ಬೇವಿನ ಎಲೆ ಫೇಸ್ ಪ್ಯಾಕ್ ಕೇಳಿದ್ದೀರಾ..?

Video Description

ಬೇವಿನ ಎಲೆ ಫೇಸ್ ಪ್ಯಾಕ್ ಕೇಳಿದ್ದೀರಾ..? ಒಂದು ಮುಷ್ಠಿಯಷ್ಟು ತಾಜಾ ಕಹಿಬೇವಿನ ಎಲೆಗಳನ್ನು ಚೆನ್ನಾಗಿ ಅರೆದು ನೇರವಾಗಿ ತ್ವಚೆಗೆ ಹಚ್ಚಿ ಕೊಳ್ಳುವುದರಿಂದ ತ್ವಚೆಯ ಎಲ್ಲಾ ಸಮಸ್ಯೆಗಳನ್ನು ನಿವಾರಿಸಬಹುದು. ತ್ವಚೆಯ ಆರೈಕೆಗೆ ಬೇಕಾದ ಎಲ್ಲಾ ಪೋಷಕಾಂಶ ಗಳೂ ಕಹಿಬೇವಿನಲ್ಲಿವೆ. ಕಹಿಬೇವಿನಲ್ಲಿ ಅತ್ಯುತ್ತಮ ಬ್ಯಾಕ್ಟೀರಿಯಾ ನಿವಾರಕ ಗುಣ, ಉರಿಯೂತ ನಿವಾರಕ ಗುಣ, ಪ್ರತಿಜೀವಕ ಗುಣ ಮತ್ತು ಶಿಲೀಂಧ್ರ ನಿವಾರಕ ಗುಣಗಳಿವೆ. ಬೇವಿನಲ್ಲಿ ವಿಟಮಿನ್ ಇ ಅತ್ಯುತ್ತಮ ಪ್ರಮಾಣದಲ್ಲಿದೆ. ಚರ್ಮದ ಆರೈಕೆಗೆ ಈ ಪೋಷಕಾಂಶ ಅತಿ ಹೆಚ್ಚು ಅವಶ್ಯಕತೆ ಇದೆ. ಸ್ವಲ್ಪ ಬೇವಿನ ಎಲೆ ಅಥವಾ ಬೇವಿನ ಪೌಡರ್, ಒಂದು ಟೇಬಲ್ ಸ್ಪೂನ್ ಕಡಲೆ ಹಿಟ್ಟು, ಒಂದು ಟೀ ಸ್ಪೂನ್ ಮೊಸರು ಒಂದು ಬೌಲ್ ನಲ್ಲಿ ಮೊಸರು, ಕಡಲೆಹಿಟ್ಟು ಹಾಕಿ ಮಿಕ್ಸ್ ಮಾಡಿ ಪೇಸ್ಟ್ ರೀತಿ ತಯಾರಿಸಿಕೊಳ್ಳಿ . ನಂತರ ಇದಕ್ಕೆ ರುಬ್ಬಿಕೊಂಡ ಬೇವಿನ ಎಲೆ ಅಥವಾ ಬೇವಿನ ಪೌಡರ್ ಅನ್ನು ಸೇರಿಸಿ ಚೆನ್ನಾಗಿ ಕಲಸಿ. ಈಗ ಫೇಸ್ ಪ್ಯಾಕ್ ರೆಡಿಯಾಗುತ್ತದೆ. ಇದನ್ನು ಮುಖಕ್ಕೆ ಹಚ್ಚಿ 10-15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಒಣಗಿದ ಮೇಲೆ ತಣ್ಣೀರಿನಲ್ಲಿ ಮುಖ ತೊಳೆಯಿರಿ. ಇದರಲ್ಲಿರುವ ಮೊಸರಿನ ಅಂಶ ತ್ವಚೆಯನ್ನು ಮೃದುವಾಗಿಸುತ್ತದೆ. ಜೊತೆಗೆ ಬೇವಿನ ಎಲೆ ಹಾಗೂ ಕಡಲೆಹಿಟ್ಟು ಉಪಯೋಗಿಸುವುದರಿಂದ ತ್ವಚೆಯ ಒಳಗೆ ಅಡಗಿರುವ ಕೊಳೆ ಸಂಪೂರ್ಣವಾಗಿ ಹೋಗಿ, ಮುಖದ ಮೇಲೆ ನಾನಾ ಕಾರಣಗಳಿಂದ ಉಳಿದುಕೊಂಡಿರುವ ಕಲೆಗಳು ಮಾಯವಾಗುತ್ತದೆ. ಮತ್ತೆ ಮೊಡವೆಗಳು ಉಂಟಾಗುವುದಿಲ್ಲ. ಕನಿಷ್ಟ ಅಂದರೆ ಈ ಫೇಸ್ ಪ್ಯಾಕ್ ಅನ್ನು ವಾರದಲ್ಲಿ 2-3 ಬಾರಿಯಾದರೂ ಉಪಯೋಗಿಸಬೇಕು. ಅರಿಶಿನದಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಕಲೆ ನಿವಾರಣೆ ಮಾಡಿ ಗಾಯವನ್ನು ಒಣಗಿಸುವುದು. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗುಣವು ಚರ್ಮದ ಕೋಶಗಳಿಗೆ ಹಾನಿಯಾಗದಂತೆ ತಡೆಯುತ್ತದೆ. ಬೇವಿನ ಎಲೆಗಳಲ್ಲಿ ಮೊಡವೆ, ಕಪ್ಪುಕಲೆ ಮತ್ತು ತುರಿಕೆ ನಿವಾರಣೆ ಮಾಡುವ ಗುಣಗಳು ಇವೆ. ಸ್ವಲ್ಪ ಬೇವಿನ ಎಲೆಗಳು ಮತ್ತು ಒಂದು ಚಮಚ ಅರಶಿನ ಹಾಕಿ.ಇದನ್ನು ಸರಿಯಾಗಿ ರುಬ್ಬಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಇದನ್ನು 10-15 ನಿಮಿಷ ಕಾಲ ಹಾಗೆ ಬಿಡಿ. ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಮೊಡವೆ ನಿವಾರಣೆಗೆ ಪ್ರತಿನಿತ್ಯ ಈ ವಿಧಾನವನ್ನು ಅನುಸರಿಸಿಕೊಂಡು ಹೋಗಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.