ತಾವರೆಗೂ ನೈದಿಲೆಗೂ ಏನು ವ್ಯತ್ಯಾಸ..?

Video Description

ತಾವರೆ ಹಾಗೂ ನೈದಿಲೆ ಇವೆರಡರ ನಡುವಿನ ವ್ಯತ್ಯಾಸವೇನು? ತಾವರೆಗೂ ನೈದಿಲೆಗೂ ಏನು ವ್ಯತ್ಯಾಸ..? ತಾವರೆ ಮತ್ತು ನೈದಿಲೆ ನೋಡಲು ಒಂದೇ ಹಾಗೆ ಕಂಡರೂ ಇವುಗಳಲ್ಲಿ ಪ್ರತ್ಯೇಕ ಗುಣಗಳಿವೆ. ಇವೆರಡೂ ನೀರಿನಲ್ಲಿ ಬೆಳೆಯುವ ಗಿಡಗಳಾಗಿವೆ. ಆದರೆ ಇವುಗಳು ಬೇರೆ ಬೇರೆ ಜಾತಿಗೆ ಸೇರಿದಂತಹವುಗಳು. ನೈದಿಲೆಯ ಎಲೆಗಳು ಸ್ವತಂತ್ರವಾಗಿ ನೀರಿನಲ್ಲಿ ತೇಲುತ್ತಿರುತ್ತವೆ ಹಾಗೂ ಎಲೆಯ ಹಿಂದಿ ಭಾಗ ಮಧ್ಯದಲ್ಲಿ ಕತ್ತರಿಸಿದಂತೆ ಕಂಡುಬರುತ್ತದೆ ತಾವರೆ ಎಲೆಗಳು ಸಂಪೂರ್ಣ ದುಂಡನೆಯ ಆಕಾರದಲ್ಲಿದ್ದು ನೀರಿನಿಂದ ಬಹಳವೇ ಮೇಲೆ ಅಂದರೆ 6-7 ಇಂಚುಗಳಷ್ಟು ನೀರಿನಿಂದ ಮೇಲಕ್ಕೆ ಬೆಳೆದು ತೇಲುವಂತಿರುತ್ತದೆ. ಕೆಲವು ತಾವರೆ ಎಲೆಗಳು 4-5 ಅಡಿ ನೀರಿನಿಂದ ಮೇಲಕ್ಕೆ ಬೆಳೆಯಬಲ್ಲುದು. ತಾವರೆ ಹೂಗಳ ದಳ ನೈದಿಲೆಯ ಹೂಗಳಿಗಿಂತ ಅಗಲ ಮತ್ತು ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ನೈದಿಲೆ ಚಂದ್ರನ ಬೆಳಕಿಗೆ ಅರಳುತ್ತದೆ ರಾತ್ರಿ ಅರಳಿ ಮರುದಿನ ಸೂರ್ಯನ ಬೆಳಕಿಗೆ ಅರಳುವ ಸ್ಥಿತಿಯಲ್ಲೇ ಇದ್ದು ಸೂರ್ಯನ ಕಿರಣಗಳು ಬಿದ್ದ ನಂತರ ಮುದುಡುತ್ತದೆ. ತಾವರೆ ಬೀಜಗಳಿಂದ ಬೆಳೆಯುತ್ತದೆ ಆದರೆ ನೈದಿಲೆ ರೈಜೋಮ್ ಅಥವಾ ಗಡ್ಡೆಗಳಿಂದ ಬೆಳೆಯುತ್ತದೆ. ಸಾಸಿವೆ ಕಾಳಿನ ಬೀಜಗಳನ್ನು ಕೂಡ ಉತ್ಪಾದಿಸುವುದುಂಟು. ತಾವರೆಯು ಅಷ್ಟೊಂದು ಸುವಾಸನೆಯನ್ನು ಬೀರುವುದಿಲ್ಲ ಆದರೆ ನೈದಿಲೆ ಪರಿಮಳದಿಂದ ಕೂಡಿರುತ್ತದೆ ಮತ್ತು ದುಂಬಿಗಳು ಮಕರಂದವನ್ನು ಹೀರಲು ಈ ಹೂವನ್ನು ಸಮೀಪಿಸುತ್ತದೆ. ಹೀಗೆ ಪ್ರಕೃತಿಯಲ್ಲಿ ನಾವು ನಾನಾ ರೀತಿಯ ಅಚ್ಚರಿಗಳನ್ನು ಕಾಣಬಹುದಾಗಿದೆ. ತಾವರೆ ನೈದಿಲೆ ನೋಡಲು ಒಂದೇ ರೀತಿಯಾಗಿವೆ ಆದರೆ ಅವುಗಳ ಗುಣ ಸ್ವಭಾವಗಳು ಬೇರೆಬೇರೆಯಾಗಿವೆ. ತಮ್ಮದೇ ಆದ ವಿಶಿಷ್ಟತೆಗಳಿಂದ ಈ ಹೂವುಗಳು ಭಿನ್ನವಾಗಿ ನಿಂತಿವೆ. ಆದರೂ ಈ ಎರಡೂ ಹೂವುಗಳು ಕಣ್ಣಿಗೆ ತಂಪನ್ನು ನೀಡುತ್ತವೆ ಮತ್ತು ಮನಸ್ಸಿಗೆ ಮುದವನ್ನು ಆಹ್ಲಾದವನ್ನು ನೀಡುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.