ಬೆಳ್ಳುಳ್ಳಿ ಒಂದು ಅತ್ಯುತ್ತಮ ಮದ್ದು..!

Video Description

ಬೆಳ್ಳುಳ್ಳಿ ಒಂದು ಅತ್ಯುತ್ತಮ ಮನೆಮದ್ದು ಹೇಗೆ? ಬೆಳ್ಳುಳ್ಳಿ ಒಂದು ಅತ್ಯುತ್ತಮ ಮದ್ದು..! ಭಾರತೀಯ ಅಡುಗೆಗಳು ಬೆಳ್ಳುಳ್ಳಿಯಿಲ್ಲದೆ ಅಪೂರ್ಣ. ಈ ಪುಟ್ಟ ಬೆಳ್ಳುಳ್ಳಿಯು ಉತ್ತಮ ಆರೋಗ್ಯಕ್ಕೆ ಬೇಕಾದ ಅಂಶಗಳ ಕಣಜವಾಗಿದೆ. ಇದು ನೋಡಲು ಗಟ್ಟಿಯಾಗಿದೆ ಮತ್ತು ರುಚಿಯಲ್ಲಿ ಕಹಿ ಆದರೆ ನಂಬಲಸಾಧ್ಯವಾದ ರೀತಿಯಲ್ಲಿ ಅಡುಗೆಗೆ ರುಚಿ ನೀಡುತ್ತದೆ. ಬೆಳ್ಳುಳ್ಳಿಯ ವಿವರಣೆ ಅದರ ಔಷಧೀಯ ಗುಣಗಳ ಬಗ್ಗೆ ಹೇಳದಿದ್ದರೆ ಅಪೂರ್ಣವಾಗುತ್ತದೆ. ಈ ಪವಾಡ ಸದೃಶ ಗುಣವುಳ್ಳ ಬೆಳ್ಳುಳ್ಳಿಯನ್ನು ಬಹಳ ಹಿಂದಿನಿಂದಲೂ ಹಲವು ಕಾಯಿಲೆಗಳನ್ನು ತಡೆಗಟ್ಟಲು ಮತ್ತು ಗುಣಪಡಿಸಲು ಬಳಸುತ್ತಿದ್ದಾರೆ. ಬೆಳ್ಳುಳ್ಳಿಯಲ್ಲಿ ಪ್ರಬಲವಾದ ಗಂಧಕದ ಸಂಯುಕ್ತಗಳಿರುವುದರಿಂದ ಇದಕ್ಕೆ ಘಾಟಿನ ವಾಸನೆಯಿದೆ. ಇದರಲ್ಲಿ ಅಲ್ಲಿಸಿನ್ ಎನ್ನುವ ಸಂಯುಕ್ತದಲ್ಲಿ ಆ್ಯಂಟಿ-ಬ್ಯಾಕ್ಟಿರಿಯಲ್, ಆ್ಯಂಟಿ-ವೈರಲ್, ಆ್ಯಂಟಿ-ಫಂಗಲ್ ಮತ್ತು ಆ್ಯಂಟಿ-ಆ್ಯಕ್ಸಿಡೆಂಟ್ ಗುಣಗಳಿವೆ. ಬೆಳ್ಳುಳ್ಳಿಯನ್ನು ಚೆನ್ನಾಗಿ ತುರಿದು ಅಥವಾ ಕತ್ತರಿಸಿ ಸ್ವಲ್ಪ ಹೊತ್ತು ಇಟ್ಟು ನಂತರ ಬಳಸಿದರೆ ಹೆಚ್ಚು ಉಪಯೋಗಗಳನ್ನು ಪಡೆಯಬಹುದು. ಬೆಳ್ಳುಳ್ಳಿಯು ತನ್ನ ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿವೈರಲ್ ಗುಣಗಳಿಗಾಗಿ ಪ್ರಸಿದ್ಧವಾಗಿದೆ. ಇದು ಬ್ಯಾಕ್ಟೀರಿಯಲ್, ವೈರಲ್, ಫಂಗಲ್, ಈಸ್ಟ್ ಮತ್ತು ಹುಳಗಳ ಸೋಂಕನ್ನು ನಿಯಂತ್ರಿಸಲು ನೆರವು ನೀಡುತ್ತದೆ. ತಾಜಾ ಬೆಳ್ಳುಳ್ಳಿಯು ಬ್ಯಾಕ್ಟಿರಿಯಾ E, ಕೊಲಿ, ಸಲ್ಮೊನೆಲ್ಲ, ಎಂಟೆರಿಟಿಡಿಸ್ ಇತ್ಯಾದಿಯನ್ನು ಕೊಲ್ಲುವ ಮೂಲಕ ಆಹಾರದ ವಿಷವನ್ನು ತಡೆಗಟ್ಟುತ್ತದೆ. ಬೆಳ್ಳುಳ್ಳಿಯಲ್ಲಿರುವ ಕೆಮಿಕಲ್ ಅಜೊಯೆನೆಯು ಉಗುರು ಸುತ್ತು ಮತ್ತು ಅಥ್ಲೆಟ್ಸ್ ಫೂಟ್ ನಂತಹ ಫಂಗಲ್ ಸೋಂಕನ್ನು ತಡೆಗಟ್ಟುತ್ತದೆ. ಬೆಳ್ಳುಳ್ಳಿಯಲ್ಲಿರುವ ಗುಣಗಳು ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಆ್ಯಂಜಿಯೊಟೆನ್ಸಿನ್ II ಎನ್ನುವ ಪ್ರೋಟೀನ್ ನಮ್ಮ ರಕ್ತನಾಳಗಳು ಸಂಕುಚಿತಗೊಳಿಸಿ ರಕ್ತದೊತ್ತಡವನ್ನುಂಟುಮಾಡುವಲ್ಲಿ ನೆರವಾಗುತ್ತದೆ. ಬೆಳ್ಳುಳ್ಳಿಯಲ್ಲಿರುವ ಅಲ್ಲಿಸಿನ್ ಈ ಚಟುವಟಿಕೆಯನ್ನು ನಿಯಂತ್ರಿಸುವ ಮೂಲಕ ರಕ್ತದೊತ್ತಡವನ್ನು ಕಡಿಮೆಮಾಡುತ್ತದೆ. ಬೆಳ್ಳುಳ್ಳಿಯಲ್ಲಿರುವ ಪಾಲೊಸಲ್ಫೈಡ್ಸ್ ಹೈಡ್ರೋಜಿನ್ ಸಲ್ಫೈಡ್ ಎನ್ನುವ ಅನಿಲವಾಗಿ ಕೆಂಪು ರಕ್ತ ಕಣಗಳಿಂದ ಪರಿವರ್ತಿತಗೊಳ್ಳುತ್ತದೆ. ಹೈಡ್ರೋಜಿನ್ ಸಲ್ಫೈಡ್ ರಕ್ತನಾಳಗಳನ್ನು ಸಡಿಲಗೊಳಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಬೆಳ್ಳುಳ್ಳಿಯು ಹೃದಯವನ್ನು ಹೃದಯ ಸಂಬಂಧಿ ತೊಂದರೆಗಳಾದ ಹೃದಯಾಘಾತ ಮತ್ತು ಅಥೆರೊಸ್ಕಲೆರೊಸ್ (atherosclerosis)ನಿಂದ ರಕ್ಷಿಸುತ್ತದೆ. ಬೆಳ್ಳುಳ್ಳಿಯ ಈ ಹೃದಯವನ್ನು ಕಾಪಾಡುವ ಗುಣಗಳಿಗೆ ಹಲವು ಕಾರಣಗಳಿವೆ. ವಯಸ್ಸಿನ ಕಾರಣದಿಂದಾಗಿ ಅಪಧಮನಿಗಳಿಗೆ ಹಿಗ್ಗುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಬೆಳ್ಳುಳ್ಳಿಯು ಇದನ್ನು ಕಡಿಮೆಗೊಳಿಸುತ್ತದೆ ಮತ್ತು ಹೃದಯಕ್ಕೆ ಆಕ್ಸಿಜನ್ ಕಣಗಳಿಂದುಂಟಾಗುವ ತೊಂದರೆಯನ್ನು ತಪ್ಪಿಸುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.