ಸರ್ಪಸುತ್ತು ಈಗ ಮನೆ ಮದ್ದಿನಿಂದ ಪರಿಹಾರ..!

Video Description

ಸರ್ಪಸುತ್ತಿಗೆ ಮನೆಮದ್ದೇ ಉತ್ತಮ ಪರಿಹಾರ ಸರ್ಪಸುತ್ತು ಈಗ ಮನೆ ಮದ್ದಿನಿಂದ ಪರಿಹಾರ..! ಉಷ್ಣಕಾಲದಲ್ಲಿ ವೈರಸ್‌ಗಳಿಂದ ಬಾಧಿಸುವ ಸಮಸ್ಯೆ ಇದು. ದೇಹದ ರೋಗನಿರೋಧಕ ಶಕ್ತಿ ಕಡಿಮೆ ಇರುವಾಗ, ಈ ರೋಗದ ವೈರಾಣು ದೇಹ ಪ್ರವೇಶಿಸಬಹುದು. ಮೊದಲೇ ದೇಹಸ್ಥಿತ ರೋಗಾಣುಗಳ ಪ್ರಭಾವಕ್ಕೆ ಒಳಗಾಗಿದ್ದರೂ ಸರ್ಪಸುತ್ತು ಕಂಡು ಬರುತ್ತದೆ.[೧] ತ್ವಚೆ ಮೇಲೆ ಕೆಂಪನೆ ಚಿಕ್ಕಚಿಕ್ಕ ನೀರ್ಗುಳ್ಳೆಗಳು ಪಟ್ಟೆಯಾಕಾರದಲ್ಲಿ ದೇಹದ ಒಂದು ಪಾರ್ಶ್ವದಲ್ಲಿ ಕಂಡುಬರುತ್ತವೆ. ಈ ನೀರ್ಗುಳ್ಳೆಗಳು ನರತಂತುಗಳನ್ನು ಬಾಧಿಸುವುದರಿಂದ ಉರಿ, ನವೆ ಊಂಟಾಗುತ್ತವೆ. ನರತಂತುಗಳ ಜಾಲಗಳಲ್ಲಿ ಇವು ಪಸರಿಸುತ್ತವೆ. ಇದನ್ನು ಜನಸಾಮಾನ್ಯರು ಸರ್ಪದ ಚರ್ಮ ಅಥವಾ ಹೆಡೆಯ ರೂಪವನ್ನು ಕಲ್ಪಿಸಿಕೊಂಡು, ಸರ್ಪ ದೋಷದಿಂದ ಬರುವ ಸಮಸ್ಯೆ ಎಂದು ಪರಿಗಣಿಸುತ್ತಾರೆ, ಸರ್ಪದ ಬಗ್ಗೆ ಇರುವ ಸಹಜ ಭಯ ಮತ್ತು ದೇವತಾರೂಪಿ ನಂಬಿಕೆಯಿಂದ ದೇವರು ಮುನಿದ ಎಂಬ ಆತಂಕದ ಛಾಯೆ ಆವರಿಸುವುದೂ ಉಂಟು. ಸರ್ಪಸುತ್ತು ಪರಿಹರಿಸಲು ಕೆಲವೊಂದು ಮನೆಮದ್ದುಗಳನ್ನು ನೀವು ಅನುಸರಿಸಬಹುದು. ಅವು ಏನು ಎಂಬುದನ್ನು ನೋಡೋಣ. ಸರ್ಪಸುತ್ತು ಆದ ಜಾಗಕ್ಕೆ ಶುದ್ಧ ಜೇನುತುಪ್ಪವನ್ನು ತೆಳ್ಳಗೆ ಲೇಪ ಮಾಡಿದರೆ ನೋವು, ತುರಿಕೆ ಕಡಿಮೆಯಾಗುತ್ತದೆ. ದಾಸವಾಳದ ದಳಗಳನ್ನು ನೀರಲ್ಲಿ ಪೇಸ್ಟ್‌ ಮಾಡಿ ಗುಳ್ಳೆಗಳ ಮೇಲೆ ಲೇಪಿಸಿದರೆ ಉರಿ, ನೋವು ಮತ್ತು ಗುಳ್ಳೆಗಳು ಶಮನವಾಗುತ್ತವೆ. ಜೇಷ್ಠಮಧುಗೆ ನೀರನ್ನು ಬೆರೆಸಿ ಕಷಾಯ ಮಾಡಿ ಸೇವಿಸಿದರೆ ಪಿತ್ತ ಶಮನವಾಗಿ ರಕ್ತ ಶುದ್ಧಿಯಾಗುತ್ತದೆ ಸರ್ಪಸುತ್ತು ಕಡಿಮೆಯಾಗುತ್ತದೆ. ಸರ್ಪಸುತ್ತು ಆದ ಜಾಗಕ್ಕೆ ಶುದ್ಧ ಕೊಬ್ಬರಿ ಎಣ್ಣೆಯನ್ನು ದಿನಕ್ಕೆ 2ರಿಂದ 3 ಬಾರಿ ಹಚ್ಚಿದರೆ ಉರಿ, ಕಡಿತ ಕಡಿಮೆಯಾಗಿ ಚರ್ಮ ಮೃದುವಾಗುತ್ತದೆ. ಹಸುವಿನ ಹಾಲಿಗೆ ಅರಿಶಿನ ಹಾಕಿ ಚೆನ್ನಾಗಿ ಕುದಿಸಿ ರಾತ್ರಿ ಮಲಗುವ ಮುನ್ನ ಸೇವಿಸಿದರೆ ರಕ್ತ ಶುದ್ಧಿಯಾಗಿ ಸರ್ಪಸುತ್ತು ಕಡಿಮೆಯಾಗುತ್ತದೆ. ಸರ್ಪಸುತ್ತು ಇರುವ ಜಾಗಕ್ಕೆ ಅಲೋವೆರಾ ಜೆಲ್‌ ಜತೆ ಜೇನುತುಪ್ಪ ಸೇರಿಸಿ ಲೇಪ ಮಾಡಿದರೆ ಬೇಗ ಗಾಯಗಳು ಮಾಯುತ್ತದೆ ಮತ್ತು ಕಲೆಗಳೂ ಇರುವುದಿಲ್ಲ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.