ದಾಸವಾಳ- ತಿಂದರೆ ಏನಾಗುತ್ತೆ ಗೊತ್ತಾ..?

Video Description

ದಾಸವಾಳದಲ್ಲಿದೆ ಅತ್ಯದ್ಭುತ ಗುಣಗಳು ದಾಸವಾಳ- ತಿಂದರೆ ಏನಾಗುತ್ತೆ ಗೊತ್ತಾ..? ಮಲೆನಾಡು ಕರಾವಳಿಯಲ್ಲಿ ದಾಸವಾಳದ ಗಿಡವನ್ನು ಅಲಂಕಾರಿಕಾ ಸಸ್ಯದಂತೆ ನೋಡದೇ ಸಾಮಾನ್ಯವಾಗಿ ಬೇಲಿಗೆ ನೆಡುವ ಕಾರಣದಿಂದ ದಾಸವಾಳದ ಹೂವು ಹೆಚ್ಚಿನವರ ಅಸಡ್ಡೆಗೆ ಗುರಿಯಾಗಿದೆ. ಮಲ್ವಕಿ ಎಂಬ ಸಸ್ಯ ಸಂಕುಲಕ್ಕೆ ಸೇರಿದ ದಾಸವಾಳ ಹೂವನ್ನು ರೋಸ್‌ಮೆಲ್ಲೊ ಎಂದೂ ಕರೆಯುತ್ತಾರೆ. ವಾಸ್ತವವಾಗಿ ಈ ಹೂವಿನ ಔಷಧೀಯ ಗುಣಗಳನ್ನು ಪರಿಗಣಿಸಿದರೆ ಈ ಗಿಡವನ್ನು ಬೇಲಿಯಲ್ಲಲ್ಲ, ಬದಲಿಗೆ ತುಳಸಿಯಂತೆ ಕಟ್ಟೆ ಕಟ್ಟಿ ಪೂಜಿಸಬೇಕಾದ ಹೂವಾಗಿದೆ. ಭಾರತದ ಯಾವುದೇ ರಾಜ್ಯದಲ್ಲಿಯೂ, ಯಾವುದೇ ಹವಾಮಾನದಲ್ಲಿಯೂ ಹೆಚ್ಚಿನ ಆರೈಕೆ ಬೇಡದೇ ಸುಲಭವಾಗಿ ಬೆಳೆಯುವ ಈ ಗಿಡ ಸಾಮಾನ್ಯ ಉದ್ಯಾನದಲ್ಲಿ ಬೆಳೆಯುವ ಹೂವಾಗಿದೆ ಎಂಬ ಅನ್ವರ್ಥನಾಮವನ್ನೂ ಪಡೆದಿದೆ. ದಾಸವಾಳ ಹೂವಿನಿಂದ ಪ್ರತ್ಯೇಕಿಸಲ್ಪಟ್ಟ ದ್ರವದಿಂದ ಹೃದಯಕ್ಕೆ ಸಂಬಂಧಪಟ್ಟ ಹಲವು ಕಾಯಿಲೆಗಳಿಗೆ ಔಷಧವನ್ನು ತಯಾರಿಸಲಾಗುತ್ತದೆ. ಅಧಿಕ ರಕ್ತದೊತ್ತಡ ಇರುವ ರೋಗಿಗಳು ದಾಸವಾಳ ಹೂವನ್ನು ಕುದಿಸಿ ತಣಿಸಿ ಸೋಸಿದ ನೀರನ್ನು ನಿತ್ಯವೂ ಕುಡಿಯುವುದರಿಂದ ರಕ್ತದೊತ್ತಡ ಸಾಮಾನ್ಯ ಮಟ್ಟಕ್ಕೆ ಬರಲು ಸಾಧ್ಯವಾಗುತ್ತದೆ. ಸ್ಥೂಲಕಾಯವನ್ನು ಕರಗಿಸಲು ಈ ಹೂವಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ನೆರವಾಗುತ್ತವೆ. ದಾಸವಾಳ ಹೂವಿನ ಒಣಗಿದ ಪಕಳೆಗಳ ಪುಡಿಯನ್ನು ನಿತ್ಯವೂ ಒಂದು ಚಮಚದಷ್ಟು ಸೇವಿಸುವ ಮೂಲಕ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಗಣನೀಯವಗಿ ಕಡಿಮೆಯಾಗುತ್ತದೆ. ಇದರಿಂದ ಎದುರಾಗಬಹುದಾಗಿದ್ದ ತೊಂದರೆಗಳನ್ನು ಮತ್ತು ಹೃದಯ ಸ್ತಂಭನದ ಸಾಧ್ಯತೆಯನ್ನೂ ಕಡಿಮೆ ಮಾಡುತ್ತದೆ. ಯಾವುದೇ ಕಾರಣಕ್ಕೆ ಶರೀರದ ತಾಪಮಾನ ವಿಪರೀತವಾಗಿ ಏರಿದ್ದರೆ ಇದನ್ನು ಇಳಿಸಲು ದಾಸವಾಳದ ಹೂವಿನ ನೀರು ಅತ್ಯುತ್ತಮವಾಗಿದೆ. ಜ್ವರ ವಿಪರೀತವಾಗಿದ್ದಾಗ ಈ ಹೂವಿನ ತಾಜಾ ಪಕಳೆಗಳನ್ನು ಕುದಿಸಿ ತಣಿಸಿ ಸೋಸಿದ ನೀರನ್ನು ಹಣ್ಣಿನ ರಸದ ಬದಲಿಗೆ ಕುಡಿಸಿದರೆ ಜ್ವರ ತಕ್ಷಣ ಕಡಿಮೆಯಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಬಿಳಿ ದಾಸವಾಳದ ಹೂವು ವಿಶೇಷವಾಗಿ ಅತಿಜ್ವರವನ್ನು ಇಳಿಸಲು ಹೆಚ್ಚು ಸಮರ್ಥವಾಗಿದೆ. ಅಲ್ಲದೇ ಬಿಳಿ ಹೂವಿನ ದಳಗಳನ್ನು ಅರೆದು ಲೇಪನ ಮಾಡಿ ಮುಖದ ಮೊಡವೆಗಳಿಗೆ ಹಚ್ಚಿದರೆ ಶೀಘ್ರವೇ ಕಡಿಮೆಯಾಗುತ್ತದೆ. ಕಣ್ಣುಗಳ ಒತ್ತಡವನ್ನು ಕಡಿಮೆಗೊಳಿಸಲೂ ಈ ಹೂವಿನ ಪಕಳೆಗಳು ಸಮರ್ಥವಾಗಿದೆ. ದಾಸವಾಳ ಒಂದು ಉತ್ತಮ ಮೂತ್ರವರ್ಧಕವಾಗಿದೆ. ಇದೇ ಕಾರಣಕ್ಕೆ ಮಧುಮೇಹ ಮತ್ತು ಮೂತ್ರಪಿಂಡಗಳ ತೊಂದರೆಯಿಂದ ಬಳಲುತ್ತಿರುವವರು ದಾಸವಾಳ ಹೂವಿನ ಪಕಳೆಗಳನ್ನು ಅರೆದು ತಯಾರಿಸಿದ ಜ್ಯೂಸ್ ಅನ್ನು ಕುಡಿಯಲು ಆಯುರ್ವೇದದಲ್ಲಿ ಶಿಫಾರಸ್ಸು ಮಾಡಲಾಗಿದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.