ಗ್ರೀನ್ ಆಪಲ್ ನಲ್ಲಿದೆ ಹತ್ತಾರು ಆರೋಗ್ಯದ ಲಾಭ..!!

Video Description

ಗ್ರೀನ್ ಆಪಲ್ ನಲ್ಲಿದೆ ಹತ್ತಾರು ಆರೋಗ್ಯದ ಲಾಭ..!! ಹಣ್ಣುಗಳು ಹಾಗೂ ತರಕಾರಿಗಳು ಪೋಷಕಾಂಶಗಳ ಖಜಾನೆ ಎನ್ನಬಹುದು. ಇವುಗಳನ್ನು ಎಷ್ಟು ಹೆಚ್ಚು ಸೇವಿಸುತ್ತೇವೆಯೋ ಅಷ್ಟು ನಮ್ಮ ದೇಹವು ಆರೋಗ್ಯವಾಗಿರುತ್ತದೆ. ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು ಎನ್ನುವ ಮಾತಿದೆ. ಅದರಲ್ಲೂ ಕೆಂಪು ಸೇಬಿಗಿಂತ ಹಸಿರು ಸೇಬು (ಗ್ರೀನ್ ಆಪಲ್) ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೆಚ್ಚಿನವರು ಕೆಂಪು ಸೇಬನ್ನೇ ತಿನ್ನಲು ಬಳಸುತ್ತಾರೆ. ಕೆಂಪು ಸೇಬು ತುಂಬಾ ಸಿಹಿ ಮತ್ತು ಹಿಂದಿನಿಂದಲೂ ಅದನ್ನು ನಾವು ಬಳಸುತ್ತಾ ಇದ್ದೇವೆ. ಆದರೆ ಹಸಿರು ಸೇಬು ಕಚ್ಚಾ ಹಣ್ಣಿನಂತೆ ಕಾಣುವ ಕಾರಣದಿಂದ ಅದರ ಬಗ್ಗೆ ನಿರ್ಲಕ್ಷ್ಯ. ಆದರೆ ಕೆಂಪು ಸೇಬಿಗಿಂತ ಹಸಿರು ಸೇಬಿನಲ್ಲಿ ಆರೋಗ್ಯ ಲಾಭಗಳು ಅಧಿಕವಾಗಿವೆ. ಅದು ಯಾವುದೆಂದು ಮುಂದೆ ಓದುತ್ತಾ ತಿಳಿದುಕೊಳ್ಳಿ ಹಸಿರು ಸೇಬಿನ ಅತ್ಯಂತ ಮುಖ್ಯ ಲಾಭಗಳಲ್ಲಿ ಇದು ಒಂದಾಗಿದೆ. ಇದರ ಸಿಪ್ಪೆಯು ಅತ್ಯಧಿಕ ನಾರಿನಾಂಶವನ್ನು ಹೊಂದಿದ್ದು, ಜೀರ್ಣಕ್ರಿಯೆಯನ್ನು ಸುಗಮವಾಗಿಸುತ್ತದೆ. ಇದರಿಂದ ಕರುಳಿನ ಕ್ರಿಯೆಯು ಸರಾಗವಾಗಿ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಮೂಳೆಗಳ ಬೆಳವಣಿಗೆಗೆ ಬೇಕಾಗಿರುವಂತಹ ಖನಿಜಾಂಶಗಳಾದ ಕಬ್ಬಿಣ, ಕ್ಯಾಲ್ಸಿಯಂ, ಸತು, ಮೆಗ್ನಿಶಿಯಂ ಮತ್ತು ಪೊಟಾಶಿಯಂ ಇತ್ಯಾದಿ ಹಸಿರು ಸೇಬಿನಲ್ಲಿ ಸಮೃದ್ಧವಾಗಿದೆ. ಈ ಖನಿಜಾಂಶಗಳು ಮೂಳೆಗಳನ್ನು ಬಲಿಷ್ಠವಾಗಿಸುತ್ತದೆ. ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಿ ಸಂಧಿವಾತವನ್ನು ತಡೆಯುವುದು. ಹಸಿರು ಸೇಬನ್ನು ತಿನ್ನುವುದರಿಂದ ಆಗುವಂತಹ ಬಹುದೊಡ್ಡ ಲಾಭವಿದು. ಹಸಿರು ಸೇಬಿನಲ್ಲಿರುವ ನಾರಿನಾಂಶವು ಆರೋಗ್ಯಕ್ಕೆ ತುಂಬಾ ಲಾಭಕಾರಿ. ಇದು ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ತಡೆಯುವುದು. ಇದರಲ್ಲಿ ಹೆಚ್ಚು ಪ್ರಮಾಣದ ನಾರಿನಂಶವಿದ್ದು, ಇದು ನಮ್ಮ ದೇಹದಲ್ಲಿನ ಕಶ್ಮಲಗಳನ್ನು ತೊಳೆದು ಹಾಕುವುದಲ್ಲದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಹಸಿರು ಸೇಬು ನಮ್ಮ ಪಚನ ಕ್ರಿಯೆ ಮತ್ತು ಹೃದಯದ ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತದೆ. ಯಾವಾಗಲು ಹಸಿರು ಸೇಬನ್ನು ಅದರ ಸಿಪ್ಪೆಯ ಸಹಿತ ತಿನ್ನುವುದು ಒಳ್ಳೆಯದು. ಇದು ನಿಮ್ಮ ಕರುಳು ಮತ್ತು ಜೀರ್ಣಾಂಗದ ಎಲ್ಲಾ ಅಂಗಗಳನ್ನು ಪರಿಶುದ್ಧಗೊಳಿಸುತ್ತದೆ ಮತ್ತು ಆರೋಗ್ಯವಂತವನ್ನಾಗಿಸುತ್ತದೆ. ಹಸಿರು ಸೇಬಿನಲ್ಲಿ ಕಬ್ಬಿಣ, ಸತು, ತಾಮ್ರ, ಮ್ಯಾಂಗನೀಸ್, ಪೊಟಾಶಿಯಂ ಇತ್ಯಾದಿ ಖನಿಜಗಳು ಯಥೇಚ್ಛವಾಗಿವೆ. ಈ ಎಲ್ಲ ಖನಿಜಗಳು ಮಾನವನ ದೇಹಕ್ಕೆ ಅತ್ಯಾವಶ್ಯಕವಾದವುಗಳಾಗಿದ್ದು, ಆರೋಗ್ಯವರ್ಧಕಗಳಾಗಿ ಕಾರ್ಯ ನಿರ್ವಹಿಸುತ್ತವೆ. ಈ ಸೇಬಿನಲ್ಲಿರುವ ಕಬ್ಬಿಣಾಂಶವು ರಕ್ತದಲ್ಲಿ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದ ಆರೋಗ್ಯ ಕೂಡ ಸುಧಾರಿಸುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.