ನಿಮ್ಮ ಮಗು ಹೈಪರ್ ಆಕ್ಟಿವ್ ಹೌದೇ..??

Video Description

ಮಗು ಹೈಪರ್ ಆಕ್ಟೀವ್ ಆಗಿದ್ದರೆ ಏಕೆ ಚಿಂತಿಸಬೇಕು? ನಿಮ್ಮ ಮಗು ಹೈಪರ್ ಆಕ್ಟಿವ್ ಹೌದೇ..?? ಮಕ್ಕಳು ಚಟುವಟಿಕೆಯಿಂದ ಕೂಡಿರಬೇಕು ಎಂದೇ ಹೆಚ್ಚಿನ ಹೆತ್ತವರು ಬಯಸುತ್ತಾರೆ. ಕ್ರೀಡೆ, ವಿದ್ಯೆ, ಶಾಲಾ ಚಟುವಟಿಕೆ ಹೀಗೆ ಪ್ರತಿಯೊಂದು ರಂಗದಲ್ಲಿ ಕೂಡ ನಿಮ್ಮ ಮಗು ಹೆಚ್ಚು ಉತ್ಸಾಹದಿಂದ ಪಾಲ್ಗೊಳ್ಳುತ್ತಿದೆ ಎಂದರೆ ಹೆತ್ತವರು ಮಗುವಿನ ಕುರಿತು ಹೆಮ್ಮೆಯಿಂದ ಇತರರಲ್ಲಿ ಹೇಳಿಕೊಳ್ಳುತ್ತಾರೆ ಆದರೆ ಅತಿಯಾಗಿ ಉತ್ಸಾಹದಿಂದಿರುವುದು ಕೂಡ ನಿಮ್ಮ ಮಗುವಿಗೆ ಇನ್ನಿತರೆ ಸಮಸ್ಯೆಗಳನ್ನು ತಂದೊಡ್ಡಬಹುದು ಎಂಬುದು ನಿಮಗೆ ಗೊತ್ತೇ? ಹೌದು ನಿಮ್ಮ ಮಗುವಿಗೆ ಸಿಗಬೇಕಾದ ಗಮನ ಇಲ್ಲವೇ ಅದು ನಿರೀಕ್ಷೆ ಮಾಡಿದಷ್ಟು ಗಮನ ಕಾಳಜಿ ಮಗುವಿಗೆ ನೀಡದೇ ಇದ್ದಲ್ಲಿ ಇದೊಂದು ಕಾಯಿಲೆಯಾಗಿ ಮಾರ್ಪಡುತ್ತದೆ. ಇದನ್ನು ಎಡಿಎಚ್‌ಡಿ ಎಂದು ವೈದ್ಯಕೀಯ ಲೋಕದಲ್ಲಿ ಕರೆಯುತ್ತಾರೆ. ಇದೊಂದು ನ್ಯೂರೋ ಡೆವಲಪ್‌ಮೆಂಟ್ ಕಾಯಿಲೆಯಾಗಿದೆ. ಇದು ಶಾಲೆಯಲ್ಲಿ ಮಗುವಿನ ಶೈಕ್ಷಣಿಕ ಚಟುವಟಿಕೆಯ ಮೇಲೆ ಅವರ ಸಾಧನೆಯ ಮೇಲೆ ಅಡ್ಡ ಪರಿಣಾಮವನ್ನುಂಟು ಮಾಡಬಹುದು. ಈ ರೋಗಲಕ್ಷಣಗಳನ್ನು ಅತ್ಯಂತ ಎಳೆಯದರಲ್ಲೇ ಕಂಡುಹಿಡಿಯಬಹುದು. ಏಳರ ಹರೆಯದಲ್ಲೇ ಈ ರೋಗ/ಕಾಯಿಲೆ ಮಗುವಿನ ಮೇಲೆ ಪರಿಣಾಮ ಬೀರಬಹುದು. ಹೈಪರ್ ಆಕ್ಟೀವ್ ಇರುವ ಮಕ್ಕಳಿಗೆ ತಾಳ್ಮೆ, ಸಮಾಧಾನ ತುಂಬಾ ಕಡಿಮೆ ಇರುತ್ತದೆ. ಅವರು ತಮ್ಮ ಮುಂದಿರುವ ಕೆಲಸಗಳನ್ನು ಚಾಣಾಕ್ಷತನದಿಂದ ಮುಗಿಸಬಲ್ಲರು ಅಂತೆಯೇ ಇನ್ನೊಂದು ಕೆಲಸವನ್ನು ಬಹುಬೇಗನೇ ನಿರೀಕ್ಷಿಸುವ ಮನೋಭಾವ ಇವರದಾಗಿರುತ್ತದೆ. ಕಾಯುವುದು ಎಂದರೆ ಇವರಿಗೆ ಇಷ್ಟವಿರುವುದಿಲ್ಲ. ಎಲ್ಲವನ್ನು ಚಕಚಕನೆ ಮುಗಿಸುವ ಚಾತಿ ಇವರಲ್ಲಿರುತ್ತದೆ. ಈ ಕಾಯಿಲೆ ಇರುವ ಮಕ್ಕಳು ತಮ್ಮ ಭಾವನೆಗಳನ್ನು ನಿಯಂತ್ರಿಸುವಲ್ಲಿ ತೊಂದರೆ ಅನುಭವಿಸುತ್ತಾರೆ. ಸೂಕ್ತವಲ್ಲದ ಸಮಯದಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಅವರಿಗೆ ಶಾಂತವಾಗಿ ವಿರಾಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಎಂದರೆ ಕಿರಿಕಿರಿ ಎಂದೆನಿಸುತ್ತದೆ. ಈ ರೀತಿಯ ಮಕ್ಕಳಲ್ಲಿ ಕಂಡುಬರುವ ಇನ್ನೊಂದು ಅಂಶವೆಂದರೆ ಒಂದು ಕೆಲಸವನ್ನು ಮುಗಿಸುವ ಮುನ್ನವೇ ಇನ್ನೊಂದು ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು, ಇವರ ಗಮನ ಆಗಾಗ್ಗೆ ಬದಲಾಗುತ್ತಲೇ ಇರುತ್ತದೆ. ಯಾವುದೇ ಕೆಲಸವನ್ನು ಇವರಿಗೆ ಪೂರ್ಣಗೊಳಿಸುವ ಸಾಮರ್ಥ್ಯ ಇರುವುದಿಲ್ಲ ಇವರು ಯಾವಾಗಲೂ ತಮ್ಮದೇ ಲೋಕವನ್ನು ನಿರ್ಮಿಸಿಕೊಂಡು ಅದರಲ್ಲಿ ಕಾಲಕಳೆಯುತ್ತಿರುತ್ತಾರೆ. ತಮ್ಮ ಸುತ್ತಮುತ್ತಲೂ ಏನು ನಡೆಯುತ್ತಿದೆ ಎಂಬುದು ಇವರ ಗಮನದಲ್ಲಿ ಇರುವುದಿಲ್ಲ ಈ ಕಾಯಿಲೆ ಇರುವ ಮಕ್ಕಳು ಒಮ್ಮೊಮ್ಮೆ ತರಗತಿಗಳಲ್ಲಿ ಗಮನ ಹರಿಸಲು ತುಂಬಾ ಕಷ್ಟಪಡುತ್ತಾರೆ. ಅವರು ಮರೆಗುಳಿಗಳಾಗಿರಬಹುದು. ನಿಮ್ಮ ಮಗು ಈ ಕಾಯಿಲೆಯಿಂದ ಬಳಲುತ್ತಿದೆ ಎಂದರೆ ಮನಃಶಾಸ್ತ್ರಜ್ಞರನ್ನು ಕಂಡು ಅವರ ಸಲಹೆಗಳನ್ನು ಪಡೆಯುವುದು ಒಳಿತು. ನಿಮ್ಮ ಮಗು ಎದುರಿಸುವ ಎಲ್ಲಾ ಸಮಸ್ಯೆಗಳನ್ನು ಅವರಲ್ಲಿ ಮನಬಿಚ್ಚಿ ಹೇಳಿ ಮತ್ತು ಮಕ್ಕಳನ್ನು ವೈದ್ಯರ ಬಳಿ ಕೊಂಡೊಯ್ಯಿರಿ. ಯಾವುದೇ ಮುಜುಗರಕ್ಕೆ ಒಳಗಾಗದಿರಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.