ಬಾಳೆ ಎಲೆ ನಿಮ್ಮ ಆರೋಗ್ಯಕ್ಕೆ ಏನು ಮಾಡುತ್ತೆ ಗೊತ್ತಾ..?

Video Description

ನಿಮ್ಮ ಆರೋಗ್ಯ ವರ್ಧಿಸುವ ಬಾಳೆ ಎಲೆ ಊಟ ಬಾಳೆ ಎಲೆ ನಿಮ್ಮ ಆರೋಗ್ಯಕ್ಕೆ ಏನು ಮಾಡುತ್ತೆ ಗೊತ್ತಾ..? ಬಾಳೆ ಮರ ಯಾರು ತಾನೇ ನೋಡಿಲ್ಲ. ಹಿಂದೂ ಧರ್ಮದ ಶಾಸ್ತ್ರಗಳಲ್ಲಿ ಮತ್ತು ಸಮಾರಂಭಗಳಲ್ಲಿ ಬಾಳೆಗೆ ಮತ್ತು ಬಾಳೆ ಎಲೆಗೆ ತನ್ನದೆ ಆದ ಮಹತ್ವ ಇದೆ. ಬಾಳೆ ಎಲೆಯ ಮೇಲೆ ಮಾಡುವ ಊಟದ ರುಚಿಯೇ ಬೇರೆ, ಅದು ಸಂಪ್ರದಾಯ ಸಹ ಹೌದು. ಹಾಗಾಗಿಯೇ, ಮದುವೆ, ದೇವಾಲಯಗಳ ಪ್ರಸಾದ ಭೋಜನ, ಅನ್ನಸಂತರ್ಪಣೆಗಳಲ್ಲಿ ಬಾಳೆ ಎಲೆಯ ಮೇಲೆ ಊಟವನ್ನು ಬಡಿಸಲಾಗುತ್ತದೆ. ಮನೆಯ ಮುಂದೆ ಮತ್ತು ಹಿತ್ತಲಿನ ತೋಟದಲ್ಲಿ ಬಾಳೆಗಿಡಗಳನ್ನು ಬೆಳೆಸುವುದು ಶುಭಕರವೆಂದು ಹೇಳಲಾಗುತ್ತದೆ. ಬಾಳೆ ಎಲೆಯು ಅಡುಗೆ ಮನೆಯಲ್ಲಿ ಬಳಸಲು ಅತ್ಯಂತ ಯೋಗ್ಯವಾದ ಸಾಧನವಾಗಿದೆ. ಇದು ಫುಡ್ ರಾಪರ್ ತರಹ ಕೆಲಸ ಮಾಡುತ್ತದೆ. ಈ ನಿಟ್ಟಿನಲ್ಲಿ ಇದು ಪ್ಲಾಸ್ಟಿಕ್ ರಾಪರ್, ಪರ್ಚ್‍ಮೆಂಟ್ ಪೇಪರ್ ಹಾಗು ಅಲ್ಯೂಮಿನಿಯಂ ಫಾಯಿಲ್ ರೀತಿಯಲ್ಲಿ ಒಣಗಿಸಲು, ಅಂಟಿಸಲು ಮತ್ತು ಬಿಸಿಯನ್ನು ಕಾಯ್ದಿಡಲು ಬಳಕೆಯಾಗುತ್ತದೆ. ಇನ್ನು ಬಾಳೆ ಎಲೆಯೆಂದರೆ ಅದು ಊಟದ ತಟ್ಟೆಗಿಂತ ಹೆಚ್ಚು. ಬಾಳೆ ಎಲೆಯನ್ನು ಮಡಿಚಿ ಆಹಾರ ಸಂಗ್ರಹಿಸುವ ಡಬ್ಬಿಯಂತೆ ಸಹ ಬಳಸಲಾಗುತ್ತದೆ. ಬಾಳೆ ಗಿಡದ ಎಲ್ಲಾ ಭಾಗಗಳು ಒಂದಲ್ಲ ಒಂದು ಬಗೆಯಲ್ಲಿ ಉಪಯೋಗಕ್ಕೆ ಬರುತ್ತವೆ. ಬಾಳೆ ಎಲೆಯ ಮೇಲ್ಪದರದ ರಚನೆಯಲ್ಲಿ ಎಪಿಗಾಲ್ಲೋಕ್ಯಾಟೆಚಿನ್ ಗ್ಯಾಲೆಟ್ ಎಂಬ ಪಾಲಿಫಿನಾಲ್ ಅಂಶವಿರುತ್ತದೆ. ಬಿಸಿ ಆಹಾರದ ಎಲೆಗೆ ಬಿದ್ದಾಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತವೆ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ. ಬಾಳೆ ಎಲೆಯ ಮೇಲೆ ಬ್ಯಾಕ್ಟೀರಿಯಾಗಳು ಬಾಳುವುದಿಲ್ಲ. ಇದರಲ್ಲಿ ಏನೇ ಆಹಾರ ಬಡಿಸಿದರೂ ಹೊಟ್ಟೆಗೆ ಹೋಗುವ ಮುನ್ನವೇ ಕೊಲ್ಲಲ್ಪಡುತ್ತವೆ. ಅದರಲ್ಲೂ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಫ್ರೀ ರಾಡಿಕಲ್ ಎಂಬ ಜೈವಿಕ ರಾಸಾಯನಿಕಗಳನ್ನು ಇದು ದೇಹ ಸೇರಲು ಬಿಡುವುದೇ ಇಲ್ಲ. ಚೆನ್ನೈನ ಆಯುರ್ವೇದ ತಜ್ಞರ ಪ್ರಕಾರ ಸಣ್ಣ ವಯಸ್ಸಿನಲ್ಲೇ ಬಿಳಿಕೂದಲಿನ ಸಮಸ್ಯೆ ಇದ್ದವರು ನಿತ್ಯ ಬಾಳೆ ಎಲೆಯಲ್ಲಿ ಊಟ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದಂತೆ. ನೀವು ತಟ್ಟೆಗಳಲ್ಲಿ ಊಟ ಮಾಡಿದರೆ ಅವುಗಳಲ್ಲಿ ಮಾರ್ಜಕದ ಕಣಗಳು ನಿಮ್ಮ ಹೊಟ್ಟೆ ಸೇರಬಹುದು. ಆದರೆ, ಬಾಳೆ ಎಲೆಯಲ್ಲಿ ಈ ಸಮಸ್ಯೆಯೇ ಇರುವುದಿಲ್ಲ. ಬಾಳೆ ಎಲೆ ಊಟ ಆರೋಗ್ಯಕ್ಕೆ ತಂಪು. ಗ್ಯಾಸ್ ಅಡುಗೆಯಿಂದ ಆಹಾರವನ್ನು ಸೇರಿಕೊಳ್ಳುವ ಕೃತಕ ಉಷ್ಣವೂ ಇಲ್ಲಿ ತಣ್ಣಗಾಗುತ್ತದೆ. ಬಾಳೆ ಎಲೆಯಲ್ಲಿ ಅಧಿಕ ಪ್ರಮಾಣದ ವಿಟಮಿನ್ 'ಡಿ' ಶೇಖರಣೆಗೊಂಡಿರುತ್ತದೆ. ಹೀಗಾಗಿ ಹಸುಗೂಸುಗಳನ್ನು ಶುಂಠಿ ಎಣ್ಣೆಲೇಪಿತ ಬಾಳೆಎಲೆಯಿಂದ ಸುತ್ತಿ ಸೂರ್ಯನ ಕಿರಣಗಳಿಗೆ ಹಿಡಿಯುತ್ತಾರೆ. ಭವಿಷ್ಯದಲ್ಲಿ ಚರ್ಮರೋಗಗಳು ಬಾರದಂತೆ ತಡೆಯುವ ವೈದ್ಯೋದ್ದೇಶ ಇದರದ್ದು. ತೆಂಗಿನೆಣ್ಣೆ ಲೇಪಿತ ಬಾಳೆ ಎಲೆಯನ್ನು ಸುಕ್ಕಾಗಿರುವ ಚರ್ಮದ ಸುತ್ತ ಸುತ್ತಿದರೆ ಕೆಲವೇ ದಿನಗಳಲ್ಲಿ ಒಳ್ಳೆಯ ರಿಸಲ್ಟ್ ಸಿಗುತ್ತದೆ. ಗ್ರೀನ್‌ ಟೀಯಲ್ಲಿರುವ ಪಾಲಿಫೆನಾಲ್ಸ್ ಅಂಶ ಬಾಳೆಲೆಯಲ್ಲಿದೆ. ಇದು ಬೇಗನೆ ಮುಪ್ಪಾಗುವುದನ್ನು, ಜೀವನಶೈಲಿ ಸಂಬಂಧಿ ಕಾಯಿಲೆಗಳನ್ನು ಹಾಗೂ ಕೆಲ ಬಗೆಯ ಕ್ಯಾನ್ಸರ್‌ ಬರದಂತೆ ತಡೆಯುತ್ತದೆ. ಯಾವುದೇ ವಾಶಿಂಗ್‌ ಪೌಡರ್‌, ಸೋಪು ಹಾಕಿ ಇದನ್ನು ತೊಳೆಯಬೇಕಾಗಿಲ್ಲ. ಸ್ವಲ್ಪ ನೀರು ಹಾಕಿ ತೊಳೆದರೆ ಅಷ್ಟೇ ಸಾಕು. ಯಾವುದೇ ರಾಸಾಯನಿಕವಿಲ್ಲದಿರುವುದರಿಂದ ಬಾಳೆ ಎಲೆ ಊಟ ಅತ್ಯಂತ ಶುಚಿ ಆಹಾರವಾಗಿದೆ. ಒಂದೇ ಆಹಾರವನ್ನು ತಟ್ಟೆಗೆ ಹಾಗೂ ಬಾಳೆ ಎಲೆಗೆ ಹಾಕಿ ತಿಂದರೆ ರುಚಿಯಲ್ಲಿ ವ್ಯತ್ಯಾಸ ಅನಿಸುವುದು. ಬಾಳೆ ಎಲೆ ಆಹಾರದ ರುಚಿ ಹೆಚ್ಚಿಸುವುದು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.