ಹೆಲ್ತಿ ಸಲಾಡ್ಸ್ ಮಾಡೋದು ಹೇಗೆ ಗೊತ್ತಾ..?

Video Description

ಹೆಲ್ತಿ ಸಲಾಡ್ಸ್ ಮಾಡೋದು ಹೇಗೆ ಗೊತ್ತಾ..? ಸಲಾಡ್ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಐಸ್ ಕ್ರೀಮ್ ಪಾರ್ಲರ್ ನಲ್ಲಿ ಸಿಗುವ ಬಗೆಬಗೆಯ ಫ್ರೂಟ್ ಸಲಾಡ್, ಬೇಸಿಗೆ ಕಾಲದಲ್ಲಿ ಇದು ದೇಹವನ್ನು ತಂಪಾಗಿಸುತ್ತದೆ. ಇನ್ನು ಕೇವಲ ಹಣ್ಣುಗಳಿಂದ ಮಾತ್ರವಲ್ಲ ತರಕಾರಿ, ಕಾಳು ಗಳಿಂದಲೂ ಕೂಡಾ ರುಚಿರುಚಿಯಾದ ಸಲಾಡ್ ಗಳನ್ನು ಮನೆಯಲ್ಲೇ ಮಾಡಿಕೊಳ್ಳಬಹುದು. ಇದು ಆರೋಗ್ಯಕ್ಕೂ ಕೂಡ ತುಂಬಾನೇ ಉತ್ತಮ, ಇವು ನಾಲಿಗೆಯ ರುಚಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಭರಪೂರ ಪ್ರೋಟೀನ್ ಹಾಗೂ ವಿಟಮಿನ್ಸ್ ಅನ್ನ ಪೂರೈಸುತ್ತವೆ ನಿಶ್ಯಕ್ತಿಯನ್ನು ದೂರ ಮಾಡುತ್ತವೆ. ಅಂದಹಾಗೆ ಸಲಾಡ್ ಮಾಡುವುದು ತುಂಬಾನೇ ಸುಲಭ ಕೆಲವು ಟ್ರಿಕ್ಸ್ ಬಳಸಿದರೆ ರುಚಿ ಮತ್ತಷ್ಟು ಹೆಚ್ಚಾಗುತ್ತದೆ. ಇದು ನಿಮ್ಮ ಆರೋಗ್ಯವನ್ನು ವೃದ್ಧಿಸುವುದಲ್ಲದೆ, ನಿಮ್ಮ ಸೌಂದರ್ಯವನ್ನು ಕೂಡ ಕಾಪಾಡುತ್ತೆ. ಮೊದಲಿಗೆ ಹಣ್ಣುಗಳ ಸಲಾಡ್ ಹೇಗ್ ಮಾಡೋದು ಅಂತ ನೋಡೋಣ. ಸಣ್ಣಗೆ ಹೆಚ್ಚಿದ ಸೇಬು, ಕಿತ್ತಳೆ, ಸಪೋಟ, ಬಾಳೆಹಣ್ಣುಗಳನ್ನು ತೆಗೆದುಕೊಳ್ಳಿ, ಎರಡರಿಂದ ಮೂರು ಕಪ್ ಆಗುವಷ್ಟು ಹಣ್ಣುಗಳು ಇರಲಿ. ಇದಕ್ಕೆ ಅರ್ಧ ಕಪ್ ನಷ್ಟು ಬಿಡಿಸಿದ ದಾಳಿಂಬೆಯನ್ನು ಸೇರಿಸಿಕೊಳ್ಳಿ. ಜೊತೆಗೆ 3ರಿಂದ 4 ಚಮಚ ಒಣದ್ರಾಕ್ಷಿ, 2 ಸ್ಪೂನ್ ಬಾದಾಮಿ, ಗೋಡಂಬಿ 2 ಸ್ಪೂನ್ ನಷ್ಟು, ಜೇನುತುಪ್ಪ, ಚಿಟಿಕಿ ಬ್ಲಾಕ್ ಪೆಪ್ಪರ್ ಪೌಡರ್ ತೆಗೆದುಕೊಳ್ಳಿ ಚೆನ್ನಾಗಿ ಮಿಕ್ಸ್ ಮಾಡಿ. ಇಲ್ಲಿಗೆ ಫ್ರೂಟ್ ಸಲಾಡ್ ರೆಡಿ ಟು ಇಟ್... ಇನ್ನು ತರಕಾರಿ ಸಲಾಡ್ ಹೇಗ್ ಮಾಡೋದು ಅಂತ ತಿಳಿಯೋಣ. ಮೊದಲಿಗೆ 1 ಈರುಳ್ಳಿ, 1 ಟೊಮೆಟೊ, 1 ಕ್ಯಾರೆಟ್, 1 ಬೀಟ್ ರೂಟ್, ಒಂದು ಸೌತೆಕಾಯಿ, 1 ಮೂಲಂಗಿ ತೆಗೆದುಕೊಂಡು ನಿಮಗೆ ಇಷ್ಟವಾದ ಆಕಾರಕ್ಕೆ ಕತ್ತರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಉಪ್ಪು, 1 ಟೇಬಲ್ ಸ್ಪೂನ್ ನಷ್ಟು ಕಾಳುಮೆಣಸಿನ ಪುಡಿ, ಒಂದು ಸ್ಪೂನ್ ನಷ್ಟು ನಿಂಬೆ ರಸ ಹಾಕಿ ಮಿಕ್ಸ್ ಮಾಡಿ. ಬೇಕು ಅಂದರೆ ಕಾಯಿತುರಿಯನ್ನು ಮಿಕ್ಸ್ ಮಾಡಬಹುದು. ಕಡೆಯಲಿ ಕೊತ್ತಂಬರಿಸೊಪ್ಪನ್ನು ಮಿಕ್ಸ್ ಮಾಡಿ ಇಲ್ಲಿಗೆ ತರಕಾರಿ ಸಲಾಡ್ ರೆಡಿ...

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.