಗುತ್ತವೆ. ಇದಕ್ಕೆ ಸಾಮಾನ್ಯವಾಗಿ ದೇಹದಲ್ಲಿ ಆಮ್ಲೀಯತೆ ಹೆಚ್ಚಾಗಿರುವುದೇ ಕಾರಣ. ಪುನರ್ಪುಳಿಯ ಸೇವನೆಯಿಂದ ಈ ಆಮ್ಲೀಯತೆ ನಿವಾರಣೆಯಾಗುವ ಮೂಲಕ ಚರ್ಮದ ಅಲರ್ಜಿ ಕಡಿಮೆಯಾಗಿ ಚರ್ಮದ ತುರಿಕೆಯನ್ನು ನಿಲ್ಲಿಸುತ್ತದೆ. ಅಷ್ಟೇ ಅಲ್ಲ, ಕೆಲವು ಬಗೆಯ ಆಹಾರದ ಅಲರ್ಜಿಗಳನ್ನೂ ನಿವಾರಿಸುತ್ತದೆ. ಇದರಲ್ಲಿರುವ ಹೈಡ್ರಾಕ್ಸಿಲ್ ಸಿಟ್ರಿಕ್ ಆಮ್ಲವನ್ನು ಕರಗಿಸಲು ದೇಹಕ್ಕೆ ಹೆಚ್ಚು ಕಷ್ಟಪಡಬೇಕಾಗುತ್ತದೆ. ಅಂದರೆ ಶೇಖರವಾಗಿದ್ದ ಕೊಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕಾಗಿ ಬರುತ್ತದೆ, ಪರೋಕ್ಷವಾಗಿ ಇದು ತೂಕ ಇಳಿಯಲು ನೆರವಾಗುತ್ತದೆ. ಅಲ್ಲದೇ ಇತರ ಆಮ್ಲಗಳು ದೇಹದ ಚಟುವಟಿಕೆಗೆ ನೆರವಾಗುವ ಮೂಲಕ ಇನ್ನಷ್ಟು ಕೊಬ್ಬು ಕರಗುವಂತೆ ಮಾಡುತ್ತವೆ. ಎರಡೂ ಕಡೆಯ ಹೊಡೆತಗಳಿಂದ ತತ್ತರಿಸಿದ ಕೊಬ್ಬಿನ ಭಂಡಾರ ನಿಧಾನವಾಗಿ ಕರಗತೊಡಗುತ್ತದೆ. ಇದರ ನಿಸರ್ಗದತ್ತ ಕ್ಯಾನ್ಸರ್ ನಿವಾರಕ ಗುಣಕ್ಕೆ ಇದರಲ್ಲಿರುವ garcinol ಎಂಬ ಕಣವೇ ಕಾರಣ. ಕ್ಯಾನ್ಸರ್ ಎಂದರೆ ಯಾವುದೋ ಅಂಗಾಂಶ ಲಂಗು ಲಗಾಮಿಲ್ಲದೇ ಬೆಳೆಯುತ್ತಾ ಹೋಗುವುದು.ಗಾರ್ಸಿನಾಲ್ ಈ ಬೆಳವಣಿಗೆಗೆ ಅಡ್ಡಗಾಲು ಹಾಕಿ ಕ್ಯಾನ್ಸರ್ ಇನ್ನು ಮುಂದುವರೆಯದಂತೆ ತಡೆಯುವ ಮೂಲಕ ಕ್ಯಾನ್ಸರ್ ರೋಗವನ್ನು ಹತ್ತಿಕ್ಕಲು ಸಹಕರಿಸುತ್ತದೆ. ಪುನರ್ಪುಳಿ ಹಣ್ಣು-8, ಸಕ್ಕರೆ-ಕಾಲು ಕಿಲೋ. ವಿಧಾನ: ಕೆಂಪಾದ ಹಾಗೂ ಗಟ್ಟಿಯಿರುವ ಪುನರ್ಪುಳಿ ಹಣ್ಣನ್ನು ಐದು ಲೋಟ ನೀರಿನಲ್ಲಿ ಬೀಜ ಸಮೇತವಾಗಿ ಕಿವುಚಿ. ಬಳಿಕ ಇದಕ್ಕೆ ಸಕ್ಕರೆ ಬೆರೆಸಿ ಕದಡಿ ಜರಡಿ ಹಿಡಿದರೆ ಕುಡಿಯಲು ರೆಡಿ. ಹೀಗೆ ಮಾಡಿದ ಕೋಕಂ ಜ್ಯೂಸ್ ಅನ್ನು ನೀವು ಫ್ರಿಜ್‌ನಲ್ಲಿಟ್ಟು ಆಗಾಗ್ಗೆ ಕುಡಿಯಬಹುದು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.