ಬಾಳೆಯ ಹಣ್ಣು ಬಳಸಿ ಬಗೆ ಬಗೆ ಫೇಸ್ ಪ್ಯಾಕ್ ಮಾಡಿ..

Video Description

ಬಾಳೆ ಹಣ್ಣು ಬಳಸಿ ಬಗೆ ಬಗೆ ಫೇಸ್ ಪ್ಯಾಕ್ ಮಾಡಿಕೊಳ್ಳಿ..! ಹೊಟ್ಟೆಯ ಹಸಿವನ್ನು ಕ್ಷಣ ಮಾತ್ರದಲ್ಲಿ ನೀಗಿಸುವ ಬಾಳೆಹಣ್ಣು ಮುಖದ ಕಾಂತಿಯನ್ನು ಕ್ಷಣಮಾತ್ರದಲ್ಲಿ ಹೊಳೆಯಿಸುತ್ತದೆ. ಬಾಳೆಹಣ್ಣು ಆಂಟಿ ಆಕ್ಸಿಡೆಂಟ್, ಪೈಥೋಕೆಮಿಕಲ್ ಅನ್ನು ಒಳಗೊಂಡಿದ್ದು ಚರ್ಮವನ್ನು ಮಾಯಿಶ್ಚರೈಸ್ ಆಗಿ ಇರಿಸುತ್ತದೆ. ಇದು ತ್ವಚೆಗೆ ಪೋಷಣೆ ನೀಡಿ ಗಡಸು ಮತ್ತು ವಯಸ್ಸಾದಂತೆ ಕಾಣಿಸುವ ಚರ್ಮಕ್ಕೆ ಪೋಷಣೆಯನ್ನು ಒದಗಿಸುತ್ತದೆ. ಎಲ್ಲಾ ವಿಧದ ಚರ್ಮಗಳಿಗೆ ಬಾಳೆ ಹಣ್ಣು ಬೆಸ್ಟ್ ಎಂದೆನಿಸಿದೆ. ಬಾಳೆಹಣ್ಣಿನಲ್ಲಿ ಪೊಟಾಶಿಯಂ ಅಂಶವಿರುವುದರಿಂದ ಇದು ತ್ವಚೆಗೆ ಬೇಕಾದ ತೇವಾಂಶವನ್ನು ಒದಗಿಸುತ್ತದೆ. ಬಾಳೆಹಣ್ಣಿನಲ್ಲಿರುವ ಜೀವಸತ್ವಗಳು ಚರ್ಮವನ್ನು ಪುನಶ್ಚೇತನಗೊಳಿಸುತ್ತವೆ ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಬಾಳೆಹಣ್ಣನ್ನು ಸಣ್ಣದಾಗಿ ಹೆಚ್ಚಿಕೊಂಡು ಹಿಸುಕಿಕೊಳ್ಳಿ. ಬಳಿಕ ಮುಖಕ್ಕೆ ಹಚ್ಚಿ. 15 ನಿಮಿಷದ ತರುವಾಯ ಮುಖವನ್ನು ನೀರಿನಿಂದ ಸ್ವಚ್ಛಗೊಳಿಸಿ. ಬಾಳೆಹಣ್ಣಿನೊಂದಿಗೆ 1 ಚಮಚ ಜೇನು ತುಪ್ಪವನ್ನು ಬಳಸಿಕೊಂಡು ಫೇಸ್ ಪ್ಯಾಕ್ ತಯಾರಿಸಬಹುದು. ಹಣ್ಣಾದ ಬಾಳೆಹಣ್ಣನ್ನು ಬ್ಲೆಂಡರ್‌ನಲ್ಲಿ ಹಾಕಿ ಪೇಸ್ಟ್ ತಯಾರಿಸಿ. ಇದಕ್ಕೆ 1 ಚಮಚ ಜೇನು ಸೇರಿಸಿ. ಮಿಶ್ರಣವನ್ನು ಮುಖಕ್ಕೆ ಹಚ್ಚಿ 15 ನಿಮಿಷ ಆರಲು ಬಿಡಿ. ನೀರಿನಲ್ಲಿ ತೊಳೆದುಕೊಳ್ಳಿ. ಬಾಳೆಹಣ್ಣಿನಿಂದ ಮೊಡವೆ ಸಮಸ್ಯೆಯನ್ನು ನಿವಾರಿಸಬಹುದು ಇದಕ್ಕಾಗಿ 1 ಬಾಳೆಹಣ್ಣು, 1 ಚಮಚ ಜೇನು ಮತ್ತು 1 ಚಮಚ ನಿಂಬೆರಸವನ್ನು ಸೇರಿಸಿ ಪೇಸ್ಟ್ ತಯಾರಿಸಿ ಮೊಡವೆ ಇರುವ ಭಾಗಕ್ಕೆ ಹಚ್ಚಿ. ನಿಮ್ಮದು ಒಣ ತ್ವಚೆ ಆಗಿದ್ದಲ್ಲಿ ಬಾಳೆಹಣ್ಣಿನ ಫೇಸ್ ಪ್ಯಾಕ್ ಅದನ್ನು ಆರೋಗ್ಯವಾರಿ ಇರಿಸುವಲ್ಲಿ ಸಹಾಯ ಮಾಡುತ್ತದೆ. 1/2 ಬಾಳೆಹಣ್ಣು, ಒಂದು ಚಮಚ ಓಟ್‌ಮೀಲ್, ಒಂದು ಚಮಚ ಜೇನು, ಒಂದು ಚಮಚ ಮೊಟ್ಟೆಯ ಹಳದಿ ಲೋಳೆಯನ್ನು ಬಳಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಹಚ್ಚಿ 15 ನಿಮಿಷ ಹಾಗೆಯೇ ಬಿಡಿ ನಂತರ ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಿ. ಬಾಳೆಹಣ್ಣಿನಲ್ಲಿ ವಿಟಮಿನ್ ಸಿ ಇದ್ದು ಇದು ಬಿಸಿನಿಲಿನಿಂದ ಆಗಿರುವ ಕಲೆ ನಿವಾರಣೆ ಮತ್ತು ಕಂದು ಕಲೆಗಳ ಕಡಿಮೆ ಮಾಡುವುದು. ಚರ್ಮದಲ್ಲಿ ಉರಿಯೂತ ಮತ್ತು ಕಿರಿಕಿರಿ ಕಡಿಮೆ ಮಾಡುವುದು. ಕಾಲಜನ್ ಉತ್ಪತ್ತಿ ಹೆಚ್ಚಿಸುವುದು ಹಾಗೂ ಇದರಿಂದ ಚರ್ಮವು ಬಿಳಿಯಾಗುವುದು. ಸೂರ್ಯನಿಂದ ಬರುವಂತಹ ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಣೆ ನೀಡುವುದು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.