ಮಳೆಗಾಲದ ಹತ್ತಾರು ರೋಗಗಳು..!

Video Description

ಮಳೆಗಾಲದಲ್ಲಿ ಹಲವು ರೋಗಾಣುಗಳ ಚಟುವಟಿಕೆ ಹೆಚ್ಚು. ಇದರೊಂದಿಗೆ ನಮ್ಮ ದೇಹದಲ್ಲಿ ಜೀರ್ಣಕ್ರಿಯೆಯ ಶಕ್ತಿಯೂ ಕಡಿಮೆಯಾಗಿ ರೋಗಗಳಿಗೆ, ವೈರಾಣು ಜ್ವರಗಳಿಗೆ ಕಾರಣವಾಗುತ್ತದೆ. ಮಳೆಗಾಲದಲ್ಲಿ ಬರುವ ಕಾಯಿಲೆಗಳ ಮೂಲ ನೀರು. ಮುಂಗಾರಿನ ಆರಂಭ ಸೊಳ್ಳೆಗಳ ಸಂತಾನಾಭಿವೃದ್ಧಿ ಪರ್ವ ಕಾಲ. ಸಾಮಾನ್ಯವಾಗಿ ನಿಂತ ನೀರಲ್ಲಿ ಸೊಳ್ಳೆಗಳು ವೃದ್ದಿಯಾಗುತ್ತವೆ. ಇದರಿಂದ ಮಲೇರಿಯ, ಡೆಂಗೆ, ಚಿಕೂನ್ ಗುನ್ಯಾದಂತಹ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತದೆ. ಆಹಾರ ಮೂಲದಿಂದ ಬೇಧಿ ಕಾಲರ ಕಾಣಿಸುತ್ತದೆ. ಬ್ಯಾಕ್ಟೀರಿಯ ಹಾಗೂ ವೈರಸ್ ನಿಂದ ಚರ್ಮದ ತೊಂದರೆ, ನೆಗಡಿ, ಜ್ವರ ಕಾಣಿಸಿಕೊಳ್ಳುತ್ತದೆ. ಮಳೆಗಾಲದ ಟಾಪ್ 5 ಕಾಯಿಲೆಗಳೆಂದರೆ ಮಲೇರಿಯ, ಚಿಕೂನ್ ಗುನ್ಯಾ, ಹೆಪೈಟೀಸ್ ಎ, ಡೆಂಗೆ, ವೈರಲ್ ಪಿವರ್, ವೈರಸ್ ಹಾಗೂ ಬ್ಯಾಕ್ಟೀರಿಯಾಗಳಿಂದ ಬರುವ ಕೆಲವು ಕಾಯಿಲೆಗಳಿಗೆ ತುರ್ತು ಚಿಕಿತ್ಸೆ ಪಡೆಯದಿದ್ದರೆ ಮಾರಣಾಂತಿಕವಾಗಬಹುದು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.