ಹಲಸಿನ ಹಣ್ಣಿನ ಕಡುಬು ಮಾಡಲು ಗೊತ್ತಾ..?

Video Description

ರುಚಿಯಾದ ಹಲಸಿನ ಹಣ್ಣಿನ ಖಾದ್ಯಗಳು ಹಲಸಿನ ಹಣ್ಣಿನ ಕಡುಬು ಮಾಡಲು ಗೊತ್ತಾ..? ನಿತ್ಯಹರಿದ್ವರ್ಣದ ದೊಡ್ಡ ಪ್ರಮಾಣದ ಮರ. ಇದು ಕರ್ನಾಟಕದ ದಕ್ಷಿಣ ಭಾಗದಲ್ಲಿ ಎಲ್ಲಾ ಕಡೆ, ಮಲೆನಾಡು ಮತ್ತು ಕರಾವಳಿಯ ಕಾಡುಗಳಲ್ಲಿಯೂ ಕೂಡಾ ವ್ಯಾಪಕವಾಗಿ ಬೆಳೆಯುತ್ತದೆ. ಇದು ವರ್ಷಪೂರ್ತಿ ದಟ್ಟನೆಯ ಕಡು ಹಸಿರು ಎಲೆಗಳನ್ನು ಹೊಂದಿದ್ದು, ಎಲೆಗಳು 10 ರಿಂದ 20 ಸೆ.ಮೀ ಉದ್ದವಿರುತ್ತದೆ. ಇದು ಮೊರಸಿಯೆಕುಟುಂಬಕ್ಕೆ ಸೇರಿದ್ದು ಆರ್ಟೋಕಾರ್ಪಸ್ ಇಂಟೆಗ್ರಿಫೋಲಿಯ(Artocarpus heterophyllus?)ವರ್ಗಕ್ಕೆ ಸೇರಿದುದಾಗಿದೆ. ಇದರ ಕಾಯಿ ದೊಡ್ಡದಾಗಿದ್ದು, 5ಕಿ.ಗ್ರಾಂ.ನಿಂದ 40 ಕಿ.ಗ್ರಾಂ.ಗಿಂತಲೂ ಹೆಚ್ಚು ತೂಗುತ್ತದೆ.ಹಣ್ಣಿನಲ್ಲಿ ಒಂದು ರೀತಿಯ ಮೇಣವಿರುತ್ತದೆ.ಕಾಯಿಯ ಹೊರಭಾಗ ಮುಳ್ಳಿನಿಂದ ಕೂಡಿರುತ್ತದೆ.ಹಣ್ಣಿನ ಒಳಗೆ ತುಂಬಾ ತೊಳೆಗಳಿದ್ದು ಸಿಹಿಯಾಗಿರುತ್ತದೆ. ಬಡವರ ಹಣ್ಣು ಎಂದೇ ಖ್ಯಾತಿ ಪಡೆದಿದ್ದ ಹಲಸಿನ ಹಣ್ಣು ಉತ್ಪಾದನೆಯಲ್ಲಿ ಭಾರತ ದೇಶಕ್ಕೆ ಜಗತ್ತಿನಲ್ಲಿಯೇ ದ್ವಿತೀಯ ಸ್ಥಾನವಿದೆ. ದೇಶದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನವಿದೆ. ಅಸ್ಸಾಂ ಮತ್ತು ಕೇರಳ ರಾಜ್ಯಗಳಲ್ಲಿ ಕೂಡ ಗಮನಾರ್ಹ ಪ್ರಮಾಣದಲ್ಲಿ ಹಲಸು ಬೆಳೆಯಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 930 ಹೆಕ್ಟೇರ್‌ ವಿಸ್ತೀರ್ಣದಲ್ಲಿ 40260 ಟನ್‌ ಬೆಳೆ ಉತ್ಪಾದಿಸಲಾಗುತ್ತಿದೆ ಇದರ ಹಣ್ಣಿನಿಂದ ಹಲವಾರು ಖಾದ್ಯಗಳನ್ನು ತಯಾರಿಸುತ್ತಾರೆ.