ಬಹೂಪಯೋಗಿ ಬೆಂಡೆ..!

Video Description

ಬೆಂಡೆಕಾಯಿ ಎಂಬ ತರಕಾರಿಯನ್ನು ಹಲವು ರೀತಿಯ ಜೀವಸತ್ವಗಳ ಆಗಾರ ಎನ್ನಬಹುದು. ಇದರಿಂದ ತಯಾರಿಸುವ ಅಡುಗೆ ಸಹ ಬಹಳ ರುಚಿಯಾಗಿರುತ್ತದೆ. ಇನ್ನು ಕೆಲವರಿಗೆ ಬೆಂಡೆ ಎಂದರೇನೇ ಅಷ್ಟಕಷ್ಟೆ. ಆದರೆ ಈ ತರಕಾರಿಯಿಂದ ಸಿಗುವ ಪ್ರಯೋಜನಗಳು ಮಾತ್ರ ಅಷ್ಟಿಷ್ಟಲ್ಲ. ಇದರಲ್ಲಿ ಅಡಗಿರುವ ಪೋಷಕಾಂಶಗಳು ಹಲವು ರೋಗಗಳಿಗೆ ಮನೆಮದ್ದು. ಕಡಿಮೆ ಕ್ಯಾಲೊರಿಗಳನ್ನು ಒಳಗೊಂಡಿರುವ ಬೆಂಡೆಕಾಯಿಯಲ್ಲಿ ವಿಟಮಿನ್, ಮಿನರಲ್ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಅದರಲ್ಲೂ ಮುಖ್ಯವಾಗಿ ಈ ತರಕಾರಿಯಲ್ಲಿ ಫೈಬರ್ ಅಂಶ ಹೇರಳವಾಗಿರುತ್ತದೆ ಎಂಬುದು ನೆನಪಿರಲಿ. ದೇಹದ ಬೊಜ್ಜು ಕಡಿಮೆ ಮಾಡಲು ಬೆಂಡೆ ಕಾಯಿ ತಿನ್ನುವುದು ಉತ್ತಮ. ಏಕೆಂದರೆ ಇದು ದೇಹ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರಿ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಇದರಿಂದ ದೇಹ ತೂಕವು ನಿಯಂತ್ರಣಕ್ಕೆ ಬರಲಿದೆ. ಹಾಗೆಯೇ ರಾತ್ರಿಯಲ್ಲಿ ಬೆಂಡೆ ಕಾಯಿ ತುಂಡುಗಳನ್ನು ನೀರಿನಲ್ಲಿರಿಸಿ ಬೆಳಿಗ್ಗೆ ಆ ನೀರನ್ನು ಕುಡಿಯುವುದರಿಂದ ಸಹ ಬೊಜ್ಜನ್ನು ಕರಗಿಸಿಕೊಳ್ಳಬಹುದು. ಈ ತರಕಾರಿಯಲ್ಲಿ ವಿಟಮಿನ್ ಎ ಹೇರಳವಾಗಿ ಕಂಡುಬರುತ್ತದೆ. ವಿಟಮಿನ್ ಎ ತರಕಾರಿ ಸೇವನೆಯಿಂದ ದೃಷ್ಟಿ ದೋಷದಂತಹ ಸಮಸ್ಯೆಗೆ ಪರಿಹಾರ ಕಾಣಬಹುದು. ಹಾಗೆಯೇ ಬೆಂಡೆಕಾಯಿಯಲ್ಲಿ ಲುಟೀನ್, ಬೀಟಾ-ಕ್ಯಾರೋಟಿನ್, ಅ್ಯಂಟಿ-ಆಕ್ಸಿಡೆಂಟ್ ಗಳನ್ನು ಹೊಂದಿರುವುದರಿಂದ ಚರ್ಮ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಕಣ್ಣಿನ ಕಾಯಿಲೆಗಳನ್ನು ದೂರ ಮಾಡುತ್ತದೆ. ಬೆಂಡೆಯಲ್ಲಿ ನಾರಿನಾಂಶದ ಪ್ರಮಾಣವು