ಕಾಲುಂಗುರ ಧರಿಸುವ ಪ್ರಯೋಜನಗಳು

Video Description

ನೀವು ಅರಿತುಕೊಳ್ಳಲೇಬೇಕಾದ ಕಾಲುಂಗುರದ ಮಹತ್ವವೇನು? ಕಾಲುಂಗುರದ ಮಹತ್ವ ಹಿಂದೂ ಸಂಪ್ರದಾಯದಲ್ಲಿ ಕಾಲುಂಗುರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಮದುವೆಯಾದ ಮಹಿಳೆ ಧರಿಸಲೇಬೇಕಾದ ಒಂದು ಮುಖ್ಯವಾದ ಮಂಗಳಕರ ವಸ್ತು ಇದಾಗಿದೆ. ಆದರೆ ಇಂದು ಫ್ಯಾಷನ್ ಗಾಗಿ, ಡೆಕೋರೇಟಿವ್ ಜ್ಯುವೆಲ್ಲರಿ ಆಗಿ ಅಥವಾ ಹೀಲಿಂಗ್ ಪವರ್ ಹೊಂದಿದ ಸ್ಟೋನ್ ಜೊತೆ ಇದನ್ನು ಧರಿಸುತ್ತಾರೆ. ಪೌರಾಣಿಕ ಕಾಲದಲ್ಲೂ ನಾವು ಗಮನಿಸಿದಾಗ ರಾಮಾಯಣದಲ್ಲಿ ಕಾಲುಂಗುರದ ಉಲ್ಲೇಖ ಇದೆ. ರಾವಣ ಸೀತೆಯನ್ನು ಅಪಹರಿಸಿದಾಗ ಸೀತೆ ರಾಮನಿಗೆ ಪತ್ತೆ ಹಚ್ಚಲು ಸುಲಭವಾಗಲೆಂದು ತನ್ನ ಕಾಲುಂಗುರವನ್ನು ಎಸೆದಿದ್ದಳಂತೆ. ಅಂದರೆ ಆ ಕಾಲದಿಂದಲೂ ಕಾಲುಂಗುರ ಬಳಕೆಯಲ್ಲಿತ್ತು ಎಂದು ಹೇಳಲಾಗುತ್ತದೆ. ಕಾಲುಂಗುರ ಸಾಮಾನ್ಯವಾಗಿ ಬೆಳ್ಳಿಯಿಂದ ಮಾಡಿರುತ್ತಾರೆ. ಇದನ್ನು ಚಿನ್ನದಿಂದಲೇ ಮಾಡಬಹುದಿತ್ತು. ಆದರೆ ಹಿಂದೂ ಸಂಪ್ರದಾಯದಲ್ಲಿ ಸೊಂಟಕ್ಕಿಂತ ಕೆಳಗೆ ಚಿನ್ನ ಧರಿಸಬಾರದೆಂಬ ನಂಬಿಕೆ ಇದೆ. ಚಿನ್ನ ಲಕ್ಷ್ಮಿ ದೇವಿಯ ಸಂಕೇತ. ಆದುದರಿಂದ ಚಿನ್ನವನ್ನು ಕಾಲಿಗೆ ಹಾಕಲು ಜನರು ಇಷ್ಟ ಪಡೋದಿಲ್ಲ. ಕಾಲುಂಗುರಗಳಿಂದ ಸ್ತ್ರೀಯರ ಪ್ರಾಣದೇಹದ ಶುದ್ಧಿಯಾಗುತ್ತದೆ: ಕಾಲುಂಗುರಗಳ ಗೋಲಾಕಾರದಲ್ಲಿ ಬ್ರಹ್ಮಾಂಡದಿಂದ ಬರುವ ಇಚ್ಛಾಲಹರಿಗಳನ್ನು ಗ್ರಹಿಸುವ ಮತ್ತು ಸಂಗ್ರಹಿಸಿಡುವ ಕ್ಷಮತೆಯಿರುವುದರಿಂದ ಇಚ್ಛಾಶಕ್ತಿಯ ಲಹರಿಗಳ ಸ್ಪರ್ಶದಿಂದ ಸ್ತ್ರೀಯರ ಪ್ರಾಣ ದೇಹದ ಶುದ್ಧಿಯಾಗಲು ಸಹಾಯವಾಗುತ್ತದೆ. ಕಾಲುಂಗುರಗಳ ಮಾಧ್ಯಮದಿಂದ ಕೆಟ್ಟ ಶಕ್ತಿಗಳ ನಿರ್ಮೂಲನೆಯಾಗುತ್ತದೆ: ಹೆಬ್ಬೆರಳಿನ ಸಮೀಪದ ಬೆರಳು ವಾಯುತತ್ತ್ವವನ್ನು ಪ್ರಕ್ಷೇಪಿಸುವಲ್ಲಿ ಅಗ್ರೇಸರವಾಗಿರುವುದರಿಂದ ಸ್ತ್ರೀಯರಲ್ಲಿನ ಜಾಗೃತ ಶಕ್ತಿತತ್ತ್ವವು ಅವಶ್ಯಕತೆಗನುಸಾರ ವಾಯುತತ್ತ್ವದ ಆಧಾರದಲ್ಲಿ ಕಾಲುಂಗುರಗಳ ಮಾಧ್ಯಮದಿಂದ ಕೆಟ್ಟ ಶಕ್ತಿಗಳ ನಿರ್ಮೂಲನೆಯ ಕಾರ್ಯವನ್ನು ಮಾಡುತ್ತದೆ. ಇದರಿಂದ ವಾಯುಮಂಡಲದಲ್ಲಿನ ಕೆಟ್ಟ ಶಕ್ತಿಗಳು ಸ್ತ್ರೀಯರ ಕಾಲುಗಳಿಂದ ಅವರ ಶರೀರದಲ್ಲಿ ಪ್ರವೇಶಿಸುವ ಪ್ರಮಾಣವು ಹೆಚ್ಚುಕಡಿಮೆ ಶೇ.10 ರಷ್ಟು ಕಡಿಮೆಯಾಗುತ್ತದೆ. ಎರಡನೇ ಬೆರಳಿಗೆ ಕಾಲುಂಗುರ ಧರಿಸುವುದರಿಂದ ಲೈಂಗಿಕ ಜೀವನ ತೃಪ್ತಿಕರವಾಗಿರುತ್ತದೆ. - ಕಾಲುಂಗುರ ಹಾಕುವುದರ ಹಿಂದೆ ವೈಜ್ಞಾನಿಕ ಕಾರಣ ಇದೆ. ಕಾಲಿನ ಎರಡನೇ ಬೆರಳಿನಲ್ಲಿ ಪ್ರೆಷರ್ ಪಾಯಿಂಟ್ ಇದೆ. ಈ ಬೆರಳುಗಳಿಗೆ ಬೆಳ್ಳಿಯ ಉಂಗುರ ಹಾಕುವುದರಿಂದ ಋುತು ಚಕ್ರ ಸಮರ್ಪಕವಾಗಿ ಆಗುತ್ತದೆ. - ನೀವು ನಡೆಯುತ್ತಿದ್ದರೆ ಎರಡನೇ ಬೆರಳಿಗೆ ಪ್ರೆಷರ್ ಬೀಳುತ್ತದೆ. ಅವಾಗ ಬೆರಳಿನಲ್ಲಿರುವ ನರ ಗರ್ಭಕೋಶದ ಮೂಲಕ ಹೃದಯದಕ್ಕೆ ಕನೆಕ್ಟ್ ಆಗುತ್ತದೆ. ಇದರಿಂದ ಉತ್ಪಾದಕ ಅಂಗಗಳ ಅರೋಗ್ಯ ಹೆಚ್ಚುತ್ತದೆ. - ರಕ್ತದ ಪರಿಚಲನೆ ಉತ್ತಮವಾಗುತ್ತದೆ. ಇದರಿಂದ ಗರ್ಭಕೋಶ ಆರೋಗ್ಯದಿಂದ ಇರಲು ಸಾಧ್ಯ. - ಕಾಲಿನ ಎರಡನೇ ಬೆರಳಿಗೆ ಮಸಾಜ್ ಮಾಡುವುದರಿಂದ ಮಹಿಳಾ ಸಂಬಂಧೀ ಸಮಸ್ಯೆಗಳು ನಿವಾರಣೆಯಾಗುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.