ಹಸಿರು ಟೊಮ್ಯಾಟೋ ಹಲವು ರೋಗಗಳಿಗೆ ಮದ್ದು

Video Description

ಕಾಯಿ ಟೊಮ್ಯಾಟೋ ಬಹು ಆರೋಗ್ಯಕಾರಿ..! ಕಾಯಿ ಟೊಮೇಟೊ ಅಥವಾ ಹಸಿರು ಟೊಮೇಟೊದಲ್ಲಿ ವಿಟಮಿನ್ ಎ ಮತ್ತು ಸಿ ಅಂಶಗಳು ಹೇರಳವಾಗಿವೆ. ಇದರಲ್ಲಿ ಪೊಟಾಶಿಯಂ, ಐರನ್, ಕ್ಯಾಲ್ಶಿಯಂ, ಡಯೆಟರಿ ಫೈಬರ್, ಮೆಗ್ನೇಶಿಯಮ್ ಮತ್ತು ಇತರ ಮಿನರಲ್‌ಗಳಿವೆ. ಈ ಟೊಮೇಟೊಗಳನ್ನು ಹಾಗೆಯೇ ತಿನ್ನಬಹುದಾಗಿದ್ದು ಒಂದೆರಡು ದಿನದಲ್ಲೇ ಇದನ್ನೇ ಸೇವಿಸಬೇಕು. ನಿಮ್ಮ ಜೀರ್ಣಕ್ರಿಯೆಗೆ ಸಹಕಾರಿಯಾಗಿರುವ ಅಗತ್ಯ ಪೋಷಕಾಂಶಗಳನ್ನು ಹಸಿ ಟೊಮೇಟೊ ನೀಡುತ್ತದೆ. ಕಾಯಿ ಟೊಮೇಟೊದಲ್ಲಿ ಬೀಟಾ ಕ್ಯಾರಟಿನ್ ಅಂಶವಿದ್ದು ಇದು ನಿಮ್ಮ ಕಣ್ಣಿನ ಆರೋಗ್ಯಕ್ಕೆ ಅತ್ಯುತ್ತಮವಾದುದು. ಕ್ಯಾನ್ಸರ್ ಹಾಗೂ ಇರುಳು ಕುರುಡುತನವನ್ನು ಇದು ನಿವಾರಿಸುತ್ತದೆ. ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವ ಸಾಮರ್ಥ್ಯವನ್ನು ಕಾಯಿ ಟೊಮೇಟೊ ಹೊಂದಿದೆ. ಇದರಲ್ಲಿರುವ ವಿಟಮಿನ್ ಕೆ ಅಂಶವು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯತ್ತದೆ ಮತ್ತು ಮೂಳೆಯ ಸಾಮರ್ಥ್ಯವನ್ನು ಬಲಪಡಿಸುತ್ತದೆ. ವಿಟಮಿನ್ ಕೆ ಎಂಬುದು ಆರೋಗ್ಯಯುತ ಕೊಬ್ಬಾಗಿದ್ದು ಇದು ನಿಮ್ಮ ದೇಹಕ್ಕೆ ಅತ್ಯಗತ್ಯವಾಗಿದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.