ನೀವರಿಯದ ದ್ರೌಪದಿ.. !

Video Description

ಮಹಾಭಾರತಕ್ಕೆ ನಾಂದಿ ಹಾಡಿದ ಮಹಾಸಾಧ್ವಿ ದ್ರೌಪದಿ ಮಹಾಸಾಧ್ವಿ ದ್ರೌಪದಿ ಮಹಾಭಾರತಕ್ಕೆ ನಾಂದಿ ಹಾಡಿದ್ದು ಹೇಗೆ? ಪಂಚಮಹಾಸತಿಯರಲ್ಲಿ ದ್ರೌಪದಿಗೆ ವಿಶಿಷ್ಟ ಸ್ಥಾನವಿದೆ. ಪಂಚಪಾಂಡವರರ ಪತ್ನಿಯಾಗಿ ಆಕೆ ನಿರ್ವಹಿಸಿದ ಪಾತ್ರ ಅತ್ಯಂತ ಹಿರಿದು. ಇಡೀ ಮಹಾಭಾರತಕ್ಕೆ ಕಾರಣಳಾದ ದ್ರೌಪದಿಗೆ ಪಾಂಚಾಲಿ ಎಂಬ ಹೆಸರೂ ಇದೆ. ಐವರು ಗುಣಗಳನ್ನು ಹೊಂದಿರುವ ಪತಿಯನ್ನು ತಾನು ವಿವಾಹವಾಗಬೇಕೆಂದು ದ್ರೌಪದಿ ಶಿವನಲ್ಲಿ ಬೇಡಿಕೊಂಡು ತಪ್ಪಸ್ಸು ಮಾಡಿರುತ್ತಾಳೆ. ಆದರೆ ಐದೂ ಗುಣಗಳನ್ನು ಒಬ್ಬ ವ್ಯಕ್ತಿಯಲ್ಲಿ ಪ್ರಸಾಧಿಸುವುದು ಕಷ್ಟವೆಂದು ಶಿವನು ಐದು ಗುಣಗಳುಳ್ಳ ಐವರು ಪತಿಯರನ್ನು ನೀನು ವಿವಾಹವಾಗು ಎಂದು ವರ ನೀಡುತ್ತಾರೆ. ಹೀಗೆ ದ್ರೌಪದಿಯು ಪಂಚ ಪಾಂಡವರನ್ನು ವಿವಾಹವಾಗುತ್ತಾಳೆ. ರಾಜ ದ್ರುಪದನ ಯಜ್ಞದಲ್ಲಿ ಹುಟ್ಟಿದ ದ್ರೌಪದಿ ಹುಟ್ಟುವಾಗಲೇ ಯುವತಿಯಾಗಿರುತ್ತಾಳೆ. ಆದ್ದರಿಂದ ಆಕೆಗೆ ಬಾಲ್ಯವೇ ಇರುವುದಿಲ್ಲ. ಒಂದೆಡೆ ತಂದೆಯ ಶಾಪವನ್ನು ಕೂಡ ಆಕೆ ಪಡೆದುಕೊಂಡಿರುತ್ತಾಳೆ. ಆದರೆ ದ್ರುಪದನಿಗೆ ಕೃಷ್ಣನ ಜ್ಞಾನಬೋಧನೆಯಿಂದ ಮಗಳಿಗೆ ತಾನು ಹಾಕಿದ ಶಾಪಕ್ಕೆ ಪ್ರಾಯಶ್ಚಿತ್ತವನ್ನು ತಂದೆ ಕರುಣಿಸುತ್ತಾನೆ. ದ್ರೌಪದಿಯ ಬಾಲ್ಯದ ಹೆಸರು ಕೃಷ್ಣೆ ದ್ರೌಪದಿ ಕುಂಡದಿಂದ ಜನಿಸಿದ ಬಳಿಕ ಆ ಸಮಯದಲ್ಲಿ ಆಕೆಯ ವಿಶಿಷ್ಟವಾದ ಕೂದಲಿನ ರೂಪವನ್ನು ನೋಡಿದ ಎಲ್ಲರೂ ಮಂತ್ರಮುಗ್ಧರಾಗುತ್ತಿದ್ದರು. ಇನ್ನು, ಕಣ್ಣುಗಳು ಅರಳಿದ ಕಮಲದಂತೆ ಶಾಂತ ಹಾಗೂ ಉಜ್ವಲವಾಗಿದ್ದವು, ಹುಬ್ಬುಗಳು ಚಂದ್ರನಂತೆ ವಕ್ರವಾಗಿದ್ದವು ಹಾಗೂ ಆಕೆಯ ಚರ್ಮದ ಬಣ್ಣ ಕಪ್ಪಾಗಿತ್ತು. ಈ ಕಾರಣಗಳಿಂದ ಆಕೆಯನ್ನು ತಂದೆ ಹಾಗೂ ಋಷಿಗಳು ಪ್ರೀತಿಯಿಂದ ಕೃಷ್ಣೆ ಎಂದು ಕರೆಯುತ್ತಿದ್ದರು. ಅದೇ ಆಕೆಯ ಬಾಲ್ಯದ ಹೆಸರಾಗಿತ್ತು. ಬಳಿಕ ದ್ರುಪದನ ಪುತ್ರ ಎಂಬ ಕಾರಣಕ್ಕಾಗಿ ದ್ರೌಪದಿ ಎಂದು ಕರೆಯಲು ಆರಂಭಿಸಿದರು. ಪೂರ್ವಜನ್ಮದಲ್ಲಿ ವಿಧವೆಯಾಗಿದ್ದರು ದ್ರೌಪದಿ ಭವಿಷ್ಯ ಪುರಾಣದ ಕಥೆಯಲ್ಲಿ ಉಲ್ಲೇಖವಾಗಿರುವಂತೆ ದ್ರೌಪದಿ ತನ್ನ ಹಿಂದಿನ ಜನ್ಮದಲ್ಲಿ ಬ್ರಾಹ್ಮಣನ ಪುತ್ರಿಯಾಗಿದ್ದರು. ಆಕೆಯ ಪತಿ ಮೃತಪಟ್ಟ ಕಾರಣದಿಂದಾಗಿ ವಿಧವೆಯಾಗಿ ಜೀವನವನ್ನು ಎದುರಿಸಬೇಕಾಯಿತು. ಈ ವೇಳೆ ಬಡ ಹಾಗೂ ಕಷ್ಟಕರ ಜೀವನದ ನಡುವೆಯೂ ದ್ರೌಪದಿ ಬ್ರಾಹ್ಮಣರು ಹಾಗೂ ಸಾಧುಗಳಿಗೆ ಹೆಚ್ಚು ಸೇವೆ ಮಾಡಿದ್ದರು. ನಂತರ ಸಾಧುಗಳ ಕೃಪೆಯಿಂದಾಗಿ ದ್ರೌಪದಿ ವ್ರತವೊಂದನ್ನು ಮಾಡಿದರು. ಅದರಿಂದ ಲಕ್ಷ್ಮೀ ದೇವಿಯ ಸಮಾನವಾಗುವ ವರ ದೊರಕಿತು. ಇದರಿಂದ ದ್ರೌಪದಿ ಸ್ವಯಂ ಅಡುಗೆ ಮಾಡಲು ಸಾಧ್ಯವಾಗದಿದ್ದರೆ ಅಲ್ಲಿಯವರೆಗೆ ಆಕೆಯ ಅಡುಗೆ ಪಾತ್ರೆ ತುಂಬುತ್ತಿತ್ತು. ಈ ಮೂಲಕವೇ ವನವಾಸದಲ್ಲೂ ಬ್ರಾಹ್ಮಣರಿಗೆ ಹಾಗೂ ಅತಿಥಿಗಳಿಗೆ ಭೋಜನ ನೀಡಲು ಸಾಧ್ಯವಾಗುತ್ತಿತ್ತು. ಐವರು ಪತಿಯರನ್ನು ಪಾಂಚಾಲಿ ಹೊಂದಿದ್ದರೂ ಆಕೆ ಕನ್ಯತ್ವವನ್ನು ಹೊಂದಿರುತ್ತಾಳೆ. ಮಹಾ ಸಾಧ್ವಿ ಎಂದೇ ಆಕೆ ಪ್ರತೀತಿಯನ್ನು ಪಡೆದಿದ್ದಾಳೆ. ಕುರು ಸಭೆಯಲ್ಲಿ ತನ್ನ ಮಾನ ಅಪಹರಣವಾಗುತ್ತಿದ್ದ ಸಮಯದಲ್ಲಿ ಆಕೆ ರೋಧಿಸಿ ಕೊಟ್ಟ ಶಾಪವೇ ಮಹಾಭಾರತ ಯುದ್ಧಕ್ಕೆ ನಾಂದಿಯಾಯಿತು ಎಂಬುದು ಪುರಾಣದಿಂದ ತಿಳಿದುಕೊಳ್ಳಬಹುದಾಗಿದೆ. ದ್ರೌಪದಿಗೆ ಅಣ್ಣನಾಗಿ ಗೆಳೆಯನಾಗಿದ್ದವರು ಕೃಷ್ಣನೇ. ತನ್ನ ಮನದ ಪ್ರತಿಯೊಂದು ಮಾತುಗಳನ್ನು ಆಕೆ ಕೃಷ್ಣನೊಂದಿಗೆ ಆಡುತ್ತಿದ್ದಳು ಮತ್ತು ಸಾಂತ್ವಾನವನ್ನು ಪಡೆದುಕೊಳ್ಳುತ್ತಿದ್ದಳು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.