ಎಳನೀರು ಕುಡಿದು ಬಂಬಲ ಬಿಸಾಡುತ್ತೀರಾ..?

Video Description

ಎಳನೀರು ಕುಡಿದು ಬಂಬಲ ಬಿಸಾಡುತ್ತೀರಾ..? ಎಳನೀರಿನ ಗಂಜಿಯಲ್ಲಿ ಫೋಲಿಕ್ ಆ್ಯಸಿಡ್, ಫಾಸ್ಪೇಟೇಸ್, ಕ್ಯಾಟಲೇಸ್, ಡಿಹೈಡ್ರೋಜೀನೇಸ್, ಡೈಯಾಸ್ಟೇಸ್, ಪೆರಾಕ್ಸಿಡೇಸ್, ಆರ್.ಎನ್.ಎ ಪಾಲಿಮರೇಸಸ್ ಮೊದಲಾದ ಕಿಣ್ವಗಳು ಇದೆ. ಇವುಗಳು ವಿವಿಧ ರೀತಿಯ ಆಹಾರಗಳು ಸುಲಭವಾಗಿ ಜೀರ್ಣವಾಗಲು ನೆರವಾಗುತ್ತವೆ. ಇದರಿಂದ ಆಹಾರಗಳ ಉತ್ತಮ ಅಂಶಗಳು ದೇಹಕ್ಕೆ ಸುಲಭವಾಗಿ ಲಭ್ಯವಾಗಿ ಆರೋಗ್ಯ ವೃದ್ಧಿಸುತ್ತದೆ. ಹಾಲಿನ ಮೂಲಕ ಅತ್ಯಧಿಕ ಪ್ರಮಾಣದಲ್ಲಿ ಕ್ಯಾಲ್ಸಿಯಂ ದೊರಕುತ್ತದೆ. ಆದರೆ ಎಳನೀರಿನ ಗಂಜಿ ದೇಹಕ್ಕೆ ಸಮರ್ಪಕ ಪ್ರಮಾಣದಲ್ಲಿ ಕ್ಯಾಲ್ಸಿಯಂ ನೀಡುತ್ತದೆ. ಈ ಮೂಲಕ ಮೂಳೆಗಳು ದೃಢವಾಗುವ ಜೊತೆಗೇ ಸ್ನಾಯು ಮತ್ತು ಅಂಗಾಂಶಗಳೂ ಉತ್ತಮಗೊಳ್ಳುತ್ತವೆ.ಚರ್ಮದ ಆರೈಕೆಗೆ ದೇಹದ ಒಳಗಿನಿಂದಲೇ ಹೆಚ್ಚಿನ ನೀರಿನ ಪೂರೈಕೆ ಆಗಬೇಕು. ಆಗ ಮಾತ್ರ ತ್ವಚೆಯ ಅಂದ ಚಂದ ವೃದ್ಧಿಯಾಗುತ್ತದೆ. ಎಳನೀರಿನ ಗಂಜಿ ಸೇವನೆಯಿಂದ ಚರ್ಮಕ್ಕೆ ಅವಶ್ಯವಾದ ನೀರು ಲಭ್ಯವಾಗುವ ಮೂಲಕ ಚರ್ಮಕ್ಕೆ ಒಳಗಿನಿಂದ ಪೋಷಣೆ ನೀಡುತ್ತದೆ. ಆಗ ಚರ್ಮ ಕಾಂತಿಯುಕ್ತವಾಗುತ್ತದೆ. ಒಣಗಿದ ಮತ್ತು ಬಿಳಿಚಿದ ಚರ್ಮವೂ ನಿಧಾನಕ್ಕೆ ಸೆಳೆತ ಪಡೆದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.ಕೂದಲನ್ನು ಕೊಂಚ ಎಳನೀರಿನಿಂದ ಮಸಾಜ್ ಮಾಡುವುದರಿಂದ ತಲೆಯ ಚರ್ಮದಲ್ಲಿ ರಕ್ತಸಂಚಾರ ಹೆಚ್ಚುತ್ತದೆ. ಇದರಿಂದ ಕೂದಲ ಬುಡ ಹೆಚ್ಚು ಶಕ್ತಿಯುತವಾಗುತ್ತವೆ ಮತ್ತು ಉತ್ತಮ ಗುಣಮಟ್ಟದ ಕೂದಲು ಬೆಳೆಯಲು ನೆರವಾಗುತ್ತದೆ. ಕೂದಲು ಉದುರುವುದು ಕಡಿಮೆಯಾಗಿ ಕೂದಲ ಹೊಳಪು ಹೆಚ್ಚುತ್ತದೆ. ಎಳನೀರಿನ ಗಂಜಿಯಲ್ಲಿರುವ ವಿವಿಧ ವಿಟಮಿನ್ ಮತ್ತು ವಿಶೇಷವಾಗಿ ವಿಟಮಿನ್ ಕೆ ಮತ್ತು ಕಬ್ಬಿಣದ ಅಂಶ ಕೂದಲಿಗೆ ಸಹಕಾರಿಯಾಗಿದೆ. ಈ ಪೋಷಕಾಂಶಗಳು ಕೂದಲಿಗೆ ಹೊಳಪು ನೀಡುವಲ್ಲಿ ಮತ್ತು ಸಾಫ್ಟ್ ಮಾಡುವಲ್ಲಿ ಉಪಯುಕ್ತವಾಗಿದೆ.ಒಂದು ವೇಳೆ ಯೂರಿಕ್ ಆ್ಯಸಿಡ್ ಅಥವಾ ಸಿಸ್ಟೈನ್ ಎಂಬ ಲವಣದಿಂದ ಮೂತ್ರದಲ್ಲಿ ಕಲ್ಲು ಉಂಟಾಗಿದ್ದರೆ ಅದಕ್ಕೆ ಎಳನೀರಿಗಿಂತ ಉತ್ತಮವಾದ ಔಷದಿ ಇನ್ನೊಂದಿಲ್ಲ. ಏಕೆಂದರೆ ಎಳನೀರಿನಲ್ಲಿರುವ ಪೊಟ್ಯಾಶಿಯಂ ಈ ಲವಣಗಳನ್ನು ಕರಗಿಸಿಕೊಂಡು ಮೂತ್ರಪಿಂಡಗಳನ್ನು ಕಲ್ಲುಗಳಿಂದ ಮುಕ್ತಿಗೊಳಿಸುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.