ಇದು ಸ್ಟಾರ್ ಫ್ರೂಟ್..!

Video Description

ಸ್ಟಾರ್ ಫ್ರುಟ್ ಆರೋಗ್ಯ ಗಣಿ ಹೇಗೆ? ಇದು ಸ್ಟಾರ್ ಫ್ರೂಟ್..! ಕಮರಾಕ್ಷಿ ಒಂದು ರಸವತ್ತಾದ ಮೃದು ಹಣ್ಣು. ನಮ್ಮಲ್ಲಿ ಇದನ್ನು ಇತರ ದೇಶಗಳಲ್ಲಿದ್ದಂತೆ ವಾಣಿಜ್ಯವಾಗಿ ಯಾರೂ ಬೆಳೆಯುತ್ತಿಲ್ಲ. ಕ್ಯಾಲಿಫೋರ್ನಿಯಾ, ಹವಾಯ್‌, ಚೀನಾ ತೈವಾನ್‌, ಕ್ವೀನ್ಸ್‌ಲ್ಯಾಂಡ್‌ ಮುಂತಾದೆಡೆ ಕಮರಾಕ್ಷಿಯ ಮರಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ನಮ್ಮ ದೇಶದಲ್ಲಿ ಹಣ್ಣಿನ ತೋಟಗಳು, ಕೈತೋಟಗಳು, ಸಸ್ಯೋದ್ಯಾನ, ದೊಡ್ಡ ಕಟ್ಟಡಗಳ ಪೌಳಿಗೋಡೆಯ ಆವರಣ, ಸಾಲುಮರವಾಗಿ, ತೋಟಗಾರಿಕೆ ಸಸಿಮಡಿಗಳು ಮುಂತಾದೆಡೆ ಈ ಹಣ್ಣಿನ ಮರವನ್ನು ಕಾಣಬಹುದು. ಸ್ಟಾರ್ ಫ್ರೂಟ್ ಎಂದೂ ಕರೆಯಲ್ಪಡುವ ಪದಾರ್ಥ ಕರಗಲಕಾಯಿ. ಹಣ್ಣು ಅಥವಾ ಕಾಯಿ ಎರಡೂ ಸಮಯದಲ್ಲಿ ಬಳಸಲ್ಪಡುತ್ತದೆ. ಹೇರಳವಾಗಿ ವಿಟಮಿನ್ ಎ, ಬಿ, ಸಿ, ಇ ಹೊಂದಿರುವ ಇದು, ನಾರಿನಂಶ, ಝಿಂಕ್, ಪೊಟ್ಯಾಷಿಯಂ, ಮೆಗ್ನೇಷಿಯಂ, ಪಾಸ್ಪರಸ್, ಸೋಡಿಯಂ, ಕ್ಯಾಲ್ಶಿಯಂ, ಕಬ್ಬಿಣ, ಫೋಲಿಕ್ ಆಮ್ಲಗಳನ್ನೂ ಹೊಂದಿದೆ. ಅಲ್ಲದೆ ಅನೇಕ ಪಾಲಿ ಫಿನಾಲ್ ಸಂಯುಕ್ತಗಳು, ಕ್ವಾರ್ಸೆಟಿನ್, ಗಾಲಿಕ್ ಆಮ್ಲ ಮತ್ತು ಎಪಿಕೆಟಕಿನ್​ಗಳೆಂಬ ಆಂಟಿ ಆಕ್ಸಿಡೆಂಟ್​ಗಳನ್ನೂ ಇದು ಹೊಂದಿದೆ. ಮೊಡವೆಯನ್ನು ಕಡಿಮೆ ಮಾಡಿಕೊಳ್ಳಲು ಕರಗಲಕಾಯಿಯ ಪೇಸ್ಟ್ ಹಚ್ಚಿಕೊಳ್ಳಬಹುದು. ಕ್ಯಾನ್ಸರ್ ಇರುವವರಿಗೆ ಕರಗಲಕಾಯಿ ಸೇವನೆಯು ಆರೋಗ್ಯಸ್ನೇಹಿಯಾಗಿ ಕೆಲಸ ಮಾಡುತ್ತದೆ. ಗಂಟಲುನೋವು, ಸಂದುನೋವನ್ನು ಕಡಿಮೆ ಮಾಡುವಲ್ಲಿ ಸಹ ಸಹಕಾರಿಯಾದ ಪದಾರ್ಥ ಇದಾಗಿದೆ. ಈ ಸಮಸ್ಯೆಯ ಪರಿಹಾರಕ್ಕೆ ಇದರಲ್ಲಿನ ಉರಿಯೂತ ನಿವಾರಣಾ ಗುಣ ಕಾರಣ. ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳನ್ನು ಕಡಿಮೆ ಮಾಡಲು, ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು, ಹೃದಯದ ಆರೋಗ್ಯವನ್ನು ವೃದ್ಧಿಸಲು, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು, ಮಧುಮೇಹಿಗಳಿಗೂ ಉತ್ತಮವಾದಂತಹ ಪದಾರ್ಥ ಇದಾಗಿದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಲು ಹಾಗೂ ಶ್ವಾಸಕೋಶಗಳ ಆರೋಗ್ಯ ವರ್ಧನೆ ಮಾಡಲು, ಕೂದಲಿನ ಆರೋಗ್ಯಕ್ಕೆ ಈ ಹಣ್ಣು ಸಹಕಾರಿ. ಕಮರಾಕ್ಷಿ ಹಣ್ಣಿನ ಬಹುಭಾಗ ನೀರು ಆಗಿರುತ್ತದೆ. ಹುಳಿ ಬಗೆಗಳ ಹಣ್ಣುಗಳಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿರುತ್ತದೆ. ಸಿಹಿಬಗೆಗಳಲ್ಲಿನ ಸಕ್ಕರೆ ಅಂಶ ಗ್ಲೂಕೋಸ್‌ ಆಗಿರುತ್ತದೆ. ಹುಳಿ ಬಗೆಗಳಲ್ಲಿನ ಹುಳಿಗೆ ಆಕ್ಸಾಲಿಕ್‌ ಆಮ್ಲ ಹೆಚ್ಚು ಕಾರಣವಿರುತ್ತದೆ. ಹಣ್ಣುಗಳಲ್ಲಿ ಶರ್ಕರಪಿಷ್ಟ, ಪ್ರೋಟೀನ್‌, ಜಿಡ್ಡು, ಖನಿಜಪದಾರ್ಥ, ನಾರು, ಸುಣ್ಣ, ರಂಜಕ, ಕಬ್ಬಿಣ, ಪೊಟ್ಯಾಷಿಯಂ, ಮೆಗ್ನೀಷಿಯಂ, ಕೆರೊಟಿನ್‌, ಕ್ಯಾಲೋರಿಸತ್ವ ಮುಂತಾದವು ವಿವಿಧ ಪ್ರಮಾಣಗಳಲ್ಲಿ ಇರುತ್ತವೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.