ಗರಿಕೆ ಹುಲ್ಲಿನಿಂದಾಗುವ ಆರೋಗ್ಯ ಲಾಭಗಳಿವು..!

Video Description

ಗರಿಕೆ ಹುಲ್ಲಿನಲ್ಲಿದೆ ದುಪ್ಪಟ್ಟು ಆರೋಗ್ಯ ಲಾಭಗಳು ಗರಿಕೆ ಹುಲ್ಲಿನಿಂದಾಗುವ ಆರೋಗ್ಯ ಲಾಭಗಳಿವು..! ಪೋಯೇಸಿ ಕುಟುಂಬಕ್ಕೆ ಸೇರಿದ ಗರಿಕೆ ಹುಲ್ಲು ಬಹುವಾರ್ಷಿಕ ಗಿಡವಾಗಿದೆ. ಇದು ಉಷ್ಣ ಮತ್ತು ಸಮಶೀತೋಷ್ಣ ವಲಯಗಳಲ್ಲಿ ಬೆಳೆಯುತ್ತದೆ. ಭಾರತದಲ್ಲಿ ಸಮುದ್ರಮಟ್ಟದಿಂದ ಹಿಡಿದು 2500 ಮೀ ಎತ್ತರದ ವರೆಗಿನ ಪ್ರದೇಶಗಳಲ್ಲಿ ಇದನ್ನು ಕಾಣಬಹುದು. ರಸ್ತೆ ಮತ್ತು ಕಾಲುದಾರಿಗಳ ಅಂಚಿನಲ್ಲಿ ಸಮೃದ್ಧಿಯಾಗಿ ಬೆಳೆದಿರುತ್ತದೆ. ಬಂಜರು ಬಿಟ್ಟಿರುವ ಭೂಮಿಯನ್ನು ಈ ಹುಲ್ಲು ಬಹುಬೇಗ ಆವರಿಸಿಕೊಳ್ಳುವುದು. ಇದು ಎಲ್ಲ ಬಗೆಯ ಮಣ್ಣುಗಳಲ್ಲಿ ಬೆಳೆಯಬಲ್ಲದಾದರೂ ಗಟ್ಟಿ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ವರ್ಷದ ಎಲ್ಲ ಕಾಲಗಳಲ್ಲೂ ಹೂ ಬಿಡುವುದು ಇದರ ಪ್ರಮುಖ ಲಕ್ಷಣಗಳಲ್ಲೊಂದು. ಗರಿಕೆ ಹುಲ್ಲನ್ನು ಕಾಂಡ ಅಥವಾ ಬೇರು ಭಾಗಗಳನ್ನು ಕತ್ತರಿಸಿ ನೆಟ್ಟು ಬೆಳೆಸಬಹುದು. ಬೀಜಗಳಿಂದಲೂ ಬೆಳೆಸಬಹುದು. ರೆಂಬೆಗಳಲ್ಲಿ ಗೆಣ್ಣುಗಳಲ್ಲಿ ಬೇರು ಬಿಟ್ಟುಕೊಂಡು ಹಬ್ಬಿ ಹರಡಿಕೊಳ್ಳುತ್ತವೆ. ಕಾಂಡದ ಕವಲುಗಳು ಬಳ್ಳಿಯಂತೆ 1-1.2 ಮೀ ಉದ್ದಕ್ಕೆ ಬೆಳೆಯುತ್ತವೆ. ಮಳೆಗಾಲದಲ್ಲಿ 5-7 ಮೀ ವರೆಗೂ ವರ್ಧಿಸಿರುವುದುಂಟು. ಹೂಗಳು ಸ್ಪೈಕ್ ಮಾದರಿಯ ಗೊಂಚಲಲ್ಲಿ ಸಮಾವೇಶಗೊಂಡಿವೆ. ಒಂದೊಂದು ಗೊಂಚಲಲ್ಲೂ 3-6 ಕವಲು ಗೊಂಚಲುಗಳಿರುತ್ತವೆ. ಬೇರಾವ ಹುಲ್ಲಿಗಿಂತಲೂ ದನಕರುಗಳಿಗೆ, ಅದರಲ್ಲೂ ಕುದುರೆಗಳಿಗೆ, ಹೆಚ್ಚು ಉಪಯುಕ್ತವಾದ ಮೇವೆಂದರೆ ಗರಿಕೆಹುಲ್ಲು. ಇದನ್ನು ಹಸಿಯಾಗಿ ಇಲ್ಲವೆ ಒಣಗಿಸಿ ತಿನ್ನಿಸಬಹುದು. ಕಾಕಂಬಿ ಜೊತೆಯಲ್ಲಿ ಬೆರೆಸಿ ಕೆಡದಂತೆ ಅನೇಕ ವರ್ಷಗಳವರೆಗೆ ಇದನ್ನು ಕಾದಿಟ್ಟ ಹುಲ್ಲಾಗಿ ಅಥವಾ ಹಗೇವು ಮೇವಾಗಿ ಇಡಬಹುದು. ತೆನೆ ಬಿಟ್ಟಾಗ ಇದನ್ನು ಕತ್ತರಿಸಿ ಒಣಗಿಸುವುದು ರೂಢಿಯಲ್ಲಿರುವ ಕ್ರಮ. ಒಂದು ಎಕರೆಗೆ 15-20 ಮಣದಷ್ಟು ಹುಲ್ಲು ದೊರೆಯುತ್ತದೆ. ಸರಿಯಾಗಿ ಗೊಬ್ಬರ ಮತ್ತು ನೀರನ್ನು ಒದಗಿಸಿ ಇಳುವರಿಯನ್ನು ಹೆಚ್ಚಿಸಬಹುದು. ವರ್ಷಕ್ಕೆ ಕೊನೆಯ ಪಕ್ಷ 4 ಬಾರಿ ಕಟಾಯಿಸಬಹುದು. ಇದರ ಗುಪ್ತಕಾಂಡಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ, ಸಗಣಿಯೊಂದಿಗೆ ಬೆರೆಸಿ ಕೆತ್ತಿದ ಭೂಮಿಯ ಮೇಲೆ, ಮಳೆ ಪ್ರಾರಂಭವಾಗುವ ಮುನ್ನ ಹಾಕಿದರೆ, ಮಳೆಗಾಲದ ಕೊನೆಗೆ ಚೆನ್ನಾಗಿ ಬೆಳೆದು ಹರಡಿಕೊಳ್ಳುತ್ತದೆ. ಹಿಂದಿನ ಕಾಲದಿಂದಲೂ ರಕ್ತ ಸೋರುವಿಕೆ ತಡೆಗಟ್ಟಲು ಗರಿಕೆ ಹುಲ್ಲನ್ನು ಉಪಯೋಗಿಸಲಾಗುತ್ತದೆ. ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ, ಗರಿಕೆ ರಸವನ್ನು ಎರಡು ಬಿಂದು ಬಿಟ್ಟರೆ ತಕ್ಷಣ ರಕ್ತ ಸೋರುವುದು ನಿಲ್ಲುತ್ತದೆ. ಆದರೆ ಅಧಿಕ ಪ್ರಮಾಣದಲ್ಲಿ ರಸವನ್ನು ಮೂಗಿಗೆ ಬಿಟ್ಟುಕೊಳ್ಳುವುದೂ ಒಳ್ಳೆಯದಲ್ಲ. ಮಕ್ಕಳು ಬಿದ್ದು ಗಾಯ ಮಾಡಿಕೊಂಡು ರಕ್ತ ಸೋರುತ್ತಿದ್ದರೆ, ಗರಿಕೆ ಹುಲ್ಲಿನ ರಸವನ್ನು ಬಿಟ್ಟರೆ ಸೋರುವುದು ನಿಲ್ಲುತ್ತದೆ. ಗರಿಕೆ ರಸವನ್ನು ಹಾಗೇ ಜಗಿಯಬಹುದು ಅಥವಾ ರಸ ಕುಡಿಯುವುದರಿಂದ ಎಲುಬು ಗಟ್ಟಿಗೊಳಿಸುವುದಲ್ಲದೆ, ರಕ್ತಸ್ರಾವವನ್ನೂ ತಡೆಗಟ್ಟುವ ಶಕ್ತಿ ನೀಡುತ್ತದೆ. ಗರಿಕೆಹುಲ್ಲಿನ ಕಷಾಯ ಮೂತ್ರಸ್ರಾವವನ್ನು ಹೆಚ್ಚಿಸುತ್ತದೆ. ಜಲೋದರ ರೋಗಕ್ಕೆ ಔಷಧವಾಗಿಯೂ ಇದರ ಬಳಕೆ ಉಂಟು. ಬೇರು ಮತ್ತು ಗುಪ್ತಕಾಂಡಗಳಿಂದ ಮೂತ್ರಜನಕಾಂಗ ಮತ್ತು ಜನನಾಂಗಗಳ ಕೆಲವು ರೋಗಗಳ ನಿವಾರಣೆಗೆ ಔಷಧಿಯನ್ನು ತಯಾರಿಸುತ್ತಾರೆ. ರಕ್ತಸ್ರಾವವನ್ನು ತಡೆಯಲು ಕೂಡ ಇದನ್ನು ಬಳಸುವುದುಂಟು. ಗರಿಕೆ ಹುಲ್ಲು ಮೆಣಸು ಜೀರಿಗೆ ಒಟ್ಟಿಗೆ ಸೇರಿಸಿ ಒಂದು ಗ್ಲಾಸ್ ನೀರು ಹಾಕಿ ರುಬ್ಬಿಕೊಳ್ಳಿ. ಇದನ್ನು ಸೋಸಿಕೊಂಡು ಇದಕ್ಕೆ ಸಕ್ಕರೆ ಸ್ವಲ್ಪ ಉಪ್ಪು ಸೇರಿಸಿ ಸೇವಿಸಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಗರಿಕೆ ರಸವನ್ನು ಕುಡಿಯಿರಿ ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಮಧುಮೇಹ, ಚರ್ಮದ ಸೋಂಕುಗಳನ್ನು ನಿವಾರಿಸಲು ಗರಿಕೆ ಹುಲ್ಲಿನ ರಸ ಸಹಾಯಕವಾಗಿದೆ. ಜೀರ್ಣಕ್ರಿಯೆಯನ್ನು ಸುಧಾರಿಸುವ ಗರಿಕೆ ಹುಲ್ಲು ಹೊಟ್ಟೆಯ ಕಾಯಿಲೆಗಳನ್ನು ದೂರಮಾಡುತ್ತದೆ. ಈ ಹುಲ್ಲು 65% ಕ್ಲೋರೋಫಿಲ್ ಅನ್ನು ಹೊಂದಿರುತ್ತದೆ. ಇದು ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ನರಗಳ ದೌರ್ಬಲ್ಯ ಮತ್ತು ಸಾಮಾನ್ಯ ಆಯಾಸವನ್ನು ಇದು ನಿವಾರಿಸುತ್ತದೆ ಮತ್ತು ದೇಹಕ್ಕೆ ಬಲ ಹಾಗೂ ಸಾಮರ್ಥ್ಯವನ್ನು ನೀಡುತ್ತದೆ. ಇದು ದೇಹದಿಂದ ವಿಷಕಾರಿ ಅಂಶಗಳನ್ನು ನಿವಾರಿಸುವ ಶಕ್ತಿಯನ್ನು ಪಡೆದುಕೊಂಡಿದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.