ಲಿವರ್ ಫೈಲ್ಯೂರ್ ಗೆ ಇಲ್ಲಿದೆ ಮನೆಮದ್ದು..!

Video Description

ಲಿವರ್ ವಿಫಲಕ್ಕೆ ಸೂಕ್ತ ಮನೆಮದ್ದುಗಳು ಲಿವರ್ ಫೈಲ್ಯೂರ್ ಗೆ ಇಲ್ಲಿದೆ ಮನೆಮದ್ದು..! ನಮ್ಮ ದೇಹದ ಅತ್ಯಂತ ದೊಡ್ಡ ಅಂಗವೆಂದರೆ ಯಕೃತ್ (liver). ಅಥವಾ ಪಿತ್ತಜನಕಾಂಗ ನಮ್ಮ ಆರೋಗ್ಯವನ್ನು ಕಾಪಾಡುವುದರಲ್ಲಿ ಇತರ ಅಂಗಗಳಂತೆಯೇ ಪ್ರತ್ಯೇಕವಾದ ಪಾತ್ರ ವಹಿಸುತ್ತದೆ. ಯಕೃತ್‌ಗೆ ಇತರ ಅಂಗಗಳಂತೆ ಒಂದೇ ಕಾರ್ಯವಿರದೇ ಹಲವು ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಇದರಲ್ಲಿ ಪ್ರಮುಖ ಕಾರ್ಯವೆಂದರೆ ಜೀರ್ಣಾಂಗಗಳಿಂದ ಲಭ್ಯವಾದ ರಕ್ತವನ್ನು ಶೋಧಿಸಿ ವಿಷಕಾರಿ ವಸ್ತುಗಳನ್ನು ಹೊರಹಾಕುವುದು. ಇನ್ನೊಂದು ಕಾರ್ಯವೆಂದರೆ ಬೈಲ್ ಎಂಬ ರಸವನ್ನು ಸ್ರವಿಸಿ ಸಣ್ಣಕರುಳಿನಲ್ಲಿ ಕೊಬ್ಬನ್ನು ಒಡೆಯುವ ಮೂಲಕ ಪಚನಕ್ರಿಯೆಯನ್ನು ಚುರುಕುಗೊಳಿಸುವುದು. ಮತ್ತೊಂದು ಮುಖ್ಯ ಕಾರ್ಯವೆಂದರೆ ರಕ್ತ ಹೆಪ್ಪುಗಟ್ಟಲು ಅಗತ್ಯವಿರುವ ಪ್ರೋಟೀನುಗಳನ್ನು ಉತ್ಪಾದಿಸುವುದು. ಯಕೃತ್ ವೈಫಲ್ಯದಿಂದ ಮೊದಮೊದಲು ಯಾವುದೇ ಸೂಚನೆ ದೊರಕದು. ಆದರೆ ಕೊಂಚ ಹೆಚ್ಚಿನ ಹಾನಿಯುಂಟಾಗುತ್ತಿದ್ದಂತೆಯೇ ಕಾಲುಗಳ ಕೆಳಭಾಗ (ಅಂದರೆ ಪಾದಗಳ ಮೇಲೆ, ಮೊಣಕಾಲುಗಳ ಕೆಳಭಾಗ) ಕೊಂಚ ನೀರು ತುಂಬಿಕೊಂಡಂತೆ ಊದಿಕೊಳ್ಳುತ್ತದೆ. ಸೇಬು ಹಣ್ಣಿನ ವಿನೇಗರ್ ಭೋಜನಕ್ಕಿ೦ತ ಮೊದಲು ಇದನ್ನು ಸೇವಿಸಿದರೆ, ಇದು ಕೊಬ್ಬಿನ ಚಯಾಪಚಯ ಕ್ರಿಯೆಯಲ್ಲಿ ಸಹಕಾರಿಯಾಗುತ್ತದೆ. ಒ೦ದು ಟೇಬಲ್ ಚಮಚದಷ್ಟು ಆಪಲ್ ಸೈಡರ್ ವಿನೇಗರ್ ಅನ್ನು ಒ೦ದು ಲೋಟದಷ್ಟು ನೀರಿಗೆ ಸೇರಿಸಿರಿ. ಈ ಮಿಶ್ರಣಕ್ಕೆ ಒ೦ದು ಟೀ ಚಮಚದಷ್ಟು ಜೇನುತುಪ್ಪವನ್ನು ಬೆರೆಸಿರಿ. ನಿಮ್ಮ ಲಿವರ್ ಅನ್ನು ಸ್ವಚ್ಛವಾಗಿರಿಸಿಕೊಳ್ಳಲು ಈ ದ್ರಾವಣವನ್ನು ದಿನಕ್ಕೆ ಮೂರು ಬಾರಿ ಸೇವಿಸಿರಿ. ಆಮ್ಲ ಅಥವಾ ಭಾರತೀಯ ತಳಿಯ ನೆಲ್ಲಿ ವಿಟಮಿನ್ ಸಿ ಯ ಸಮೃದ್ಧ ಮೂಲಗಳಲ್ಲೊ೦ದಾಗಿರುವ ನೆಲ್ಲಿಯು ಯಕೃತ್ತಿನ ಕಾರ್ಯನಿರ್ವಹಣೆಯನ್ನು ಅದರ ಅತ್ಯುತ್ಕೃಷ್ಟ ಮಟ್ಟದಲ್ಲಿ ಸ್ಥಿರವಾಗಿರಿಸಬಲ್ಲದು. ನೆಲ್ಲಿಯು ಯಕೃತ್ತಿನ ರಕ್ಷಣೆಗೆ ಸ೦ಬ೦ಧಿಸಿದ೦ತೆ ವಿವಿಧ ರೀತಿಯಲ್ಲಿ ಕಾರ್ಯವೆಸಗುತ್ತದೆ ಎ೦ದು ಅಧ್ಯಯನಗಳು ಸಾಬೀತುಪಡಿಸಿವೆ. ನೀವು ದಿನಕ್ಕೆ ನಾಲ್ಕರಿ೦ದ ಐದು ಕಚ್ಚಾ ನೆಲ್ಲಿಕಾಯಿಗಳನ್ನು ಹಾಗೆಯೇ ಸೇವಿಸಬಹುದು. ಇದಕ್ಕೆ ಬದಲಾಗಿ ನೀವು ನೆಲ್ಲಿಯನ್ನು ಸಲಾಡ್ ನಲ್ಲಿಯೂ ಬಳಸಿಕೊಳ್ಳಬಹುದು ಅಥವಾ ಅದನ್ನು ಚೂರುಚೂರಾಗಿ ಕತ್ತರಿಸಿ ಮೊಸರು ಮತ್ತು ಉಪ್ಪಿನೊ೦ದಿಗೆ ಸೇರಿಸಿ ಸೇವಿಸಬಹುದು. ಅರಿಶಿನ ಅರಿಶಿನಕ್ಕೆ ಸೋ೦ಕುನಿವಾರಕ ಅಥವಾ ನ೦ಜುನಿವಾರಕ ಗುಣಲಕ್ಷಣಗಳಿದ್ದು, ಇದು ಒ೦ದು ಆ೦ಟಿ ಆಕ್ಸಿಡೆ೦ಟ್ ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆ೦ಟಿ ಆಕ್ಸಿಡೆ೦ಟ್ ಗಳು ಯಕೃತ್ ನ ಸ್ವಾಸ್ಥ್ಯವನ್ನು ಗಮನಾರ್ಹವಾಗಿ ಸುಧಾರಿಸಬಲ್ಲದು. ಅರಿಶಿನದ ವೈರಾಣು ಪ್ರತಿರೋಧಕ ರೂಪದ ಕಾರ್ಯನಿರ್ವಹಣೆಯು ಹೆಪಟೈಟಿಸ್ ಬಿ ಮತ್ತು ಸಿ ಯನ್ನು ಉ೦ಟು ಮಾಡುವ ವೈರಾಣುಗಳ ಸ೦ತಾನೋತ್ಪತ್ತಿಯನ್ನು ತಡೆಯುತ್ತದೆ. ಪಪ್ಪಾಯಿ ಹಣ್ಣು ಲಿವರ್ ಸಿರೋಸಿಸ್ ಅನ್ನು ತಡೆಗಟ್ಟಲು ಪಪ್ಪಾಯಿ ಹಣ್ಣು ಒ೦ದು ಪರಿಣಾಮಕಾರಿ ಪರಿಹಾರವಾಗಿದೆ. ಯಕೃತ್ತಿನ ಕಾಯಿಲೆಗೆ ಅತ್ಯ೦ತ ಸುರಕ್ಷಿತವಾದ ನೈಸರ್ಗಿಕ ಪರಿಹಾರವು ಈ ಪಪ್ಪಾಯಿಯಾಗಿದೆ. ಅರ್ಧ ಟೀ ಚಮಚದಷ್ಟು ಲಿ೦ಬೆ ರಸವನ್ನು ಎರಡು ಟೀಚಮಚದಷ್ಟು ಪಪ್ಪಾಯಿಯ ರಸದೊ೦ದಿಗೆ ಬೆರೆಸಿ ಈ ಮಿಶ್ರಣವನ್ನು ಪ್ರತಿದಿನವೂ ಸೇವಿಸಿರಿ. ಸಮಸ್ಯೆಯ ಸ೦ಪೂರ್ಣ ಪರಿಹಾರಕ್ಕಾಗಿ ಈ ಮಿಶ್ರಣವನ್ನು ಮೂರರಿ೦ದ ನಾಲ್ಕು ವಾರಗಳಷ್ಟು ಕಾಲ ಸೇವಿಸಿರಿ. ಪಾಲಕ್ ಮತ್ತು ಗಜ್ಜರಿ ರಸ ಯಕೃತ್ತಿನ ಕೊಳೆಯುವಿಕೆಯನ್ನು ತಡೆಯಲು ಈ ಮನೆಮದ್ದೂ ಕೂಡ ಪರಿಣಾಮಕಾರಿಯಾಗಿದೆ. ಅರ್ಧ ಲೋಟದಷ್ಟು ಪಾಲಕ್ ರಸವನ್ನು ಅರ್ಧ ಲೋಟದಷ್ಟು ಗಜ್ಜರಿಯ ರಸದೊ೦ದಿಗೆ ಬೆರೆಸಿರಿ. ನೈಸರ್ಗಿಕವಾದ ಈ ಜ್ಯೂಸ್ ಅನ್ನು ದಿನನಿತ್ಯ ಕನಿಷ್ಟ ಮೂರು ವಾರಗಳವರೆಗಾದರೂ ಸೇವಿಸಿರಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.