ಆಭರಣಗಳನ್ನು ಕ್ಲೀನ್ ಮಾಡೋದು ಹೇಗೆ.

Video Description

ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸುವ ಸುಲಭ ವಿಧಾನಗಳು ಆಭರಣಗಳನ್ನು ಕ್ಲೀನ್ ಮಾಡೋದು ಹೇಗೆ. 'ಭಾರತದಲ್ಲಿ ಬಂಗಾರಕ್ಕೆ ನೀಡುವಷ್ಟು ಮಹತ್ವ ಬೇರೆ ಯಾವುದೇ ಲೋಹಕ್ಕೂ ನೀಡಲಾಗುವುದಿಲ್ಲ. ಹಳದಿ ಲೋಹವನ್ನು ಭಾರತೀಯರು ತುಂಬಾ ಪವಿತ್ರವೆಂದು ಭಾವಿಸುತ್ತಾರೆ. ಬಂಗಾರ ಹೊಂದಿರುವ ವ್ಯಕ್ತಿಗಳು ಹೆಚ್ಚಾಗಿ ಇದರ ನಿರ್ವಹಣೆ ಬಗ್ಗೆ ಗಮನಹರಿಸುವುದು ತುಂಬಾ ಕಡಿಮೆ. ಇಂದಿನ ದಿನಗಳಲ್ಲಿ ದಿನಕ್ಕೊಂದು ವಿನ್ಯಾಸದ ಬಂಗಾರದ ಆಭರಣಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವಾಗ ಹಳೆಯ ಆಭರಣಗಳನ್ನು ತೊಳೆಯುತ್ತಾ ಕುಳಿತುಕೊಳ್ಳುವ ಪುರುಸೊತ್ತು ಕೂಡ ಇಲ್ಲ. ಆದರೆ ನಾವು ಧರಿಸುವಂತಹ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ನಿರ್ವಹಣೆ ಮಾಡುವುದು ಅತ್ಯಗತ್ಯವಾಗಿದೆ. ತುಂಬಾ ದೀರ್ಘ ಕಾಲದವರೆಗೆ ನೀವು ಧರಿಸುತ್ತಿರುವ ಬಂಗಾರದ ಆಭರಣದಲ್ಲಿ ಧೂಳು ಕುಳಿತುಕೊಂಡರೆ ಆಗ ಅದರ ಹೊಳಪು ಕಳೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಪ್ರತಿಯೊಂದು ಮನೆಗಳಲ್ಲೂ ಪಾತ್ರೆ ತೊಳೆಯಲು ಸಾಮಾನ್ಯವಾಗಿ ಪಾತ್ರೆ ತೊಳೆಯುವ ಹುಡಿ ಅಥವಾ ಲಿಕ್ವಿಡ್ ಅನ್ನು ಬಳಸುವುದನ್ನು ನೋಡುತ್ತೇವೆ. ಇದೇ ಹುಡಿಯನ್ನು ಬಳಸಿಕೊಂಡು ಬಂಗಾರದ ಆಭರಣಗಳನ್ನು ಸ್ವಚ್ಛ ಮಾಡಬಹುದು ಎಂದು ಯಾರಿಗಾದರೂ ತಿಳಿದಿದೆಯಾ? ಒಂದು ಪಾತ್ರೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ಪಾತ್ರೆ ತೊಳೆಯುವ ಹುಡಿಯನ್ನು ಹಾಕಿ ಬಳಿಕ ಆಭರಣಗಳನ್ನು ಹಾಕಿ ಸ್ವಲ್ಪ ಸಮಯ ಹಾಗೆ ಬಿಡಿ. ಹಲ್ಲುಜ್ಜುವ ಬ್ರಶ್ ತೆಗೆದುಕೊಂಡು ಬಂಗಾರದ ಆಭರಣಗಳ ಅಂಚುಗಳನ್ನು ತೊಳೆಯಿರಿ. ಇದರಿಂದ ಧೂಳು ಹೊರಗೆ ಬರುತ್ತದೆ. ಇದರ ಬಳಿಕ ಸ್ವಚ್ಛವಾದ ನೀರಿನಲ್ಲಿ ಆಭರಗಳನ್ನು ಹಾಕಿ ತೆಗೆಯಿರಿ. ಬಟ್ಟೆಯಿಂದ ಆಭರದಲ್ಲಿರುವ ನೀರನ್ನು ಉಜ್ಜಿಕೊಳ್ಳಿ. ಬಂಗಾರದ ಆಭರಗಳನ್ನು ಸ್ವಚ್ಛ ಮಾಡಿಕೊಳ್ಳಲು ಇದು ತುಂಬಾ ಅಗ್ಗದ ವಿಧಾನ. ಬಂಗಾರದ ಆಭರಣಗಳನ್ನು ಮನೆಯಲ್ಲೇ ಯಾವುದೇ ಹೆಚ್ಚಿನ ವೆಚ್ಚವಿಲ್ಲದೆ ಸ್ವಲ್ಪಗೊಳಿಸುವ ಸುಲಭ ವಿಧಾನವೆಂದರೆ ಹಲ್ಲುಜ್ಜುವ ಪೇಸ್ಟ್. ಸ್ವಲ್ಪ ಹಲ್ಲುಜ್ಜುವ ಪೇಸ್ಟ್ ತೆಗೆದುಕೊಂಡು ಬಂಗಾರದ ಆಭರಣದ ಮೇಲೆ ಹಾಕಿಕೊಳ್ಳಿ. ಹಳೆಯ ಹಲ್ಲುಜ್ಜುವ ಬ್ರಶ್ ತೆಗೆದುಕೊಂಡು ಆಭರಣದ ಅಂಚು ಹಾಗೂ ಸಂಧುಗಳನ್ನು ಸರಿಯಾಗಿ ಉಜ್ಜಿಕೊಳ್ಳಿ. ಹೆಚ್ಚು ರಾಸಾಯನಿಕವಿಲ್ಲದಂತಹ ಪೇಸ್ಟ್ ಬಳಸಿದರೆ ಬಂಗಾರಕ್ಕೆ ಯಾವುದೇ ಹಾನಿಯಾಗದು. ಇದರ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಐದು ನಿಮಿಷ ಕಾಲ ಆಭರಣಗಳನ್ನು ಹಾಕಿಡಿ. ಬಳಿಕ ಬಟ್ಟೆಯಿಂದ ಒರೆಸಿಕೊಳ್ಳಿ. ಸ್ವಲ್ಪ ಉಗುರುಬೆಚ್ಚಗಿನ ನೀರಿಗೆ ಅಮೋನಿಯಾ ಹುಡಿಯನ್ನು ಹಾಕಿ. ಬಂಗಾರದ ಆಭರಣಗಳನ್ನು ಈ ಮಿಶ್ರಣದಲ್ಲಿ ಹಾಕಿ ಎರಡು ನಿಮಿಷ ಬಿಟ್ಟು ತೆಗೆಯಿರಿ. ಬ್ರಶ್ ನಿಂದ ಆಭರಣಗಳ ಅಂಚು ಹಾಗೂ ಸಂಧುಗಳನ್ನು ಉಜ್ಜಿಕೊಳ್ಳಿ. ಬಳಿಕ ಸ್ವಚ್ಛ ನೀರಿನಿಂದ ಆಭರಣಗಳನ್ನು ತೊಳೆಯಿರಿ. ಬಂಗಾರದ ಆಭರಣ ತೊಳೆಯಲು ಅಮೋನಿಯಾ ತುಂಬಾ ಉಪಯುಕ್ತ. ಆದರೆ ಆಭರಣಗಳಲ್ಲಿ ಯಾವುದೇ ರೀತಿಯ ಮುತ್ತು, ರತ್ನ ಹಾಗೂ ಹವಳ ಇರಬಾರದು. ಬೆಳ್ಳಿಯ ಆಭರಣಗಳನ್ನು ತೊಳೆಯಲು ಉಪ್ಪು ನೀರು ತುಂಬಾ ಒಳ್ಳೆಯದು. ಸ್ವಲ್ಪ ಬಿಸಿ ನೀರಿಗೆ ಉಪ್ಪು ನೀರನ್ನು ಹಾಕಿಕೊಳ್ಳಿ. ಬೆಳ್ಳಿಯ ಆಭರಣಗಳನ್ನು ಇದರಲ್ಲಿ ಮುಳುಗಿಸಿ ಸ್ವಲ್ಪ ಸಮಯ ಹಾಗೆ ಬಿಡಿ. ಬ್ರಶ್ ತೆಗೆದುಕೊಂಡು ಬೆಳ್ಳಿ ಆಭರಣಗಳ ಬದಿ ಹಾಗೂ ಸಂಧುಗಳನ್ನು ತೊಳೆಯಿರಿ. ಬಳಿಕ ಸ್ವಚ್ಛ ನೀರಿಗೆ ಹಾಕಿ ತೆಗೆದು ಬಟ್ಟೆಯಿಂದ ಒರೆಸಿಕೊಳ್ಳಿ. ಬೆಳ್ಳಿ ಆಭರಣಗಳನ್ನು ಸ್ವಚ್ಛಗೊಳಿಸಲು ಇದು ತುಂಬಾ ಅಗ್ಗ ಹಾಗೂ ವೇಗದ ವಿಧಾನವಾಗಿದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.