ಪ್ರತಿ ದಿನ ಎಳನೀರು ಜೊತೆಯಿರಲಿ...!

Video Description

ಪ್ರತಿ ದಿನ ಎಳನೀರು ಜೊತೆಯಿರಲಿ...! ಮನುಷ್ಯನ ದೇಹಕ್ಕೆ ನೀರಿನ ಅಂಶ ಹೆಚ್ಚಾಗಿರಬೇಕು ಇಲ್ಲಾಂದ್ರೆ ಬಾಡಿ ಡಿ-ಹೈಡ್ರೇಟ್ ಆಗುತ್ತೆ. ದೇಹದಲ್ಲಿ ನೀರಿನ ಅಂಶ ಹೆಚ್ಚಾಗಿರಬೇಕು ಅಂತ ಸಿಕ್ಕಿದ್ದನ್ನೆಲ್ಲ ಕುಡಿದರೆ ಆರೋಗ್ಯ ಕೂಡ ಹಾಳಾಗುತ್ತೆ. ಕೆಲವರು ದಾಹ ತಣಿಸುವುದಕ್ಕೆ ಅಥವಾ ನೀರಿನ ಅಂಶ ಬೇಕು ಅಂತ ತಂಪುಪಾನೀಯಗಳ ಮೊರೆಹೋಗುತ್ತಾರೆ, ಆದರೆ ಆ ತಪ್ಪನ್ನು ಮಾಡಬೇಡಿ ಅದರ ಬದಲು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಸೇವಿಸುತ್ತಾ ಬನ್ನಿ ನಂತರ ನಿಮ್ಮ ದೇಹದಲ್ಲಿ ಆಗುವ ಬದಲಾವಣೆಯನ್ನು ನೀವೇ ಗಮನಿಸಬಹುದು. ಹೌದು ಪ್ರತಿನಿತ್ಯ ಎಳನೀರು ಕುಡಿಯುವುದರಿಂದ ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಎಳನೀರಿನಲ್ಲಿರುವ ಪೋಷಕಾಂಶಗಳು ದೇಹಕ್ಕೆ ತನ್ನ ಚಟುವಟಿಕೆಯನ್ನು ಪೂರ್ಣವಾಗಿ ಮಾಡುವುದಕ್ಕೆ ಸಹಕಾರ ನೀಡುತ್ತದೆ ಅಂದರೆ ಸುಸ್ತನ್ನು ಬಹಳ ಬೇಗ ಕಡಿಮೆ ಮಾಡುತ್ತೆ, ಸದಾಕಾಲ ಚಟುವಟಿಕೆಯಿಂದ ಇರೋದಕ್ಕೆ ಸಹಕರಿಸುತ್ತೆ. ದೇಹಕ್ಕೆ ನಿಧಾನವಾಗಿ ಶಕ್ತಿಯನ್ನು ಕೊಡುತ್ತಾ ಹೋಗೋದ್ರಿಂದ ಇಡೀದಿನ ದೈಹಿಕ ಕೆಲಸವನ್ನ ಬಹಳ ಆರಾಮಾಗಿ ಯಾವುದೇ ಆಯಾಸವಿಲ್ಲದೆ ನಿರ್ವಹಿಸಬಹುದು. ಇನ್ನೂ ದೇಹದ ಹೊರಭಾಗದಲ್ಲಿರುವ ಚರ್ಮ ಮತ್ತು ಕೂದಲ ಆರೋಗ್ಯಕ್ಕೂ ಎಳನೀರು ಉತ್ತಮ. ನಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ, ಚರ್ಮದ ಸುಕ್ಕು ತಗಟ್ಟುತ್ತದೆ ಜೊತೆಗೆ ಕೂದಲುದುರುವ ಸಮಸ್ಯೆಯನ್ನು ಕೂಡ ನಿವಾರಿಸುತ್ತದೆ. ಎಳನೀರಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿರುವುದು ಮೂಳೆ ಸ್ನಾಯು ಮತ್ತು ಅಂಗಾಂಶಗಳನ್ನು ಬಲಪಡಿಸುವುದು. ಇನ್ನು ರಕ್ತದೊತ್ತಡ ಸಮಸ್ಯೆಯನ್ನು ಗುಣಪಡಿಸುತ್ತದೆ. ಕಿಡ್ನಿಯಲ್ಲಿ ಕಲ್ಲಿದ್ದರೆ ಕಿಡ್ನಿಯ ಕಲ್ಲುಗಳನ್ನು ಕರಗಿಸುವುದಕ್ಕೆ ಕೂಡ ನೆರವಾಗುತ್ತೆ. ಇನ್ನು ಊಟ ಮಾಡಿದ ನಂತರ ಜೀರ್ಣಕ್ರಿಯೆ ಸರಿಯಾಗಿ ಆಗ್ತಿಲ್ಲ ಅನ್ನೋ ಸಮಸ್ಯೆ ಇದ್ದವರು ಪ್ರತಿನಿತ್ಯ ಎಳನೀರನ್ನು ಸೇವಿಸಿ ಅಜೀರ್ಣದ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ಹಾಗೂ ಮಲಬದ್ಧತೆಯ ಸಮಸ್ಯೆಯನ್ನು ಕೂಡ ನಿವಾರಿಸುತ್ತೆ ಎಳನೀರು. ಅತಿಯಾದ ತೂಕದಿಂದ ನೀವು ಬಳಲಿ ಬೆಂಡಾಗಿದ್ದರೆ ತೂಕ ಇಳಿಕೆಯಲ್ಲಿ ಕೂಡ ಸಹಕರಿಸುತ್ತದೆ ಏಳನೀರು, ನಿಮ್ಮ ಡಯಟ್ ನಲ್ಲಿ ಪ್ರತಿದಿನ ಎಳನೀರನ್ನು ಸೇರಿಸಿ ನಂತರ ನೀವು ತೂಕ ಇಳಿಕೆಯಲ್ಲಿ ಕಾಲಕ್ರಮೇಣ ಬದಲಾವಣೆಯನ್ನು ನೋಡುವಿರಿ. ಮೂತ್ರ ಕಟ್ಟುವಿಕೆ, ಮೂತ್ರದಲ್ಲಿ ಉರಿ, ಈ ರೀತಿಯಾದ ಸಮಸ್ಯೆ ಇದ್ದರೂ ಕೂಡ ಎಳನೀರು ಸಹಕಾರಿ ಇನ್ನು ಕಡೆಯದಾಗಿ ಮಧುಮೇಹಿಗಳು ಕೂಡ ಯಾವುದೇ ಭಯವಿಲ್ಲದೆ ಎಳನೀರನ್ನು ಸೇವಿಸಬಹುದು..

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.