ಡಯಾಬಿಟಿಸ್ ಇರುವವರ ದಿನಚರಿ ಹೀಗಿರಲಿ.

Video Description

ಮಧುಮೇಹಿಗಳ ದಿನಚರಿ ಹೀಗಿರಲಿ ಡಯಾಬಿಟಿಸ್ ಇರುವವರ ದಿನಚರಿ ಹೀಗಿರಲಿ. ಡಾಕ್ಟರ್‌ಗಳು ಸಾಮಾನ್ಯವಾಗಿ ಒಂದು ನಿಶ್ಚಿತ ಅವಧಿಯವರೆಗಿನ ರಕ್ತದ ಸಕ್ಕರೆಯ ಪ್ರಮಾಣವನ್ನು ಗಮನಿಸುತ್ತಾರೆ. ಡಾಕ್ಟರ್ ಹೇಳಿದ ಪರೀಕ್ಷೆಗಳನ್ನು ತಪ್ಪದೇ ಮಾಡಿಸಿಕೊಳ್ಳಿ. ಇದರಲ್ಲಿ ಮುಖ್ಯವಾದವುಗಳೆಂದರೆ, ಸಕ್ಕರೆಯ ಪ್ರಮಾಣ, ರಕ್ತದಲ್ಲಿನ ಹಿಮೋಗ್ಲೋಬಿನ್/ಕೊಲೆಸ್ಟರಾಲ್, ರಕ್ತದೊತ್ತಡ, ಮೂತ್ರ ಪರೀಕ್ಷೆ/ಸಕ್ಕರೆಯನ್ನು ಪರೀಕ್ಷಿಸಲು ಯೂರಿಯಾ ಪರೀಕ್ಷೆ, ಮೂತ್ರದಲ್ಲಿನ ಕೀಟೋನ್‌ಗಳು ಮತ್ತು ಅಲ್ಬುಮಿನ್, ಕಣ್ಣು, ಪಾದ, ನರ ಮತ್ತು ಹೃದಯದ ಪರೀಕ್ಷೆಗಳು ಮತ್ತು ನಿಮ್ಮ ಊಟದ ಪದ್ಧತಿ ಹಾಗೂ ತೂಕ ಹೇಗಿದೆ ಎಂದು ನೋಡುವುದು ಇತ್ಯಾದಿ. ಈ ತಪಾಸಣೆಗಳು ಆರೋಗ್ಯದಿಂದಿರಲು ಬೇಕಾದ ಬಹಳ ಮುಖ್ಯವಾದ ಮಾಹಿತಿಯನ್ನು ಒದಗಿಸುತ್ತವೆ. ಉದಾಹರಣೆಗೆ ನಿಮ್ಮ ಮೂತ್ರದ ಬಣ್ಣ ಬದಲಿಯಾಗಿರುವುದು ಅಥವಾ ಯಾವುದೇ ಬಣ್ಣವಿಲ್ಲದಂತಿರುವುದು ಮತ್ತು ಇದಕ್ಕಾಗಿ ಏನೇನು ತಿನ್ನಬೇಕು, ತಿನ್ನಬಾರದು ಎಂಬುದನ್ನು ತಿಳಿದುಕೊಂಡಿರುವುದು. ಡಯಾಬಿಟಿಸ್ ಯಾವಾಗಲೂ ದೇಹದ ಪ್ರಕೃತಿ ಹೇಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಪ್ರತಿಯೊಬ್ಬರ ದೇಹವೂ ಭಿನ್ನವಾಗಿರುತ್ತದೆ. ಒಬ್ಬರು ತೆಗೆದುಕೊಳ್ಳುತ್ತಿರುವ ಔಷಧಿಗಳು ಅಥವಾ ಅದರ ಪ್ರಮಾಣಗಳು ಇನ್ನೊಬ್ಬರ ದೇಹದ ಮೇಲೆ ಬೇರೆಯ ರೀತಿಯೇ ಕೆಲಸ ಮಾಡಬಹುದು. ಡಯಾಬಿಟಿಸ್‌ಗೆ ಎಲ್ಲರಿಗೂ ಒಂದೇ ರೀತಿಯ ಚಿಕಿತ್ಸೆ ಇಲ್ಲದಿರುವುದು ಇದೇ ಕಾರಣಕ್ಕಾಗಿ. ನಿಮ್ಮ ಪರೀಕ್ಷೆಗಳ ಆಧಾರದ ಮೇಲೆ ಡಾಕ್ಟರ್ ನಿಮಗೆ ಕೊಡಬೇಕಾದ ಔಷಧಿ ಮತ್ತು ಅದನ್ನು ತೆಗೆದುಕೊಳ್ಳುವ ಪ್ರಮಾಣವನ್ನು ನಿರ್ಧರಿಸುತ್ತಾರೆ. ಅದನ್ನು ಹೇಗೆ ಮತ್ತು ಯಾವಾಗ ತೆಗೆದುಕೊಳ್ಳಬೇಕು ಎಂಬುದನ್ನು ನಿಮಗೆ ಹೇಳಿಕೊಡುತ್ತಾರೆ. ಔಷಧಿಯ ಡೋಸ್ ಎಷ್ಟಿರಬೇಕು ಎಂಬುದು ರಕ್ತದ ಸಕ್ಕರೆಯ ಮಟ್ಟ ಮತ್ತು ಎಷ್ಟು ಇನ್ಸುಲಿನ್ ಬಿಡುಗಡೆಯಾಗುತ್ತಿದೆ ಎಂಬುದನ್ನು ಆಧರಿಸಿದೆ, ಸರಿಯಾದ ಪ್ರಮಾಣವನ್ನು ಕಂಡುಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. “ಟೈಪ್‌ 2 ಡಯಾಬಿಟಿಸ್‌ ಮೆಲಿಟಸ್‌ (T2DM) ಒಂದು ‘ವಿಶೇಷ’ ವಿಭಾಗಕ್ಕೆ ಸೇರುತ್ತದೆ. ಇವತ್ತಿಗೆ ಸುಮಾರು 13 ರೀತಿಯ ಡಯಾಬಿಟಿಸ್ ಔಷಧಿಗಳಿವೆ” ಎನ್ನುತ್ತಾರೆ ಡಾ. ರವಿಕಿರಣ್. ಔಷಧಿಯನ್ನು ಸರಿಯಾಗಿ ತೆಗೆದುಕೊಳ್ಳಿ ಮತ್ತು ಫಲಿತಾಂಶಕ್ಕಾಗಿ ಸ್ವಲ್ಪ ತಾಳ್ಮೆಯಿಂದ ಕಾಯಿರಿ. ಔಷಧಿ ಮತ್ತು ತಪಾಸಣೆಗಳ ಜವಾಬ್ದಾರಿಯನ್ನು ನಿಮ್ಮ ಡಾಕ್ಟರ್‌ಗೆ ಬಿಟ್ಟುಬಿಡಿ, ಆ ವಿಷಯಗಳನ್ನು ಅವರು ನೋಡಿಕೊಳ್ಳುತ್ತಾರೆ, ಆದರೆ ಸ್ವತಃ ನೀವು ಮಾಡಬೇಕಾಗಿರುವ ಮುಖ್ಯವಾದ ಕೆಲಸವೊಂದಿದೆ. ಅದುವೇ ಊಟದ ಮೇಲೆ ನಿಗಾ ಇಡುವುದು. ಕರಿದ, ಖಾರದ ಮತ್ತು ಅತಿಯಾಗಿ ಉಪ್ಪನ್ನು ಹಾಕಿದ ಪದಾರ್ಥ ತಿನ್ನುವುದನ್ನು ಆದಷ್ಟು ಕಡಿಮೆ ಮಾಡಿ. ಅಲ್ಲದೇ ಸರಳ ಕಾರ್ಬೋಹೈಡ್ರೇಟ್‌ಗಳಿಂದ ಕೂಡಿದ ಪದಾರ್ಥ ಮತ್ತು ಸಿಹಿಹಣ್ಣು, ಹಾಲು ಮುಂತಾದವುಗಳನ್ನು ಬಿಡುವುದು ಒಳ್ಳೆಯದು. ಹೆಚ್ಚಾಗಿ ಪ್ರೋಟೀನ್, ಬಿಳಿ ಮತ್ತು ಕಡಿಮೆ ಕೊಬ್ಬಿರುವ ಮಾಂಸ ಹಾಗೂ ಸಿರಿಧಾನ್ಯಗಳು ಮತ್ತು ನಾರಿನಂತಹ ಕಠಿಣ ಕಾರ್ಬ್‌ಗಳನ್ನು ತಿನ್ನುವುದರತ್ತ ಗಮನ ಹರಿಸಿ. ಕೊಲೆಸ್ಟರಾಲನ್ನು ಒಂದು ಮಿತಿಯಲ್ಲಿಡಲು ಮತ್ತು ಲಿವರನ್ನು ಆರೋಗ್ಯವಾಗಿಟ್ಟುಕೊಳ್ಳುವಲ್ಲಿ ನಮ್ಮ ಊಟದ ದಿನಚರಿ ಬಹಳ ದೊಡ್ಡ ಪಾತ್ರ ವಹಿಸುತ್ತದೆ. ಡಯಾಬಿಟಿಸ್‌ಗೆ ಸಂಬಂಧಿಸಿದ ತಪಾಸಣೆಗಳನ್ನು ಸಾಮಾನ್ಯವಾಗಿ ಮೂರು ತಿಂಗಳಿಗೊಮ್ಮೆ ಮಾಡಿಸಿಕೊಳ್ಳಲು ಹೇಳಲಾಗುತ್ತದೆ. ಡಾಕ್ಟರ್ ಸೂಚಿಸಿರುವ ಎಲ್ಲ ತಪಾಸಣೆಗಳನ್ನು ಅವರು ಹೇಳಿದ ದಿನಾಂಕದಂದು ತಪ್ಪದೇ ಮಾಡಿಸಿಕೊಳ್ಳಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.