ಹತ್ತಿ ಬೀಜದ ಎಣ್ಣೆ ನಿಮಗೆಷ್ಟು ಗೊತ್ತು..?

Video Description

ಹತ್ತಿ ಬೀಜದ ಎಣ್ಣೆ ಆರೋಗ್ಯದ ಮಿತ್ರ..?! ಹತ್ತಿಯ ಬೀಜದ ಎಣ್ಣೆಯನ್ನು ಮನೆಮದ್ದಾಗಿ ಹಲವಾರು ಕಾಯಿಲೆಗಳಿಗೆ ಬಳಸಲಾಗುತ್ತದೆ. ಹತ್ತಿ ಬೀಜ, ಎಳ್ಳೆಣ್ಣೆ ಹಾಕಿ ತಯಾರಿಸಿದ ಎಣ್ಣೆಯನ್ನು ದೇಹದಲ್ಲಿನ ನೋವಿಗೆ ಹಚ್ಚಿದಾಗ ಅದು ಶಮನವಾಗುತ್ತದೆ. ಹತ್ತಿ ಹಣ್ಣಿನ ರಸಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿದರೆ ಕಿವಿ ಸೋರುವುದು ನಿಯಂತ್ರಣಕ್ಕೆ ಬರುತ್ತದೆ. ಮಂಡಿ ನೋವಿದ್ದಾಗ ಹತ್ತಿಯ ಎಲೆಗಳನ್ನು ಬಿಸಿ ಮಾಡಿ ಮಂಡಿಗಳ ಮೇಲೆ ಪ್ಯಾಕ್ ಹಚ್ಚಿ ಇದರಿಂದ ಮಂಡಿ ನೋವು ಗುಣವಾಗುತ್ತದೆ. ಹತ್ತಿಯ ಎಳೆ ಕಾಯಿಯನ್ನು ಹಾಲಿನಲ್ಲಿ ಜಜ್ಜಿ, ಮುಟ್ಟಿನ ಸಮಯದಲ್ಲಿ ಸೇವಿಸಿದರೆ ಗರ್ಭಾಶಯಕ್ಕೆ ಉತ್ತಮ ಬಲ ಬರುತ್ತದೆ. ಹತ್ತಿ ಹೂವನ್ನು ಪೇಸ್ಟ್ ಮಾಡಿ ಗಾಯದ ಮೇಲೆ ಹಚ್ಚಿದರೆ ಗಾಯ ಬೇಗ ಮಾಯವಾಗುತ್ತದೆ. ಹತ್ತಿಯ ಬೇರಿನ ಪುಡಿಯನ್ನು ಅಕ್ಕಿ ತೊಳೆದ ನೀರಿನಲ್ಲಿ ಬೆರೆಸಿ ಸೇವಿಸಿದರೆ ಬಿಳಿ ಮುಟ್ಟಿನ ಸಮಸ್ಯೆ ಕಡಿಮೆಯಾಗುತ್ತದೆ. ಹತ್ತಿ ಬೀಜದಿಂದ ತಯಾರಿಸಿದ ಎಣ್ಣೆಯನ್ನು ಹಣೆಗೆ ಹಚ್ಚಿದರೆ ತಲೆ ನೋವು ವಾಸಿಯಾಗುತ್ತದೆ. ಹತ್ತಿ ಎಲೆಗಳ ಕಷಾಯ ಕುಡಿದರೆ ರಕ್ತಬೇಧಿ ನಿಲ್ಲುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.