ಸೌತೇಕಾಯಿ ಯಿಂದ ಆಗುವ ಲಾಭಗಳೇನು..?

Video Description

ಸೌತೆಕಾಯಿ ತಿನ್ನಲಿಕ್ಕಷ್ಟೆ ರುಚಿಯಲ್ಲ. ಸಾಮಾನ್ಯ ಸಮಸ್ಯೆಯಿಂದ ಹಿಡಿದು ಗಂಭೀರ ರೋಗಗಳಿಗೂ ರಾಮಬಾಣ. *ಕೀಲು ನೋವಿನಿಂದ ಬಳಲುತ್ತಿದ್ದವರು ಸೌತೆಕಾಯಿಯನ್ನು ಹೆಚ್ಚಾಗಿ ಉಪಯೋಗಿಸಬೇಕು. ಸೌತೆಕಾಯಿ ಜೊತೆ ಕ್ಯಾರೆಟ್ ಜ್ಯೂಸ್ ಮಿಕ್ಸ್ ಮಾಡಿ ಕುಡಿಯುವುದರಿಂದ ಕೀಲು ನೋವು ಕಡಿಮೆಯಾಗುತ್ತದೆ. *ಮಹಿಳೆಯನ್ನು ಕಾಡುವ ಬಹು ದೊಡ್ಡ ಸಮಸ್ಯೆ ಮುಟ್ಟಿ ಸಮಸ್ಯೆ . ನೋವು ನಿವಾರಕವಾಗಿ ಸೌತೆಕಾಯಿ ಕೆಲಸ ಮಾಡುತ್ತದೆ. ಮೊಸರು, ಇಂಗು, ಉಪ್ಪು, ಕಪ್ಪು ಮೆಣಸು, ಜೀರಿಗೆಯನ್ನು ಸೌತೆಕಾಯಿ ಜೊತೆ ಸೇರಿಸಿ ರಸ ಮಾಡಿ ಸೇವನೆ ಮಾಡುವುದರಿಂದ ಸ್ವಲ್ಪ ನೆಮ್ಮದಿ ಕಾಣಬಹುದು. *ಸೌತೆಕಾಯಿಯನ್ನು ಸಿಪ್ಪೆ ಸಹಿತ ಕತ್ತರಿಸಿ ಕಾಳುಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಸೇರಿಸಿಕೊಂಡು ತಿನ್ನುತ್ತಾ ಬಂದರೆ ಜೀರ್ಣಶಕ್ತಿ ಹೆಚ್ಚುವುದು. ಸೌತೆಕಾಯಿ ತಿರುಳಿನಿಂದ ಅಂಗಾಲು ಉಜ್ಜಿಕೊಂಡರೆ ಕಣ್ಣುಗಳ ಉರಿ ಶಾಂತವಾಗಿ ಚೆನ್ನಾಗಿ ನಿದ್ದೆ ಬರುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.