ಆಸಿಡಿಟಿಗೆ ಇಲ್ಲಿದೆ ಮನೆಮದ್ದು..!

Video Description

ಆಸಿಡಿಟಿಗೆ ಸಮಸ್ಯೆಗೆ ಪರಿಣಾಮಕಾರಿ ಮನೆಮದ್ದು ಆಸಿಡಿಟಿಗೆ ಇಲ್ಲಿದೆ ಮನೆಮದ್ದು..! ಇಂದು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಸಿಡಿಟಿ ಸಮಸ್ಯೆಯಿಂದ ನರಳುತ್ತಿರುತ್ತಾರೆ. ಈ ಸಮಸ್ಯೆಯು ಇನ್ನಿತರ ಆರೋಗ್ಯದ ಸಮಸ್ಯೆಗಳನ್ನು ಸಹ ಉಂಟು ಮಾಡುತ್ತಿರುತ್ತದೆ. ಆದರೆ ಇಷ್ಟಕ್ಕು ಅಸಿಡಿಟಿ ಏಕೆ ಕಂಡು ಬರುತ್ತದೆ? ಸಾಮಾನ್ಯವಾಗಿ ಯಾವುದಾದರು ಅಜೀರ್ಣ ಸಮಸ್ಯೆಯು ಜೀರ್ಣ ಮಾಡುವ ಆಸಿಡ್‌ಗಳಲ್ಲಿ ಅಸಮತೋಲನವನ್ನುಂಟು ಮಾಡಿದಾಗ ನಿಮಗೆ ಅಸಿಡಿಟಿ ಸಮಸ್ಯೆ ಕಂಡು ಬರುತ್ತದೆ. ಆಗ ಇದರಿಂದ ಮುಕ್ತಿ ಪಡೆಯಲು ನೀವು ಕೆಲವೊಂದು ಆಂಟಾಸಿಡ್‌ಗಳ ನೆರವನ್ನು ಪಡೆಯಬೇಕಾಗುತ್ತದೆ. ಆದರೆ ಇದೇ ಸಮಯದಲ್ಲಿ ನೀವು ಮನೆಯಲ್ಲಿಯೇ ದೊರೆಯುವ ಮನೆ ಮದ್ದುಗಳ ನೆರವಿನಿಂದ ಸಹ ಅಸಿಡಿಟಿಯಿಂದ ಮುಕ್ತಿ ಪಡೆಯಬಹುದು. ನಮಗೆ ಅಸಿಡಿಟಿ ಬರಲು ಹಲವಾರು ಕಾರಣಗಳು ಇವೆ. ಸಾಮಾನ್ಯವಾಗಿ ಮಸಾಲೆ ಪದಾರ್ಥಗಳನ್ನು ಸೇವಿಸಿದರೆ, ಸರಿಯಾದ ಸಮಯಕ್ಕೆ ಊಟ ಮಾಡದಿದ್ದರೆ, ವ್ಯಾಯಾಮದ ಕೊರತೆ, ಆಲ್ಕೋಹಾಲ್ ಸೇವನೆ ಮುಂತಾದವುಗಳಿಂದ ಅಸಿಡಿಟಿ ಸಮಸ್ಯೆ ಬರುತ್ತದೆ. ಕೆಲವೊಮ್ಮೆ ನಿರ್ದಿಷ್ಟ ಆಹಾರಗಳಿಂದಾಗಿ ಅಸಿಡಿಟಿ ಸಮಸ್ಯೆ ಕಂಡು ಬರುತ್ತದೆ. ಉದಾಹರಣೆಗೆ ಸೌತೆಕಾಯಿ, ಇದು ಜೀರ್ಣಮಾಡಿಕೊಳ್ಳಲು ಉಪಕಾರಿ, ಆದರೆ ಅಸಿಡಿಟಿ ಇದ್ದಲ್ಲಿ, ಇದನ್ನು ಸೇವಿಸಬೇಡಿ. ತುಳಸಿ ಎಲೆಗಳು ಅಸಿಡಿಟಿಗೆ ಶೀಘ್ರ ಉಪಶಮನವನ್ನು ನೀಡುತ್ತವೆ. ತುಳಸಿ ಎಲೆಗಳಲ್ಲಿ ಕಾರ್ಮನಿಟೇವ್ ಎಂಬ ಅಂಶಗಳು ಇರುತ್ತವೆ. ಇವು ಅಸಿಡಿಟಿಯನ್ನು ಹೋಗಲಾಡಿಸುವಲ್ಲಿ ಪವಾಡ ಸದೃಶ್ಯವಾಗಿ ಕೆಲಸ ಮಾಡುತ್ತದೆ. ನಿಮಗೆ ಅಸಿಡಿಟಿ ಸಮಸ್ಯೆ ಇದ್ದಲ್ಲಿ ಒಂದಷ್ಟು ತುಳಸಿ ಎಲೆಗಳನ್ನು ಅಗಿಯಿರಿ ಸಾಕು. ಸಾಂಬಾರು ಪದಾರ್ಥವಾದ ಚಕ್ಕೆಯ ಪ್ರಯೋಜನಗಳು ಹಲವಾರು. ಇದು ಅಸಿಡಿಟಿಯನ್ನು ನಿವಾರಿಸುವ ಅತ್ಯಂತ ಪರಿಣಾಮಕಾರಿ ಮನೆ ಮದ್ದಾಗಿದೆ. ಇತರೆ ಔಷಧಿಗಳನ್ನು ಸೇವಿಸುವ ಬದಲಿಗೆ ಚಕ್ಕೆಯಿಂದ ತಯಾರಿಸಿದ ಟೀಯನ್ನು ಸೇವಿಸಿ. ಅಸಿಡಿಟಿಯಿಂದ ಮುಕ್ತರಾಗಿ. ನಿಮಗೆ ಬೇಕಾದಲ್ಲಿ ಚಕ್ಕೆಯ ಪುಡಿಯನ್ನು ನೀವು ತಯಾರಿಸುವ ಖಾದ್ಯಗಳಿಗೆ ಬೆರೆಸಿಕೊಳ್ಳಬಹುದು. ಆರ್ಯುರ್ವೇದದ ಪ್ರಕಾರ ಅಸಿಡಿಟಿಯನ್ನು ನಿವಾರಿಸಲು ಹಲವಾರು ಪದಾರ್ಥಗಳು ನೆರವಿಗೆ ಬರುತ್ತವೆ. ಜೀರಿಗೆ ಸಹ ಅವುಗಳಲ್ಲಿ ಒಂದು. ಇದು ನಮ್ಮ ಜೀರ್ಣಕ್ರಿಯೆಗೆ ಅಗತ್ಯವಾದ ಲಾಲಾ ರಸವನ್ನು ಹೆಚ್ಚು ಉತ್ಪತ್ತಿಸುವಂತೆ ಮಾಡುತ್ತದೆ. ಜೀರಿಗೆಯನ್ನು ಬೆರೆಸಿ ನೀರನ್ನು ಕುದಿಸಿ, ಅದನ್ನು ಕುಡಿಯುವುದರಿಂದ ಅಸಿಡಿಟಿಯನ್ನು ನಿವಾರಿಸಿಕೊಳ್ಳಬಹುದು. ಜಠರದಲ್ಲಿ ಕಂಡು ಬರುವ ಅಧಿಕ ಹೈಡ್ರೋಕ್ಲೋರಿಕ್ ಆಮ್ಲದಿಂದಾಗಿ ಅಸಿಡಿಟಿ ಕಂಡು ಬರುತ್ತದೆ. ಹಾಗೆಯೇ ಜಠರದಲ್ಲಿ ಜೀರ್ಣಕ್ರಿಯೆಗೆ ಸಹಕರಿಸುವ ಆಸಿಡ್ ಕಡಿಮೆಯಾದರು ಸಹ ಅಸಿಡಿಟಿ ಬರುತ್ತದೆ. ಈ ಆಸಿಡ್‌ಗಳ ಮಟ್ಟವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳಲು, ಲವಂಗಗಳು ಸಹಾಯ ಮಾಡುತ್ತವೆ. ಅಸಿಡಿಟಿ ಸಮಸ್ಯೆ ಬಂದಾಗ ಒಂದಷ್ಟು ಲವಂಗಗಳನ್ನು ಜಗಿಯಿರಿ, ಸಾಕು. ಅಸಿಡಿಟಿ ಬಂದಾಗ ಔಷಧದ ಬಾಕ್ಸ್ ನೋಡುವ ಮೊದಲು ತರಕಾರಿ ಬುಟ್ಟಿಯನ್ನು ನೋಡಿ. ಅಲ್ಲಿ ನಿಮಗೆ ಶುಂಠಿ ಕಾಣಿಸುತ್ತದೆ. ಶುಂಠಿಯನ್ನು ಸಣ್ಣ ಪ್ರಮಾಣದಲ್ಲಿ ಕತ್ತರಿಸಿಕೊಂಡು ಅದನ್ನು ಅಗಿಯಿರಿ. ಇದರಿಂದ ಅಸಿಡಿಟಿ ಸಮಸ್ಯೆ ದೂರವಾಗುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.