ಬದನೆಕಾಯಿ- ಆರೋಗ್ಯದ ಲಾಭಗಳು..!

Video Description

ಬದನೆಕಾಯಿಯಲ್ಲಿದೆ ಆರೋಗ್ಯಕಾರಿ ಅಂಶಗಳು ಬದನೆಕಾಯಿ- ಆರೋಗ್ಯದ ಲಾಭಗಳು..! ಬದನೆಕಾಯಿ, ಬಿಳಿ ಬದನೆ ಕಾಯಿ, ಗುಂಡು ಬದನೆಕಾಯಿ, ಬ್ರಿಂಜಲ್ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ತರಕಾರಿ ಯಾರಿಗೆ ತಾನೇ ಗೊತ್ತಿಲ್ಲ. ಇದರ ಸಸ್ಯಶಾಸ್ತ್ರೀಯ ಹೆಸರು ಸೊಲನಮ್ ಮೆಲೊಂಜೆನ ಎಂದು ಇದು ನೈಟ್‍ಶೇಡ್ ಅಥವಾ ಸೊಲನೇಸ್ ಕುಟುಂಬದ ಸದಸ್ಯ ತರಕಾರಿ. ಇದೇ ಕುಟುಂಬಕ್ಕೆ ಸೇರಿದ ಮತ್ತಿತರ ತರಕಾರಿಗಳು ಎಂದರೆ ಟೊಮಾಟೊ, ಸಿಹಿ ಮೆಣಸು ಮತ್ತು ಆಲೂಗಡ್ಡೆ. ಬೆಳೆಯುವ ವಿಧಾನವನ್ನು ಅವಲಂಬಿಸಿ ಬದನೆಕಾಯಿಯಲ್ಲಿ ನಾನಾ ವಿಧದ ಆಕಾರ ಮತ್ತು ಬಣ್ಣಗಳು ಕಂಡು ಬರುತ್ತವೆ. ಬದನೆಕಾಯಿಯು ಇಂಡಿಯನ್ ಕರಿ (ಎಣ್ಣೆಗಾಯಿ), ಚೈನೀಸ್ ಝೇಶುವನ್ ಎಗ್ಗ್‌ಪ್ಲಾಂಟ್, ಇಟಾಲಿಯನ್ ಎಗ್ಗ್‌ಪ್ಲಾಂಟ್ ಪರ್ಮೆಸನ್, ಮಿಡಲ್ ಈಸ್ಟ್ರನ್ ಎಗ್ಗ್‌ಪ್ಲಾಂಟ್ ಡಿಪ್ ಮತ್ತು ಮೊರೊಕ್ಕನ್ ಎಗ್ಗ್‌ಪ್ಲಾಂಟ್ ಸಲಾಡ್‌ಗಳಲ್ಲಿ ಪ್ರಮುಖವಾಗಿ ಬಳಸಲ್ಪಡುತ್ತದೆ. ಬದನೆಕಾಯಿಯಲ್ಲಿರುವ ಯಥೇಚ್ಛವಾದ ನಾರು ಮತ್ತು ಸೋಡಿಯಂಗಳು ರಕ್ತವು ಅಧಿಕ ಪ್ರಮಾಣದ ಗ್ಲೂಕೋಸನ್ನು ಹೀರಿಕೊಳ್ಳುವುದನ್ನು ತಡೆಯುತ್ತವೆ. ಆ ಮೂಲಕ ಇದು ಟೈಪ್ 2 ಮಧುಮೇಹವನ್ನು ಹೊಂದಿರುವ ರೋಗಿಗಳ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಫೆನಲ್‍ಗಳು ಮತ್ತು ಕಡಿಮೆ ಪ್ರಮಾಣದ ಗ್ಲಿಸೆಮಿಕ್‍ಗಳು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಹತೋಟಿಯಲ್ಲಿಡುತ್ತವೆ. ಹೀಗಾಗಿ ಇದು ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಆಹಾರವಾಗಿದೆ. ಬದನೆಕಾಯಿಯಲ್ಲಿ ಪೊಟಾಶಿಯಂ ಹೈಡ್ರೇಟ್ ಇರುತ್ತದೆ. ಇದು ದೇಹದಲ್ಲಿ ಧಾರಣೆಯಾಗಿರುವ ದ್ರವವನ್ನು ತೆಗೆದು ಹಾಕುತ್ತದೆ. ಹೀಗೆ ಇದು ಕರೋನರಿ ಹೃದ್ರೋಗ ಸಮಸ್ಯೆಯನ್ನು ನಿಯಂತ್ರಿಸುತ್ತದೆ. ಇದರಲ್ಲಿರುವ ಫೈಟೋನ್ಯೂಟ್ರಿಯೆಂಟ್‍ಗಳು ಕೊಲೆಸ್ಟ್ರಾಲನ್ನು ಕಡಿಮೆ ಮಾಡಿ, ರಕ್ತವು ಸರಾಗವಾಗಿ ಪರಿಚಲನೆಯಾಗಲು ನೆರವು ನೀಡುತ್ತದೆ.ಫೊಲೇಟ್, ಮ್ಯಗ್ನೀಷಿಯಂ, ವಿಟಮಿನ್ B3 ಮತ್ತು B6ಗಳು, ಆಂಟಿ ಆಕ್ಸಿಡೆಂಟ್‍ಗಳು ಮತ್ತು ಬೀಟಾ ಕೆರೋಟಿನ್‍ಗಳು ಸಹ ಹೃದ್ರೋಗದ ಸಮಸ್ಯೆಯನ್ನು ಕಡಿಮೆ ಮಾಡುತ್ತವೆ. ಬದನೆಕಾಯಿಯಲ್ಲಿ ಪ್ರಾಕೃತಿಕವಾಗಿ ಸ್ಯಾಚುರೇಟೇಡ್ ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಸೋಡಿಯಂ ಲಭ್ಯವಿರುತ್ತದೆ. ಫೈಟೋನ್ಯೂಟ್ರಿಯೆಂಟ್‌ಗಳು ಜೀವಕೋಶಗಳ ಹೊರ ಪೊರೆಯನ್ನು ಫ್ರೀ ರಾಡಿಕಲ್‍ಗಳು, ಆಕ್ಸಿಡೇಟ್‍ನ ಒತ್ತಡದಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಆ ಮೂಲಕ ನರ ಕೋಶದ ಕಾರ್ಯಕ್ಕೆ ಮತ್ತು ನೆನಪಿನ ಶಕ್ತಿಯು ತೀಕ್ಷ್ಣವಾಗಿ ಕೆಲಸ ಮಾಡಲು ನೆರವು ನೀಡುತ್ತದೆ. ಬದನೆಕಾಯಿಯಲ್ಲಿ ಇರುವ ಬಿ ಕಾಂಪ್ಲೆಕ್ಸ್ ವಿಟಮಿನ್‍ಗಳು ಒತ್ತಡವನ್ನು ಕಡಿಮೆ ಮಾಡುವುದಕ್ಕೆ ಸಹಕರಿಸುತ್ತವೆ. ಕಬ್ಬಿಣಾಂಶವು ದೇಹಕ್ಕೆ ಆಮ್ಲಜನಕದ ಪೂರೈಕೆಗೆ ಅತ್ಯಗತ್ಯವಾಗಿ ಬೇಕು. ಇದು ಹೆಚ್ಚಾದರೆ ದೇಹಕ್ಕೆ ಹಾನಿ ಸಹ. ಪ್ರಾಯಕ್ಕೆ ಬಂದ ಗಂಡು ಹೆಣ್ಣು ಇಬ್ಬರಲ್ಲಿಯೂ ಕಬ್ಬಿಣಾಂಶದ ಕೊರತೆಯು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬದನೆಕಾಯಿಯಲ್ಲಿರುವ ನಸುನಿನ್ ಎಂಬ ಅಂಶವು ದೇಹದಲ್ಲಿರುವ ಅಧಿಕ ಕಬ್ಬಿಣಾಂಶವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.