ಅಧಿಕದಲ್ಲಿರುತ್ತದೆ. ಇದನ್ನು ನಿಮ್ಮ ಆಹಾರದಲ್ಲಿ ಬಳಸುವುದರಿಂದ ಹೊಟ್ಟೆ ನೋವು, ಗ್ಯಾಸ್ ಸಮಸ್ಯೆ, ಅತಿಸಾರ, ಮಲಬದ್ದತೆ ಮತ್ತು ಆ್ಯಸಿಡಿಟಿಯಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಈ ತರಕಾರಿಯಲ್ಲಿ ಗ್ಲೈಸೆಮಿಕ್ ಇನ್​ಡೆಕ್ಸ್​ ಕಡಿಮೆ ಮಟ್ಟದಲ್ಲಿರುವುದರಿಂದ ದೇಹದ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಿಸುತ್ತದೆ. ಬೆಂಡೆಕಾಯಿಯನ್ನು ಬೇಯಿಸಿ ಅಥವಾ ಹಸಿಯಾಗಿಯೇ ತಿಂದರೆ ಅದರಲ್ಲಿರುವ ನಾರಿನಾಂಶವು ದೇಹದಲ್ಲಿನ ರಕ್ತದಂಶವನ್ನು ನಿಯಂತ್ರಣದಲ್ಲಿಡುತ್ತದೆ. ಬೆಂಡೆಕಾಯಿಯಲ್ಲಿ ವಿಟಮಿನ್ ಎ, ಲುಟೈನ್, ಕ್ಸಂಟೈನ್ ಮತ್ತು ಬೆಟಾ ಕ್ಯಾರೋಟಿನ್ ಅಂಶಗಳಿವೆ. ಇದು ಕಣ್ಣಿನ ದೃಷ್ಟಿಗೆ ತುಂಬಾ ಒಳ್ಳೆಯದು. ಬೆಂಡೆಕಾಯಿಯು ತೂಕ ಕಳೆದುಕೊಳ್ಳಲು ಸಹಕಾರಿ. ಇದರಲ್ಲಿ ತುಂಬಾ ಕಡಿಮೆ ಮಟ್ಟದ ಕ್ಯಾಲೋರಿಗಳಿವೆ. ಇದರಲ್ಲಿ ಯಾವುದೇ ರೀತಿಯ ಸಂಸ್ಕರಿತ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲ. ದೇಹದಲ್ಲಿರುವ ವಿಷಕಾರಿ ಅಂಶಗಳು ಹಾಗೂ ಕೊಲೆಸ್ಟ್ರಾಲ್ ನ್ನು ಬೆಂಡೆಕಾಯಿಯು ಹೊರಹಾಕುತ್ತದೆ. ನಿಮಗೆ ಬೆಂಡೆಕಾಯಿ ಇಷ್ಟವಿಲ್ಲದೆ ಇದ್ದರೆ ನೆನೆಸಿದ ಬೆಂಡೆಕಾಯಿಯ ನೀರನ್ನು ಕುಡಿಯಿರಿ. ಪುರಾತನ ಕಾಲದಲ್ಲಿ ಭಾರತದಲ್ಲಿ ಐಬಿಎಸ್ ಮತ್ತು ಅಲ್ಸರ್ ಕಾಯಿಲೆ ಗುಣಪಡಿಸಲು ಬೆಂಡೆಕಾಯಿಯನ್ನು ಉಪಯೋಗಿಸುತ್ತಿದ್ದರು. ಇದನ್ನು ಔಷಧಿಯಾಗಿಯೂ ಉಪಯೋಗಿಸಿಕೊಳ್ಳಬಹುದು. ದೇಹದಲ್ಲಿರುವ ವಿಷಕಾರಿ ಅಂಶಗಳು ಹಾಗೂ ಕೊಲೆಸ್ಟ್ರಾಲ್‌ನ್ನು ಬೆಂಡೆಕಾಯಿಯು ಹೊರಹಾಕುತ್ತದೆ. ನಿಮಗೆ ಬೆಂಡೆಕಾಯಿ ಇಷ್ಟವಿಲ್ಲದೆ ಇದ್ದರೆ ನೆನೆಸಿದ ಬೆಂಡೆಕಾಯಿಯ ನೀರನ್ನು ಕುಡಿಯಿರಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.