ಕಂಕುಳನ್ನು ಬೆಳ್ಳಗಾಗಿಸಲು ಇಲ್ಲಿದೆ ಉಪಾಯ..!

Video Description

ಕಂಕುಳನ್ನು ಬೆಳ್ಳಗಾಗಿಸಲು ಇಲ್ಲಿದೆ ಉಪಾಯ..! ಕಂಕುಳು ಬೆಳ್ಳಗಾಗಲು ಈ ಸಲಹೆಗಳನ್ನು ಪಾಲಿಸಿ ಕಂಕುಳವನ್ನು ವ್ಯಾಕ್ಸ್ ಅಥವಾ ಶೇವ್ ಮಾಡಿದರೆ ಮಾತ್ರ ಸಾಲದು, ಕಂಕುಳ ಕಪ್ಪಾಗಿ ಕಾಣದಂತೆ ಕೇರ್ ತೆಗೆದುಕೊಳ್ಳಬೇಕು. ಕಂಕುಳದಲ್ಲಿರುವ ಬೇಡದ ಕೂದಲನ್ನು ತೆಗೆಯುವುದು ಸ್ವಚ್ಛತೆಯ ದೃಷ್ಟಿಯಿಂದ ಒಳ್ಳೆಯದು. ಅದರಲ್ಲೂ ಸ್ಲೀವ್ ಲೆಸ್ ಡ್ರೆಸ್ ಧರಿಸುವಾಗ ಅಂತೂ ಕಂಕುಳ ಕ್ಲೀನ್ ಆಗಿ ಇರಬೇಕು. ಸ್ಲೀವ್ ಲೆಸ್ ಹಾಕಿದಾಗ ಕಂಕುಳ ಕ್ಲೀನ್ ಆಗಿ ಇಲ್ಲದಿದ್ದರೆ ನೋಡುವವರು ಈ ವ್ಯಕ್ತಿ ಸ್ವಚ್ಛತೆಯ ಕಡೆ ಹೆಚ್ಚು ಗಮನವನ್ನು ಕೊಡುವುದಿಲ್ಲವೆಂದೇ ಭಾವಿಸುತ್ತಾರೆ. ಕೆಲವರು ತೋಳಿಲ್ಲದ ಉಡುಗೆಯನ್ನು ಧರಿಸಲು ಹಿಂದೆ ಮುಂದೆ ಯೋಚಿಸುತ್ತಾರೆ. ಇದಕ್ಕೆ ಕಾರಣ ಕಪ್ಪಾಗಿರುವ ಕಂಕುಳು (ಡಾರ್ಕ್ ಅಂಡರ್‍ಆರ್ಮ್). ಅಂಡರ್ ಆರ್ಮ್‍ಗಳಿಗೆ ವಿವಿಧ ಬಗೆಯ ಕ್ರೀಮ್‍ಗಳ ಬಳಕೆ ಮಾಡುವುದು, ಚರ್ಮವನ್ನು ಗಾಢವಾಗಿ ಉಜ್ಜುವುದು, ಅನುಚಿತ ರೀತಿಯಲ್ಲಿ ಅಂಡರ್ ಆರ್ಮ್ ಮಾಡಿಸುವುದರಿಂದಲೂ ಕಂಕುಳ ಭಾಗ ಕಪ್ಪಾದ ಚರ್ಮವನ್ನು ಹೊಂದುತ್ತದೆ. ಕಂಕುಳು ಭಾಗದಲ್ಲಿ ಅಧಿಕ ಬೆವರು ಸಂಗ್ರಹವಾಗುವ ಸ್ಥಳವಾದ್ದರಿಂದ ಸೂಕ್ತ ರೀತಿಯ ಸ್ವಚ್ಛತೆಯು ಪ್ರಮುಖವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಬಳಸುವ ಸುಗಂಧ ದ್ರವ್ಯಗಳು, ಪೌಡರ್, ಕ್ರೀಮ್ ಎಲ್ಲವೂ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳು ಇರುತ್ತವೆ. ಮೃತ ಜೀವನಕೋಶದ ಶೇಖರಣೆಯ ಪರಿಣಾಮದಿಂದಲೂ ಕಂಕುಳ ಬಣ್ಣ ಕಪ್ಪು ಬಣ್ಣಕ್ಕೆ ತಿರುಗುವುದು. ಈ ಸಮಸ್ಯೆಯಿಂದ ಬಹುಬೇಗ ಹೊರ ಬರಬೇಕು ಎಂದರೆ ಅಡುಗೆ ಸೋಡಾವನ್ನು ಬಳಸಬಹುದು. ಆದರೆ ಇದರ ಬಳಕೆಯ ವಿಧಾನ ಸೂಕ್ತವಾಗಿ ಇರಬೇಕು. ಸ್ನಾನದ ನಂತರ ಕಂಕುಳಕ್ಕೆ ಸ್ವಲ್ಪ ರೋಸ್ ವಾಟರ್ ಹಚ್ಚಿದರೆ ಕಂಕುಳ ಕಪ್ಪಾಗುವುದನ್ನು ತಡೆಯಬಹುದು, ಮತ್ತು ದುರ್ವಾಸನೆ ಬೀರುವುದನ್ನು ತಡೆಯಬಹುದು. ಸ್ನಾನಕ್ಕೆ ಮುಂಚೆ ಕಂಕುಳಕ್ಕೆ ಸ್ವಲ್ಪ ಅರಿಶಿಣವನ್ನು ಹಚ್ಚಿದರೆ ತ್ವಚೆ ಬಿಳುಪಾಗುವುದು. ತ್ವಚೆ ನುಣಪಾಗಿ, ಬಿಳುಪಾಗಿ ಇದ್ದರೆ ಸ್ಲೀವ್ ಲೆಸ್ ಧರಿಸಿದಾಗ ಕೈ ಎತ್ತಲು ಆತ್ಮವಿಶ್ವಾಸ ಮೂಡುವುದು ಕಹಿಬೇವಿನ ಎಲೆಯನ್ನು ಪೇಸ್ಟ್ ಮಾಡಿ ವಾರಕ್ಕೊಮ್ಮೆ ಕಂಕುಳಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿ. ಇದರಿಂದ ಕಂಕುಳ ದುರ್ವಾಸನೆ ಬೀರುವುದನ್ನು ಹಾಗೂ ಆ ಭಾಗದಲ್ಲಿ ತ್ವಚೆ ಕಪ್ಪಾಗುವುದನ್ನು ತಡೆಯಬಹುದು. ಮುಲ್ತಾನಿ ಮಿಟ್ಟಿಯ ಪೇಸ್ಟ್ ಮಾಡಿ ಹಚ್ಚಿದರೆ ಕಂಕುಳದ ಬಿಳುಪು ಹೆಚ್ಚುವುದು. ಮುಲ್ತಾನಿ ಮಿಟ್ಟಿಯನ್ನು ಮುಖಕ್ಕೆ ಹಚ್ಚುವಾಗ ಕತ್ತು ಮತ್ತು ಕಂಕುಳಕ್ಕೆ ಹಚ್ಚಿ. ಪ್ರತೀದಿನ ಕಂಕುಳಕ್ಕೆ ಲೋಳೆಸರ ಹಚ್ಚಿದರೆ ಕಂಕುಳ ಕಪ್ಪಾಗುವುದಿಲ್ಲ, ಅಲ್ಲದೆ ನುಣಪಾಗಿಯೂ ಇರುತ್ತದೆ, ಅಲರ್ಜಿ ಉಂಟಾಗುವುದನ್ನು ತಡೆಯುತ್ತದೆ. ವ್ಯಾಕ್ಸ್ ಮಾಡಿದ ನಂತರ ನಿಂಬೆರಸ ಹಚ್ಚಿ ಅರ್ಧ ಗಂಟೆಯ ಬಳಿಕ ತೊಳೆಯಿರಿ. ಪ್ರತೀದಿನ ಸ್ನಾನಕ್ಕೆ ಹೋಗುವ ಮುನ್ನ ನಿಂಬೆರಸ ಹಚ್ಚಿದರೆ ಕಂಕುಳ ಕಪ್ಪಾಗುವುದಿಲ್ಲ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.