ಮೊಡವೆ ಕಲೆಗಳನ್ನ ಹೋಗಲಾಡಿಸೋದು ಹೇಗೆ..?

Video Description

ಮೊಡವೆ ಕಲೆಗಳನ್ನ ಹೋಗಲಾಡಿಸೋದು ಹೇಗೆ..? ಹೆಣ್ಣುಮಕ್ಕಳಿಗೆ ಸೌಂದರ್ಯವೇ ಪ್ರಪಂಚ, ಆ ಪ್ರಪಂಚದಲ್ಲಿ ಸ್ವಲ್ಪ ಏರುಪೇರಾದರೂ ಮನಸ್ಸಿಗೆ ನೆಮ್ಮದಿ ಇರೋಲ್ಲ. ಹೌದು ಹೆಣ್ಣುಮಕ್ಕಳು ಅಂದ್ರೆ ಸೌಂದರ್ಯದ ಗಣಿ ಅಂತ ಹೇಳಬಹುದು. ಸೌಂದರ್ಯದ ಅಂದ ಕೂಡಲೇ ಪಟ್ಟಂತ ನೆನಪಾಗುವುದು ಮುಖದ ಅಂದ ಚಂದ. ಮುಖದ ಅಂದಕ್ಕೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಸಹಿಸುವುದುಕೆ ಸಾಧ್ಯಾನಾ..? ಅಂತದ್ರಲ್ಲಿ ಮುಖದ ಮೇಲೆನ ಮೊಡವೆಗಳ ಕಲೆ ಹೆಣ್ಣು ಮಕ್ಕಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಂತಹ ತಲೆನೋವಿನಿಂದ ಹೊರಬರುವುದು ಹೇಗೆ..? ಅಂತ ಯೋಚಿಸುತ್ತಿದ್ದರೆ ಇಲ್ಲಿದೆ ಕೇಳಿ ಸಿಂಪಲ್ ಟಿಪ್ಸ್ ಗಳು, ಟಿಪ್ಸ್ ನಂಬರ್ ವನ್ 2ಸ್ಪೂನ್ ನಷ್ಟು ತೆಂಗಿನ ಎಣ್ಣೆ, ಒಂದು ಸ್ಪೂನ್ ಸಕ್ಕರೆ, ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಮುಖದ ಮೇಲೆ ಹತ್ತು ನಿಮಿಷ ರಾತ್ರಿ ಮಲಗುವ ಮುಂಚೆ ಮಸಾಜ್ ಮಾಡಬೇಕು. ಮಸಾಜ್ ಆದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಫೇಸ್ವಾಶ್ ಮಾಡಿಕೊಂಡು ಮುಖದ ಮೇಲೆ ಯಾವುದೇ ಕ್ರೀಮ್ ಅಪ್ಲೈ ಮಾಡದೆ ಹಾಗೆ ಮಲಗಬೇಕು, ಹೀಗೆ ಮಾಡುತ್ತಾ ಬಂದಲ್ಲಿ ನಿಮ್ಮ ಮುಖದ ಮೇಲಿರುವ ಮೊಡವೆ ಕಲೆಗಳು ಕಾಲಕ್ರಮೇಣ ಮಾಯವಾಗುತ್ತೆ. ಎರಡನೆಯ ಟಿಪ್ಸ್ ನೋಡೋಣ ಎರಡು ಚಮಚ ಓಟ್ಸ್ ನೀರಿನಲ್ಲಿ ನೆನೆಸಿಡಿ. ಇದಕ್ಕೆ ಒಂದು ಸ್ಪೂನ್ ನಷ್ಟು ಜೇನುತುಪ್ಪ, ಒಂದು ಸ್ಪೂನ್ ತೆಂಗಿನ ಎಣ್ಣೆ, ಹಾಕಿ ಫೇಸ್ ಪ್ಯಾಕ್ ಆಗಿ ಸಿದ್ಧಪಡಿಸಿ. ಈ ಫೇಸ್ ಪ್ಯಾಕ್ ಅನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಹಾಕುತ್ತಾ ಬನ್ನಿ ನಿಮ್ಮ ಮುಖದ ಮೇಲಿರುವ ಕಲೆಗಳು ಮಾಯವಾಗುತ್ತವೆ. ಇನ್ನೂ ಸೌತೆಕಾಯಿಯ ಸ್ಲೈಸ್ ಗಳನ್ನು ಮೊಡವೆ ಕಲೆಗಳಿರುವ ಜಾಗಕ್ಕೆ ಇಡುವುದರಿಂದ ಕೂಡ ಮೊಡವೆ ಕಲೆಗಳು ದೂರವಾಗುತ್ತೆ. ಹಾಗೂ ನಿಂಬೆಹಣ್ಣಿನ ರಸವನ್ನು ಮೊಡವೆ ಕಲೆಗಳಿರುವ ಜಾಗಕ್ಕೆ ಲೇಪಿಸುವುದರಿಂದ ಕೂಡ ಮೊಡವೆ ಕಲೆಗಳು ಕಾಣದಂತೆ ಆಗುತ್ತೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.