ಪ್ಲಾಸ್ಟಿಕ್ ಲಂಚ್ ಬಾಕ್ಸ್- ನೀವರಿಯಾದ ಸಂಗತಿ..!

Video Description

ಲಂಚ್ ಬಾಕ್ಸ್ ಸಿದ್ಧಪಡಿಸುವಾಗ ಆರೋಗ್ಯಕರ ಆಹಾರವನ್ನು ತಯಾರಿಸಿ ನೀಡಬೇಕು ಎಂದು ಮನೆಯ ಗೃಹಿಣಿ ಗಮನ ನೀಡುತ್ತಾರೆ. ನೀವು ನೀಡುವ ಆಹಾರ ಪ್ರೀತಿಯೊಂದಿಗೆ ಪೋಷಕಾಂಶಗಳನ್ನು ಒಳಗೊಂಡಿರಬೇಕು. ಆಹಾರ ರುಚಿಯಾಗಿರುವುದರ ಜೊತೆಗೆ ಆರೋಗ್ಯ ಪೂರ್ಣ ಕೂಡ ಆಗಿರಬೇಕು. ಆದರೆ ನೀವು ಆಯ್ದುಕೊಳ್ಳುವ ಲಂಚ್ ಬಾಕ್ಸ್ ಪ್ಲಾಸ್ಟಿಕ್‌ನದ್ದಾದರೆ ನೀವು ವಿಷವನ್ನೇ ಪ್ಯಾಕ್ ಮಾಡಿಕೊಡುತ್ತಿದ್ದೀರಿ ಎಂಬುದನ್ನು ಮರೆಯಬಾರದು. ಇದರಲ್ಲಿ ಹಾಕುವ ಊಟ ಅಥವಾ ತಿಂಡಿ ಬಿಸಿಯಾಗಿದ್ದರೆ ಇದರ ಕೆಮಿಕಲ್ಸ್ ಹೊಟ್ಟೆ ಸೇರುವುದು ಖಂಡಿತ. ಇದು ನಿಧಾನಕ್ಕೆ ನಮ್ಮ ಶರೀರದಲ್ಲಿ ಹಾನಿಯನ್ನುಂಟು ಮಾಡುತ್ತದೆ. ಇದರಿಂದ ಕ್ಯಾನ್ಸರ್‌ನಂತಹ ಅಪಾಯಕಾರಿ ರೋಗ ಕೂಡ ಬರಬಹುದು. ಪ್ಲಾಸ್ಟಿಕ್ ಬಾಕ್ಸ್‌ನಲ್ಲಿ ಬೇರೆ ಬೇರೆ ಬೇರೆ ರೀತಿಯ ಕೆಮಿಕಲ್‌ಗಳಿರುತ್ತವೆ. ಎಂಡೊಕ್ರೀನ್ ಡಿಸ್ಟ್ರಿಕ್ಟಿಂಗ್ ಟಿಫಿನ್ ಬಾಕ್ಸ್‍ನಲ್ಲಿ ಇರಬಹುದಾದ ಕೆಮಿಕಲ್ಸ್ ಆಗಿದ್ದು ಇದು ನಮ್ಮ ಶರೀರಕ್ಕೆ ಬಹಳ ಹಾನಿಕಾರಕ. ಪ್ಲಾಸ್ಟಿಕ್ ಟಿಫಿನ್ ಬಾಕ್ಸ್ ಬಿಸಿ ಆಹಾರ ಹಾಕಿದರೆ ಈ ಕೆಮಿಕಲ್ಸ್ ಆಹಾರದೊಂದಿಗೆ ಸೇರುವ ಸಾಧ್ಯತೆ ಇದೆ. ಇದು ಬಿಸಿ ಆಹಾರ ಹಾಕುವ ಮೊದಲು ಅದರಲ್ಲಿರುವುದಿಲ್ಲ. ಬಿಸಿ ತಾಗಿದೊಡನೆ ಅದು ಅದರಲ್ಲಿ ಉದ್ಭವವಾಗುತ್ತದೆ. ಪ್ಲಾಸ್ಟಿಕ್ ಲಂಚ್ ಬಾಕ್ಸ್ ನೋಡುವುದಕ್ಕೆ ಸುಂದರವಾಗಿರುತ್ತದೆ. ಆದರೆ ಅದನ್ನು ಶುಚಿಗೊಳಿಸುವುದು ಅಷ್ಟು ಸುಲಭದ ಕೆಲಸವೂ ಅಲ್ಲ. ನಾವು ಅದನ್ನು ಮೇಲಿಂದ ಶುಚೀಮಾಡಿಬಿಡಬಹುದು. ಅದರ ಮೂಲೆಯಲ್ಲಿ ಆಹಾರ ಕಣ ಹೋಗಿ ಕೂತರೆ ಶುಚಿಮಾಡುವುದು ಕಷ್ಟ. ಹಾಗೆಯೇ ಮತ್ತೆ ಆಹಾರ ಹಾಕಿದರೆ ಅದರಲ್ಲಿ ಕೀಟಸೃಷ್ಟಿಯಾಗುತ್ತದೆ. ಇದು ಆಹಾರ ಸೇವಿಸುವವರ ದೇಹವನ್ನು ಹೊಕ್ಕುವುದು ಖಂಡಿತ. ಇನ್ನು ನೀವು ಪ್ಲಾಸ್ಟಿಕ್ ಲಂಚ್ ಬಾಕ್ಸ್‌ನಲ್ಲಿ ಮಕ್ಕಳಿಗೆ ತಿಂಡಿ ಕಟ್ಟಿಕೊಡುತ್ತಿದ್ದೀರಿ ಎಂದಾದಲ್ಲಿ ನೀವು ಅಪಾಯವನ್ನೇ ಪ್ಯಾಕ್ ಮಾಡಿ ಅವರಿಗೆ ನೀಡುತ್ತಿದ್ದೀರಿ ಎಂದರ್ಥವಾಗಿದೆ. ಮಕ್ಕಳಲ್ಲಿ ಹಸಿವು ಕಡಿಮೆಯಾಗುತ್ತದೆ ಮತ್ತು ಆಹಾರ ಸೇವಿಸಲು ನಿರಾಕರಿಸುತ್ತಾರೆ. ಟಿಫಿನ್ ಬಾಕ್ಸ್‌ನಲ್ಲಿ ಆಹಾರ ರುಚಿಕರವಾಗಿದ್ದರೂ ಅದು ವಿಷಕಾರಿಯಾಗಿರುತ್ತದೆ. ಆಹಾರ ಹಾಳಾಗುತ್ತದೆ. ಕ್ಯಾನ್ಸರ್‌ನಂತಹ ಮಹಾಮಾರಿ ಬರುತ್ತದೆ. ಮಕ್ಕಳಲ್ಲಿ ಬೊಜ್ಜು ಬೇಗನೇ ಬರುತ್ತದೆ. ಮಕ್ಕಳಲ್ಲಿ ಕಂಡುಬರುತ್ತಿರುವ ಮಧುಮೇಹಕ್ಕೂ ಈ ಪ್ಲಾಸ್ಟಿಕ್ ಕಾರಣವಾಗಿದೆ. ಅವರಲ್ಲಿ ಪ್ರತಿರೋಧಕ ಶಕ್ತಿ ಕುಂಠಿತವಾಗುತ್ತದೆ. ಲಂಚ್ ಬಾಕ್ಸ್‌ನ ಸುರಕ್ಷತೆ ಮತ್ತು ಶುದ್ಧತೆ ಕೂಡ ಅತ್ಯಂತ ಪ್ರಮುಖವಾದುದು. ಆದ್ದರಿಂದ ಟಪ್ಪರ್ ವೇರ್‌ನಂತಹ ಲಂಚ್ ಬಾಕ್ಸ್ ಬಳಕೆಯನ್ನು ಮಾಡಿ. ಟಿಫನ್ ಬಾಕ್ಸ್ ತೊಳೆಯುವಾಗ ಅದನ್ನು ಬಿಸಿ ನೀರಿನಲ್ಲಿ 15-20 ನಿಮಿಷ ನೆನೆಸಿ ನಂತರ ಪಾತ್ರೆ ತೊಳೆಯುವ ಸ್ಕ್ರಬ್‌ಗೆ ಲಿಕ್ವಿಡ್‌ ಹಾಕಿ ಡಬ್ಬಗಳನ್ನು ಚೆನ್ನಾಗಿ ಉಜ್ಜಿ. ಡಬ್ಬದ ಮುಚ್ಚುಳ ಮುಚ್ಚುವ ಭಾಗಗಳಲ್ಲಿ ಹೆಚ್ಚು ಕಲೆಗಳು ಹಾಗೂ ಜಿಡ್ಡು ಇರುತ್ತದೆ. ಇದನ್ನು ಟೂತ್‌ಬ್ರಷ್‌ ಸಹಾಯದಿಂದ ಉಜ್ಜಿ . ನಂತರ ಶುಭ್ರವಾದ ನೀರಿನಿಂದ ಡಬ್ಬಗಳನ್ನು ತೊಳೆಯಿರಿ. ಡಬ್ಬಗಳನ್ನು ತೊಳೆದ ನಂತರವೂ ವಾಸನೆ ಇದ್ದರೆ ಅರ್ಧ ಹೋಳು ನಿಂಬೆ ಹಣ್ಣನ್ನು ತೆಗೆದುಕೊಂಡು ಡಬ್ಬ ಹಾಗೂ ಮುಚ್ಚಳದ ಮೇಲೆ ಚೆನ್ನಾಗಿ ಉಜ್ಜಿ ನಂತರ ತೊಳೆಯಿರಿ. ನಿಂಬೆ ಹಣ್ಣು ಬಳಸಲು ಇಚ್ಛಿಸದವರು ಬೇಕಿಂಗ್‌ ಸೋಡಾ ಬಳಸಬಹುದು. ಬೇಕಿಂಗ್‌ ಸೋಡಾವನ್ನು ಡಬ್ಬ ಹಾಗೂ ಮುಚ್ಚಳದ ಮೇಲೆ ಚೆನ್ನಾಗಿ ಹರಡಿ ನಂತರ ಸ್ಕ್ರಬ್‌ನಿಂದ ಉಜ್ಜಿ ತೊಳೆದರೆ ಹಳದಿ ಕಲೆಗಳು ಹಾಗೂ ವಾಸನೆ ಹೋಗುತ್ತದೆ. ತೊಳೆದ ಡಬ್ಬಗಳನ್ನು ಒಣಗಿದ ಶುಭ್ರ ಬಟ್ಟೆಯಿಂದ ಒರೆಸಿ ಇಡುವುದರಿಂದ ಬಾಕ್ಸ್‌ಗಳು ಬೇಗ ಹಾಳಾಗುವುದಿಲ್ಲ . ಡಬ್ಬಗಳನ್ನು ತೊಳೆದು ಬಿಸಿಲಿನಲ್ಲಿ ಇಡಿ, ಸಂಜೆ ಒಳಗೆ ತನ್ನಿ, ಈ ರೀತಿ ಮಾಡಿದರೆ ಅದರ ಜಿಡ್ಡು ವಾಸನೆವಾಗುವುದು. ಮತ್ತೊಂದು ವಿಧಾನವೆಂದರೆ ತೊಳೆದು ಹಾಗೇ ಮಗುಚಿ ಇಡಿ. ಈ ರೀತಿ ಪಾತ್ರೆಯನ್ನು ಒಣಗಿಸಿದರೆ ಜಿಡ್ಡಿನವಾಸನೆ ಇರುವುದಿಲ್ಲ. ಸ್ವಲ್ಪ ಬ್ಲೀಚ್ ಅನ್ನು ಬಿಸಿ ನೀರಿಗೆ ಹಾಕಿ ಆ ನೀರನ್ನು ಪ್ಲಾಸ್ಟಿಕ್ ಡಬ್ಬಕ್ಕೆ ಹಾಕಿ ಅರ್ಧ ಗಂಟೆ ಬಿಟ್ಟು ತೊಳೆದರೆ ಜಿಡ್ಡಿನ ವಾಸನೆ ಹೋಗುವುದು. ಬಿಸಿ ನೀರಿಗೆ ವಿನೆಗರ್ ಹಾಕಿ ಆ ನೀರನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿಟ್ಟು ಸ್ವಲ್ಪ ಹೊತ್ತು ಬಿಟ್ಟ ಬಳಿಕ ಆ ಡಬ್ಬ ತೊಳೆದರೆ ಸಾಕು ಜಿಡ್ಡಿನ ಅಂಶ ಸಂಪೂರ್ಣ ಹೋಗುವುದು. ನಿಮಗೆ ಯಾವ ಸಲಹೆ ಸೂಕ್ತ ಅನಿಸುತ್ತದೆಯೋ ಆ ಟಿಪ್ಸ್ ಪಾಲಿಸಿ, ಜಿಡ್ಡಿನ ವಾಸನೆಯನ್ನು ಸುಲಭವಾಗಿ ಹೋಗಲಾಡಿಸಿ. ಪ್ಲಾಸ್ಟಿಕ್‌ನಲ್ಲಿರುವ ವಿಷಕಾರಿ ಅಂಶಗಳು ನಿಮ್ಮ ಆಹಾರಕ್ಕೆ ಸೇರ್ಪಡೆಗೊಂಡು ನಿಮ್ಮ ದೇಹದಲ್ಲಿ ವಿಷ ಉತ್ಪತ್ತಿಯಾಗುವಂತೆ ಮಾಡುತ್ತದೆ. ಪ್ಲಾಸ್ಟಿಕ್ ಅನ್ನು ಬಿಸ್ಫೆನಾಲ್ ಎ (ಬಿಪಿಎ) ಎಂದು ಕರೆಯಲಾಗುವ ವಿಷಕಾರಿ ಸಂಯುಕ್ತವನ್ನು ಬಳಸಿ ತಯಾರಿಸಲಾಗುತ್ತದೆ. ಬಿಪಿಎ ಸೇವಿಸುವುದರಿಂದ ಕ್ಯಾನ್ಸರ್, ಹೆಚ್ಚಿದ ರಕ್ತದೊತ್ತಡ ಮತ್ತು ನಿಮ್ಮ ಪ್ರಾಸ್ಟೇಟ್ ಗ್ರಂಥಿ ಮತ್ತು ಭ್ರೂಣದ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮಗಳಂತಹ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಇನ್ನು ಗರ್ಭಿಣಿಯರಿಗೆ ಇದು ಹೆಚ್ಚಿನ ತೀವ್ರ ಕಾಯಿಲೆಗಳನ್ನು ಉಂಟುಮಾಡುತ್ತವೆ. ಇದು ರೋಗ ನಿರೋಧಕ ಶಕ್ತಿ ಮತ್ತು ಹಾರ್ಮೋನ್ ನಿಯಂತ್ರಣವನ್ನು ಹಾಳುಮಾಡುತ್ತದೆ. ಇದು ಗರ್ಭದಲ್ಲಿರುವ ಮಗುವಿನ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಬೊಜ್ಜುಗೆ ಕಾರಣವಾಗುವ ಅನೇಕ ಅಂಶಗಳು ಪ್ಲಾಸ್ಟಿಕ್‌ನಲ್ಲಿದ್ದು, ಇದು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತಿದೆ. ಆಹಾರವನ್ನು ನಿರ್ವಹಿಸುವಲ್ಲಿ ಒಳಗೊಂಡಿರುವ ಪ್ಲಾಸ್ಟಿಕ್‌ಗಳ ಪ್ರಮಾಣವು ಬೊಜ್ಜುಗೆ ಕಾರಣವಾಗಬಹುದು ಎಂದು ತಿಳಿದು ಬಂದಿದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.