ಟೊಮ್ಯಾಟೋ ಫೇಸ್ ಪ್ಯಾಕ್ ಮಾಡೋದು ಹೇಗೆ ಗೊತ್ತಾ..?

Video Description

ಟೊಮ್ಯಾಟೊ ಫೇಸ್ ಪ್ಯಾಕ್ ಹೀಗೆ ಮಾಡಿ ಟೊಮ್ಯಾಟೋ ಫೇಸ್ ಪ್ಯಾಕ್ ಮಾಡೋದು ಹೇಗೆ ಗೊತ್ತಾ..? ಫೇಸ್ ಮಾಸ್ಕುಗಳು ಮುಖದ ತ್ವಚೆಗೆ ಸಂಬಂಧಿಸಿದ ಎಲ್ಲಾ ಬಗೆಯ ಸಮಸ್ಯೆಗಳಿಗೂ ಸುಲಭ ಪರಿಹಾರವಾಗಿದೆ. ಅದರಲ್ಲಿಯೂ ಮನೆಯಲ್ಲಿಯೇ ಸುಲಭವಾಗಿ ತಯಾರಿಸುವ ಫೇಸ್ ಪ್ಯಾಕುಗಳು ರಾಸಾಯನಿಕಗಳಿಂದಲೂ ಮುಕ್ತವಾಗಿರುತ್ತವೆ. ಈ ಬಗೆಯಲ್ಲಿ ಮನೆಯಲ್ಲಿ ತಯಾರಿಸಿದ ಫೇಸ್ ಪ್ಯಾಕ್ ಗಳು ಬ್ಯೂಟಿ ಪಾರ್ಲರುಗಳಲ್ಲಿ ನೀಡುವಂತಹ ಹೊಳಪನ್ನೇ ನಿಮ್ಮ ಮುಖಕ್ಕೆ ನೀಡಿ ಕನಿಷ್ಠವೆಂದರೂ ಒಂದು ವಾರಗಳವರೆಗೆ ಪರಿಣಾಮಕಾರಿಯಾದ ಹೊಳಪನ್ನು ನೀಡುತ್ತದೆ ಮತ್ತು ತ್ವಚೆಯ ಮೇಲೆ ಯಾವುದೇ ಅಡ್ಡಪರಿಣಾಮಗಳನ್ನು ಬೀರುವುದಿಲ್ಲ ಎನ್ನಲಾಗುತ್ತದೆ. ತ್ವಚೆಯ ಹೊಳಪನ್ನು ಹೆಚ್ಚಿಸುವಲ್ಲಿ, ತ್ವಚೆಯನ್ನು ತೇವಯುತವಾಗಿರಿಸುವಲ್ಲಿ ಮತ್ತು ನಿಮ್ಮ ಮುಖದ ತ್ವಚೆಯ ಅಂದವನ್ನು ಹೆಚ್ಚಿಸುವುದು ಫೇಸ್ ಪ್ಯಾಕ್ ಗಳ ಬಳಕೆಯ ಆದ್ಯ ಉದ್ದೇಶವಾಗಿದೆ. ಮುಖದ ತ್ವಚೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೂ ಸುಲಭ ಪರಿಹಾರ ಒದಗಿಸುವುದು ಫೇಸ್ ಪ್ಯಾಕುಗಳು. ಇವುಗಳನ್ನು ಬಳಸುವುದರ ಮೂಲಕ ಚರ್ಮದ ಸಮಸ್ಯೆಗಳಿಂದ ನಮ್ಮ ಮುಖವನ್ನು ದೂರವಿರಿಸಿಕೊಳ್ಳಬಹುದು ಮತ್ತು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲೂ ಬಹುದು. ಅಂಗಡಿಗಳಿಂದ ಕೊಂಡುತಂದು ಬಳಸುವ ಫೇಸ್ ಪ್ಯಾಕ್ ಗಳು ನಿಮ್ಮ ತ್ವಚೆಯ ಸಮಸ್ಯೆಗಳನ್ನು ಪರಿಹರಿಸುವುವು. ಆದರೆ ಅವುಗಳು ಕೂಡ ನಿಮಗೆ ದುಬಾರಿಯೆನಿಸುತ್ತವೆ. ಮಹಿಳೆಯರು ತಮ್ಮ ಅಡುಗೆ ಮನೆಯಲ್ಲಿ ದಿನನಿತ್ಯ ಬಳಸುವ ಸಾಮಗ್ರಿಗಳನ್ನೇ ಬಳಸಿಕೊಂಡು ವಿವಿಧ ಸಮಸ್ಯೆಗಳನ್ನು ಪರಿಹರಿಸಬಲ್ಲ ಪೇಸ್ ಪ್ಯಾಕ್ ಗಳನ್ನು ತಯಾರಿಸಿಕೊಳ್ಳಬಹುದಾದ ಬಗೆಯನ್ನು ತಿಳಿಸಲಾಗುತ್ತದೆ ಅಷ್ಟೇ ಅಲ್ಲದೆ ಈ ಕೆಳಗಿನ ಕೆಲವು ಫೇಸ್ ಪ್ಯಾಕ್ ಗಳು ನಿಮಗೆ ಪಾರ್ಲರ್ ಚಿಕಿತ್ಸೆಯ ಪರಿಣಾಮವನ್ನೇ ಕೊಡುವಷ್ಟು ಪರಿಣಾಮಕಾರಿಯಾಗಿರುತ್ತವೆ. ಅಲ್ಲದೆ ಬ್ಯೂಸಿಯಾಗಿರುವ ಮಹಿಳೆಯರು ತಾಸುಗಟ್ಟಲೆ ಪಾರಲರುಗಳಲ್ಲಿ ಸಮಯವನ್ನು ವ್ಯಯಿಸದೆ ಮನೆಯಲ್ಲಿಯೇ ಫೇಸ್ ಪ್ಯಾಕುಗಳನ್ನು ತಯಾರಿಸಿ ಬಳಸುವುದರ ಮೂಲಕ ತಮ್ಮ ಅಮೂಲ್ಯವಾದ ಸಮಯವನ್ನೂ ಕೂಡ ಉಳಿಸಬಹುದಾಗಿದೆ. ಮೊಸರು ಮತ್ತು ಟೊಮ್ಯಾಟೋ ಈ ಎರಡೂ ಸಾಮಗ್ರಿಗಳೂ ಎಲ್ಲರ ಮನೆಯ ಫ್ರಿಜ್ಜಿನಲ್ಲಿರುವ ವಸ್ತುಗಳು. ಹಾಗಾಗಿ ಸುಲಭವಾಗಿ ಲಭ್ಯವಿರುವಂತವುಗಳು. ಎರಡು ಟೀ ಚಮಚ ಟೊಮ್ಯಾಟೋ ರಸಕ್ಕೆ ಮೂರು ಟೀ ಚಮಚ ಮೊಸರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ನಿಮ್ಮ ಮುಖದ ಎಲ್ಲಾ ಭಾಗಗಳಿಗೂ ಕೂಡ ಸಮವಾಗಿ ಲೇಪಿಸಿಕೊಳ್ಳಿ. ಈ ಬಗೆಯ ಮಾಸ್ಕ್ ನಿಮ್ಮ ಮುಖಕ್ಕೆ ಕಾಂತಿಯನ್ನು ಕೊಡುವಲ್ಲಿ ಬಹಳ ಪ್ರಯೋಜನಕಾರಿಯಾಗಿರುತ್ತದೆ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ಮತ್ತು ಟೊಮ್ಯಾಟೊದಲ್ಲಿರುವ ಸಿಟ್ರಿಕ್ ಆಸಿಡ್ ಎರಡೂ ಬಗೆಯ ಆಸಿಡುಗಳೂ ಕೂಡ ಮುಖದ ಕಾಂತಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಮೊಸರು ತ್ವಚೆಯನ್ನು ತಂಪುಗೊಳಿಸುತ್ತದೆ ಮತ್ತು ಆರ್ದ್ರತೆಯನ್ನು ಹೆಚ್ಚಿಸುತ್ತದೆ. ಈ ಮೂಲಕ ಕಳೆಗುಂದಿದ ತ್ವಚೆ, ಮಂದವಾದ ತ್ವಚೆಗಳಂತಹಾ ಸಮಸ್ಯೆಗಳನ್ನು ಗಣನೀಯ ಪ್ರಮಾಣದಲ್ಲಿ ಇಳಿಸುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.