ಶೂಗಳನ್ನು ಕ್ಲೀನ್ ಮಾಡಿಕೊಳ್ಳೋದು ಈಗ ಸುಲಭ..!

Video Description

ನಿತ್ಯ ಬಳಸುವ ಶೂಗಳನ್ನು ಸ್ವಚ್ಛಮಾಡಿಕೊಳ್ಳೋದು ಹೇಗೆ? ಶೂಗಳನ್ನು ಕ್ಲೀನ್ ಮಾಡಿಕೊಳ್ಳೋದು ಈಗ ಸುಲಭ..! ದಿನ ನಿತ್ಯ ಆಫೀಸ್. ಸ್ಕೂಲ್. ಎಂದು ಹೊರಗೆ ಹೋಗುವವರು ಒಂದು ಶಿಸ್ತು ಕಾಪಾಡುವುದಕ್ಕಾದರು ಶೂ ಗಳನ್ನು ಧರಿಸಬೇಕು. ಆದರೆ ಶೂ ಗಳ ಬೆಲೆ ಕೂಡ ದುಪ್ಪಟ್ಟು.ಆದರೆ ಇವುಗಳ ಬಾಳಿಕೆ ತುಂಬಾ ದಿನಗಳು ಬರುವುದಿಲ್ಲ. ಜೊತೆಗೆ ಚಪ್ಪಲಿಯಷ್ಟು ಸುಲಭವಾಗಿ ಶೂಗಳನ್ನು ಕ್ಲೀನಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಶೂಗಳು ಮಿರ ಮಿರ ಮಿನುಗುತ್ತಿದ್ದಾರೆ ನೋಡಲು ಚಂದ ಜೊತೆಗೆ ಆಕರ್ಷಕ ಲುಕ್. ಅಫೀಸಿಯಲ್ ಲುಕ್ ಬರುವುದು. ಆದರೆ ಕೆಲವು ಶೂ ಗಳನ್ನು ತೊಳೆಯಲು ಆಗುವುದಿಲ್ಲ. ಕೆಲವೊಂದು ಶೂ ನೀರಿನಲ್ಲಿ ತೊಳೆಯಬಹುದು. ತೊಳೆಯಲು ಸಾಧ್ಯವಾಗದ ಶೂಗಳನ್ನು ಕೆಲವು ಸಲ ಹಾಕಿದ ತಕ್ಷಣ ಮತ್ತೆ ಅವುಗಳನ್ನು ಹಾಕುವುದಕ್ಕೆ ಆಗುವುದಿಲ್ಲ ಅಷ್ಟು ಕೊಳಕು ಆಗಿರುತ್ತವೆ. ಆದ್ದರಿಂದ ತೊಳೆಯಲು ಸಾಧ್ಯವಿಲ್ಲದ ಲೆದರ್ ಶೂ ಗಳನ್ನು ಹೊಸ ಶೂ ಗಳ ರೀತಿಯಲ್ಲಿ ಕಾಣುವಂತೆ ಮಾಡುವುದು ಹಾಗೂ ಹೆಚ್ಚು ದಿನ ಬಾಳಿಕೆ ಬರುವಂತೆ ನೋಡಿಕೊಳ್ಳುವುದು ಹೇಗೆ ಎಂದು ತಿಳಿಯೋಣ. ಲೆಧರ್ ಶೂ ಗಳನ್ನು ಸಿಕ್ಕ ಸಿಕ್ಕ ಜಾಗದಲ್ಲೋ ಬಿಡಬಾರದು ಅವುಗಳನ್ನು ಒಂದು ನಿಗದಿತ ಸ್ಥಳದಲ್ಲಿ ಸ್ವಚ್ಛವಾಗಿ. ಗಾಳಿ ಆಡುವ ಜಾಗಗಳಲ್ಲಿ ಇಡಬೇಕು. ಲೆದರ್ ಶೂ ಗಳಿಗೆ ಗಾಳಿ ಮುಖ್ಯ. ಶೂ ಗಳನ್ನು ನೀರಿನಲ್ಲಿ ಮುಳುಗಿಸಬಾರದು. ಮೊದಲು ಶೂ ಲೇಸ್ ಅನ್ನು ಬಿಚ್ಚಿ ಅದನ್ನು ಮೃದುವಾದ ಬಟ್ಟೆಯಿಂದ ಒರೆಸಬೇಕು. ನಂತರ ಶೂಅನ್ನು ಒರೆಸಬೇಕು. ಪ್ರತೀಬಾರಿ ಶೂ ಹಾಕುವಾಗ ಮತ್ತು ಬಿಚ್ಚಿ ಇಡುವಾಗ ಈ ರೀತಿಯಲ್ಲಿ ಅದರ ದೂಳು ಒರೆಸಿ ಇಡಬೇಕು. ಶೂ ಗಳನ್ನು ಒರೆಸುವಾಗ ಒಂದು ಬಟ್ಟೆಗೆ ಸ್ವಲ್ಪ ನೀರು ಹಾಕಿ ಉಪ್ಪು ಹಾಕಿ ಚೆನ್ನಾಗಿ ಒರೆಸಿ ಒಣಗಲು ಇಡಬೇಕು. ಹೀಗೆ ಒಣಗಲು ಇಡುವಾಗ ತುಂಬಾ ಬಿಸಿಲಿನಲ್ಲಿ ಇಡಬಾರದು. ಹೀಗೆ ಇಟ್ಟರೆ ಶೂನಲ್ಲಿ ಬಿರುಕು ಕಂಡು ಬರುತ್ತದೆ. ಲೆದರ್ ಶೂ ಅನ್ನು ಅಪರೂಪಕ್ಕೆ ಬಳಸುವುದಾದರೆ ತಿಂಗಳಿಗೊಮ್ಮೆ ಒರೆಸಿದರೂ ಸಾಕು. ಲೆದರ್ ಶೂಗೆ ಸ್ವಲ್ಪ ತೆಂಗಿನೆಣ್ಣೆ ಹಾಕಿ ಕೂಡ ಒರೆಸಬಹುದು. ಹೀಗೆ ಮಾಡಿದ್ರೆ ಶೂ ಮಿಂಚುತ್ತೆ. ಶೂ ಗಳನ್ನು ಹೆಚ್ಚು ಗಾಳಿ. ಬೆಳಕು ಬರುವ ಜಾಗಗಳಲ್ಲಿ ಇಡಬೇಕು.ಕೆರಮ್ ಪೌಡರ್ ಅನ್ನು ಶೂ ಒಳಗೆ ಹಾಕಿದರೆ ಶೂ ವಾಸನೆ ಬರುವುದಿಲ್ಲ.ಪ್ರತಿ ದಿನ ಶೂ ನ ಸಾಕ್ಸ್ ಗಳನ್ನು ಬದಲಿಸುತ್ತ ಇರಬೇಕು ಆಗ ಶೂ ವಾಸನೆ ಬರುವುದಿಲ್ಲ. ಹೀಗೆ ನಿಮ್ಮ ನಿತ್ಯ ಬಳಕೆಯ ಶೂ ಗಳನ್ನು ಹೆಚ್ಚು ಸ್ವಚ್ಛವಾಗಿ ಹಾಗೂ ಹೆಚ್ಚು ಬಾಳಕೆ ಬರುವ ಹಾಗೆ ನೋಡಿಕೊಳ್ಳಬಹುದು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.