ಮನೆಯಲ್ಲೇ ಸುಲಭವಾಗಿ ಬೆಣ್ಣೆ ಹೀಗೆ ಮಾಡಿಕೊಳ್ಳಿ..

Video Description

ಮನೆಯಲ್ಲೇ ಸುಲಭವಾಗಿ ಬೆಣ್ಣೆ ತಯಾರಿಸೋದು ಹೇಗೆ ಬೆಣ್ಣೆ ತಯಾರಿಯನ್ನು ಮನೆಯಲ್ಲೇ ಸುಲಭವಾಗಿ ಮಾಡೋದು ಹೇಗೆ ಎಂಬುದನ್ನು ನಾವು ಇಂದಿನ ವೀಡಿಯೊದಲ್ಲಿ ತಿಳಿಸಿಕೊಡುತ್ತಿದ್ದೇವೆ. ಹಾಲಿನ ಕೆನೆಯನ್ನು ಸಂಗ್ರಹಿಸಿ ಸುಲಭವಾಗಿ ನೀವು ಬೆಣ್ಣೆಯನ್ನು ಮಾಡಬಹುದು. ಇದಕ್ಕಾಗಿ ಹಾಲನ್ನು ಚೆನ್ನಾಗಿ ಕಾಯಿಸಿ ಕೆನೆ ಕಟ್ಟಿಸಬೇಕು. ಅಂದರೆ ಜಾಲರಿ ಇರುವ ಮುಚ್ಚಳ ಮುಚ್ಚಿ ಹಾಲು ತಣ್ಣಗಾಗಿ ಕೆನೆ ಕಟ್ಟಲಿ. ಈ ಕೆನೆಯನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿಡಿ. 7 ಅಥವಾ 15 ದಿನಗಳ ನಂತರ ಸಂಗ್ರಹಿಸಿದ ಕೆನೆಯನ್ನು ಬೆಣ್ಣೆ ತಯಾರಿಸಲು ಬಳಸಿ. ನೀವು ಕೆನೆಯನ್ನು ಫ್ರಿಜ್‌ನಲ್ಲಿ ತೆಗೆದಿರಿಸಬೇಕು. ಫ್ರಿಜ್‌ನಲ್ಲಿಟ್ಟು ಕೆನೆಯನ್ನು ಮಿಕ್ಸಿ ಜಾರ್‌ನಲ್ಲಿ ಸ್ವಲ್ಪ ತಣ್ಣನೆ ನೀರು ಹಾಕಿ ಕಡೆಯಬೇಕು. ಕೆನೆಯ ಮೇಲ್ಭಾಗದಲ್ಲಿ ನೀರು ನಿಲ್ಲುವಂತೆ ಜಾರ್‌ಗೆ ನೀರು ಹಾಕಿ. ಅಂತೆಯೇ ಮಿಕ್ಸಿಯನ್ನು ನಿಧಾನವಾಗಿ ಚಲಾಯಿಸಿ. ನೀವು ಸಂಗ್ರಹಿಸಿದ ಕೆನೆ ಹೆಚ್ಚಿದ್ದಲ್ಲಿ ಸ್ವಲ್ಪ ಸ್ವಲ್ಪವೇ ಬೆಣ್ಣೆ ಕಡೆಯಿರಿ. ಕಡೆದ ಬೆಣ್ಣೆಯನ್ನು ಇನ್ನೊಂದು ಪಾತ್ರೆಗೆ ರವಾನಿಸಿಕೊಳ್ಳಿ. ಎಲ್ಲಾ ಕೆನೆಯನ್ನು ಕಡೆದ ನಂತರ ಬಂದ ಬೆಣ್ಣೆಗೆ ನೀರು ಹಾಕಿ 2,3 ಸಲ ತೊಳೆದುಕೊಳ್ಳಿ. ಬೆಣ್ಣೆಯ ನೀರನ್ನು ಚೆಲ್ಲಬೇಡಿ. ಇದನ್ನು ಕೂಡ ಮಿಕ್ಸರ್‌ನಲ್ಲಿ ಕಡೆದುಕೊಳ್ಳಿ ನಂತರ ಈ ನೀರು ಮಜ್ಜಿಗೆಯ ರೂಪಕ್ಕೆ ಬಂದಾದ ನಂತರ ಅದನ್ನು ನೀವು ಮಕ್ಕಳಿಗೆ ಮಜ್ಜಿಗೆಯ ಹಾಗೆ ನೀಡಬಹುದಾಗಿದೆ. ಬೆಣ್ಣೆಯನ್ನು ಚೆನ್ನಾಗಿ ತೊಳೆದ ನಂತರ ಅದನ್ನು ಚಪ್ಪಟೆ ಪಾತ್ರೆಯಲ್ಲಿ ಬಟರ್ ಪೇಪರ್‌ನಲ್ಲಿರಿಸಿ ಫ್ರೀಜರ್‌ನಲ್ಲಿಡಿ. ಬೆಣ್ಣೆ ಚೆನ್ನಾಗಿ ಗಟ್ಟಿಯಾಗಲಿ. ಆಮೇಲೆ ನಿಮಗೆ ಎಷ್ಟು ಬೆಣ್ಣೆ ಬೇಕೋ ಅಷ್ಟನ್ನು ಬಳಸಿ. ಬೆಣ್ಣೆ ಬಣ್ಣ ಮಾಸದಂತೆ ತಡೆಯಲು ಅದಕ್ಕೆ ಸ್ವಲ್ಪ ಎಣ್ಣೆ ಸವರಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.