ಹಣ್ಣನ್ನು ಸಂಸ್ಕರಿಸಿ ವಿದೇಶಗಳಿಗೆ ರಫ್ತು ಕೂಡಾ ಮಾಡುತ್ತಾರೆ. ಇದರ ದಾರು ಹಳದಿ ಬಣ್ಣ ಹೊಂದಿದೆ.ಒಣಗಿದಂತೆ ಕಂದು ಬಣ್ಣಕ್ಕೆ ತಿರುಗುತ್ತದೆ. ಸಾದಾರಣ ಹೊಳಪು ಬರುತ್ತದೆ. ಇದರ ಕಟ್ಟಿಗೆಯನ್ನು ಹೋಮ ಹವನಾದಿಗಳಿಗೆ ಉಪಯೋಗಿಸುತ್ತಾರೆ. ಅಲ್ಲದೆ ಇದರಿಂದ ಮನೆಯ ಉಪಯೋಗದ ಫರ್ನಿಚರ್ ತಯಾರು ಮಾಡಲು ಬಳಸುತ್ತಾರೆ. ಹಲಸಿನ ಹಣ್ಣಿನ ಕಡುಬು ಸಾಮಗ್ರಿ: ಅಕ್ಕಿ-2 ಕಪ್‌, ಬೆಲ್ಲ-1 ಕಪ್‌, ಹಲಸಿನ ಹಣ್ಣಿನ ತೊಳೆ-25, ತೆಂಗಿನಕಾಯಿ ತುರಿ-1 ಕಪ್‌, ಸಾಗುವಾನಿ ಎಲೆ ಅಥವಾ ಬಾಳೆ ಎಲೆ-15, ಉಪ್ಪು-ರುಚಿಗೆ ತಕ್ಕಷ್ಟು. ವಿಧಾನ: ಅಕ್ಕಿಯನ್ನು ಒಂದು ಗಂಟೆ ಕಾಲ ನೀರಿನಲ್ಲಿ ನೆನೆಸಿಡಿ. ಹಲಸಿನ ಹಣ್ಣಿನ ತೊಳೆಯನ್ನು ಚಿಕ್ಕದಾಗಿ ಹೆಚ್ಚಿಡಿ. ಅಕ್ಕಿಯನ್ನು ನೀರಿನಿಂದ ಬಸಿದು ಹಲಸಿನ ತೊಳೆ, ಕಾಯಿತುರಿ, ಬೆಲ್ಲ, ಉಪ್ಪು ಹಾಕಿ ನೀರು ಸೇರಿಸದೆ ನುಣ್ಣಗೆ ರುಬ್ಬಿ. ಈ ಹಿಟ್ಟನ್ನು ಸಾಗುವಾನಿ ಎಲೆ ಅಥವಾ ಬಾಳೆ ಎಲೆಯಲ್ಲಿಟ್ಟು ನಾಲ್ಕು ಬದಿಯಲ್ಲಿ ಮಡಚಿ ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಅರ್ಧ ಗಂಟೆ ಬೇಯಿಸಿ. ಬೆಂದ ನಂತರ ಈ ಕಡುಬು ಕೆಂಬಣ್ಣ ಬಂದಿರುತ್ತದೆ. ಇದನ್ನು ತುಪ್ಪ, ಬೆಣ್ಣೆ ಅಥವಾ ಜೇನುತುಪ್ಪದೊಂದಿಗೆ ಸವಿಯಿರಿ. ಬಾಳೆ ಎಲೆಗಳು ಸಿಗದಿದ್ದರೆ ಇಡ್ಲಿ ಕಪ್‌ನಿಂದ ಮಾಡಬಹುದು. ಹಲಸಿನ ಹಣ್ಣಿನ ಪಾಯಸ ಸಾಮಗ್ರಿ: ಹಲಸಿನ ಹಣ್ಣಿನ ತೊಳೆ-6, ಹಾಲು-ಅರ್ಧ ಲೀಟರ್‌, ಬೆಲ್ಲ-1 ಕಪ್‌, ತೆಂಗಿನ ತುರಿ-ಅರ್ಧ ಕಪ್‌, ಚಿರೋಟಿ ರವೆ-2 ಚಮಚ, ತುಪ್ಪ-5 ಚಮಚ, ದ್ರಾಕ್ಷಿ-10, ಗೋಡಂಬಿ-5, ಬಾದಾಮಿ-5, ಏಲಕ್ಕಿ ಪುಡಿ-ಕಾಲು ಚಮಚ, ನೀರು-ಅರ್ಧ ಕಪ್‌. ವಿಧಾನ: ಚಿರೋಟಿ ರವೆಯನ್ನು ಹುರಿದಿಡಿ. ಬಾದಾಮಿ ಮತ್ತು ಗೋಡಂಬಿಯನ್ನು ಚಿಕ್ಕದಾಗಿ ಕತ್ತರಿಸಿ ಬಿಸಿ ತುಪ್ಪದಲ್ಲಿ ಹುರಿದಿಡಿ. ನಂತರ ದ್ರಾಕ್ಷಿಯನ್ನು ಹುರಿದಿಡಿ. ಅದೇ ತುಪ್ಪದಲ್ಲಿ ಚಿಕ್ಕದಾಗಿ ಒಂದೇ ಅಳತೆಯಲ್ಲಿ ಕತ್ತರಿಸಿದ ಹಲಸಿನ ಹಣ್ಣಿನ ತೊಳೆಯನ್ನು ಐದು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಹುರಿದು ನಂತರ ಹಾಲು ಹಾಕಿ ತಿರುವುತ್ತಿರಿ. ಮಿಕ್ಸಿ ಜಾರ್‌ಗೆ ತೆಂಗಿನಕಾಯಿ ತುರಿ ಮತ್ತು ಸ್ವಲ್ಪ ನೀರು ಸೇರಿಸಿ ನುಣ್ಣ ಬೇಯುತ್ತಿರುವ ಮಿಶ್ರಣಕ್ಕೆ ಹಾಕಿ. ನಂತರ ಹುರಿದ ಚಿರೋಟಿ ರವೆ ಮತ್ತು ಬೆಲ್ಲ ಸೇರಿಸಿ ಚೆನ್ನಾಗಿ ತಳ ಹಿಡಿಯದಂತೆ ತಿರುವುತ್ತಿರಬೇಕು. ಪಾಯಸ ಕುದಿ ಬಂದ ನಂತರ ಏಲಕ್ಕಿ ಪುಡಿ ಮತ್ತು ಗೋಡಂಬಿ,ದ್ರಾಕ್ಷಿ, ಬಾದಾಮಿ ಹಾಕಿ ಮಿಶ್ರ ಮಾಡಿ. ಹಲಸಿನ ಹಣ್ಣಿನ ಸೀಕರಣೆ ಸಾಮಗ್ರಿ: ಬೀಜ ತೆಗೆದು ಚಿಕ್ಕದಾಗಿ ಹೆಚ್ಚಿದ ಹಲಸಿನ ಹಣ್ಣಿನ ತೊಳೆ-25, ತೆಂಗಿನ ತುರಿ-1 ಕಪ್‌, ಹಾಲು-1 ಕಪ್‌, ಬೆಲ್ಲದ ಪುಡಿ-ಮುಕ್ಕಾಲು ಕಪ್‌, ಏಲಕ್ಕಿ ಪುಡಿ-ಅರ್ಧ ಟೀ ಚಮಚ, ದ್ರಾಕ್ಷಿ ಮತ್ತು ಗೋಡಂಬಿ-ಸ್ವಲ್ಪ. ವಿಧಾನ: ಹಲಸಿನ ಹಣ್ಣಿನ ತೊಳೆಗಳಿಗೆ ಸ್ವಲ್ಪ ನೀರು ಹಾಕಿ ಬೇಯಿಸಿ. ನಂತರ ಅದಕ್ಕೆ ಬೆಲ್ಲ ಹಾಕಿ ಕರಗಿದ ನಂತರ ಕಾಯಿ ತುರಿ, ಹಾಲು ಹಾಕಿ ಕುದಿಸಿ ಒಲೆಯಿಂದ ಕೆಳಗಿಳಿಸಿ ಏಲಕ್ಕಿ ಪುಡಿ ಮತ್ತು ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಸೇರಿಸಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.