ಮನೆಯಲ್ಲೇ ಮಾಡಿ ಗುಲಾಬಿ ಫೇಸ್ ಪ್ಯಾಕ್..!

Video Description

ಅಂದದ ತ್ವಚೆಗೆ ಗುಲಾಬಿ ಫೇಸ್ ಪ್ಯಾಕ್ ಮನೆಯಲ್ಲೇ ಮಾಡಿ ಗುಲಾಬಿ ಫೇಸ್ ಪ್ಯಾಕ್..! ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಇದಕ್ಕಾಗಿ ಎಷ್ಟೇ ಹಣ ವ್ಯಯಿಸಲು ಕೂಡ ನಾವು ಸಿದ್ಧರಾಗಿರುತ್ತೇವೆ. ಹಾಗಾಗಿ ಜನರಲ್ಲಿ ಹೆಚ್ಚುತ್ತಿರುವ ಸೌಂದರ್ಯ ಪ್ರಜ್ಞೆಯನ್ನು ಬಂಡವಾಳವನ್ನಾಗಿ ಮಾಡಿಕೊಂಡಿರುವ ಕಂಪೆನಿಗಳು ಅವರ ಬೇಡಿಕೆಗಳನ್ನು ಪೂರೈಸಲು ಮಾರುಕಟ್ಟೆಯಲ್ಲಿ ತರಹೇವಾರಿ ಉತ್ಪನ್ನವನ್ನು ಬಿಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ. ಆದರೆ ಇಂತಹ ಉತ್ಪನ್ನಗಳಲ್ಲಿ ರಾಸಾಯನಿಕಗಳು ಅಧಿಕವಾಗಿದ್ದು, ನಮ್ಮ ದೇಹದ ಮೇಲೆ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತವೆ. ನಾವು ನಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ಸ್ವಾಭಾವಿಕ ಪರಿಹಾರಗಳ ಕಡೆಗೆ ಗಮನ ಹರಿಸಬೇಕಾದ ಕಾಲ ಬಂದಿದೆ. ಅದ್ದರಿಂದ ರಾಸಾಯನಿಕ ವಸ್ತುಗಳನ್ನು ಬಳಸಿರುವ ಕಾಸ್ಮೆಟಿಕ್ ಉತ್ಪನ್ನಗಳನ್ನು ಮುಖಕ್ಕೆ ಹಚ್ಚುವುದನ್ನು ತಪ್ಪಿಸಿ ನೈಸರ್ಗಿಕವಾಗಿ ದೊರೆಯುವ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ ವಸ್ತುಗಳನ್ನು ಬಳಸಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಿ. ಹೂಗಳು ಅಂದ ಚಂದದ ಕೇಂದ್ರ ಮಾತ್ರವಲ್ಲ ಈ ಹೂವು ಗಳನ್ನು ಬಗೆಬಗೆಯಲ್ಲಿ ಫೇಸ್‌ಪ್ಯಾಕ್‌ ರೂಪದಲ್ಲಿ ಮೊಗಕ್ಕೆ ಲೇಪಿಸಿದರೆ ಮುಖದ ಸೌಂದರ್ಯ ವೃದ್ಧಿಯ ಜೊತೆಗೆ ಮೊಡವೆ, ಕಲೆ, ಗುಳ್ಳೆ , ತುರಿಕೆಯಂತಹ ತೊಂದರೆಗಳೂ ನಿವಾರಣೆಯಾಗುತ್ತವೆ. ನಿಮ್ಮ ಮನೆಯಂಗಳದಲ್ಲಿರುವ ಹೂವನ್ನೇ ಬಳಸಿಕೊಂಡು ನಿಮ್ಮ ಮುಖದ ಕಾಂತಿಯನ್ನು ನೀವು ಹೆಚ್ಚಿಸಿಕೊಳ್ಳಬಹುದು. ಗುಲಾಬಿ ಪಕಳೆಗಳನ್ನು ಹಣ್ಣಿನ ಜ್ಯೂಸ್‌ನಲ್ಲಿ ಅರೆದುಕೊಳ್ಳಿ ಇದಕ್ಕೆ ಓಟ್ಸ್ ಸೇರಿಸಿ ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟು ನಂತರ ಮುಖಕ್ಕೆ ಹಚ್ಚಿಕೊಳ್ಳಿ. ಓಟ್ಸ್ ಮಾಯಿಶ್ಚರೈಸ್ ಮಾಡುತ್ತದೆ ಅಂತೆಯೇ ಗುಲಾಬಿ ದಳ ನಿಮ್ಮ ಮುಖ ಕಾಂತಿಯನ್ನು ವರ್ಧಿಸುತ್ತದೆ ಬಿಸಿ ನೀರಿಗೆ ಗುಲಾಬಿ ಎಣ್ಣೆ ಹಾಕಿ ಹಬೆ ತೆಗೆದುಕೊಳ್ಳುವುದರಿಂದ ಮೊಡವೆ ಸಮಸ್ಯೆ ದೂರಾಗಿ ಮುಖ ಕಾಂತಿ ಪಡೆಯುತ್ತದೆ. ಗುಲಾಬಿಯ ತಾಜಾ ಪಕಳೆಗಳನ್ನು 15 ನಿಮಿಷ ಬಿಸಿ ನೀರಿನಲ್ಲಿ ನೆನೆಸಿ. ಇದನ್ನು ಅರೆದು 2 ಚಮಚ ಜೇನು ಬೆರೆಸಿ ಲೇಪಿಸಿ. ಇದನ್ನು ಮುಖಕ್ಕೆ ಹಚ್ಚಿ ಫೇಸ್ ಪ್ಯಾಕ್ ಮಾಡಿಕೊಳ್ಳಿ. ಈ ಫೇಸ್ ಪ್ಯಾಕ್ ಮೇಲೆ ಹಾಲಿನಲ್ಲಿ ಅದ್ದಿದ ಗುಲಾಬಿ ಪಕಳೆಗಳನ್ನು ಲೇಪಿಸಬೇಕು. 20 ನಿಮಿಷಗಳ ನಂತರ ತೊಳೆದರೆ ಮುಖ ಶುಭ್ರ ಮೃದು ಕಾಂತಿಯುಕ್ತವಾಗುತ್ತದೆ. ವಾರಕ್ಕೆ ಮೂರು ಬಾರಿಯಂತೆ 6-8 ಬಾರಿ ಬಳಸಿದರೆ ಮುಖದ ಚರ್ಮ ಬೆಳ್ಳಗಾಗುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.