ಉರಿ ಮೂತ್ರಕ್ಕೆ ಮನೆ ಮದ್ದು..

Video Description

ದೇಹದಲ್ಲಿ ನೀರು ಕಡಿಮೆಯಾದಾಗ ಅಥವಾ ಏನಾದರೂ ಸೋಂಕು ಆದಾಗ ಮೂತ್ರ ಉರಿ ಸಮಸ್ಯೆ ಕಂಡು ಬರುವುದು. ಮೂತ್ರ ಉರಿ ಸಮಸ್ಯೆ ಬರುತ್ತಿದ್ದರೆ ಗರ್ಭಕೋಶ ತೊಂದರೆ, ಕಿಡ್ನಿ ಸಮಸ್ಯೆ ಕಂಡು ಬರುವುದು. ಮಹಿಳೆಯರಲ್ಲಿ ಹೆಚ್ಚಾಗಿ ಉರಿಮೂತ್ರ ಕಾಣಿಸುತ್ತದೆ. ಇದನ್ನು ಮನೆ ಮದ್ದಿನಿಂದಲೂ ನಿವಾರಿಸಿಕೊಳ್ಳಬಹುದು. ಇದಕ್ಕೆ ಮನೆಮದ್ದು ಇಲ್ಲಿದೆ ನೋಡಿ. *ಪ್ರತಿನಿತ್ಯ ದಾಳಿಂಬೆ ಜ್ಯೂಸ್‌ ಕುಡಿದರೆ ಉರಿಮೂತ್ರ ಸಮಸ್ಯೆಗೆ ಗುಡ್‌ಬೈ ಹೇಳಿ. * ಊಟವಾದ ನಂತರ ಸೋರೆಕಾಯಿ ರಸಕ್ಕೆ ನಿಂಬೆಹಣ್ಣಿನ ರಸ ಮಿಕ್ಸ್ ಮಾಡಿ ಕುಡಿಯಬೇಕು * ತಿಳಿ ಮಜ್ಜಿಗೆಗೆ ನಿಂಬೆ ರಸ, ಕಲ್ಲು ಸಕ್ಕರೆ ಮಿಕ್ಸ್ ಮಾಡಿ ಕುಡಿದರೆ ೨-೩ ದಿನದಲ್ಲಿ ಉರಿಮೂತ್ರ ನಿವಾರಣೆಯಾಗುತ್ತದೆ. *ಮೂತ್ರ ಉರಿ ಕಂಡು ಬಂದರೆ ಸಾಕಷ್ಟು ನೀರು ಕುಡಿಯಬೇಕು. ನೀರು ಜಾಸ್ತಿ ತೆಗೆದುಕೊಳ್ಳುವುದರಿಂದ ದೇಹದಲ್ಲಿರುವ ಮೂತ್ರ ಸೋಂಕಿಗೆ ಕಾರಣವಾದ ಬ್ಯಾಕ್ಟಿರಿಯಾವನ್ನು ಹೊರ ಹಾಕುವುದು ಹಾಗೂ ಕಿಡ್ನಿಯನ್ನು ಸಂರಕ್ಷಣೆ ಮಾಡುತ್ತದೆ ಹೀಗೆ ನೈಸರ್ಗಿಕವಾಗಿ ಸಿಗುವ‌ ಮನೆ ಮದ್ದು ಬಳಸಿ ಉರಿಮೂತ್ರ ನಿವಾರಿಸಿಕೊಳ್ಳಬಹುದು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.