ಮೆಣಸು ಬೆಳೆದು ಲಾಭ ಪಡೆದವರು..!

Video Description

ಮೆಣಸಿನ ಕೃಷಿ ಲಾಭದಾಯಕ ಕೃಷಿ ಹೇಗೆ? ಮೆಣಸು ಬೆಳೆದು ಲಾಭ ಪಡೆದವರು..! ಸಾಂಬಾರು ಬೆಳೆಗಳಲ್ಲಿ ಒಂದಾಗಿರುವ ಮೆಣಸಿನ ಕಾಯಿ ವಾಣಿಜ್ಯ ಬೆಳೆಯೂ ಹೌದು. ಬೆಳಗಾವಿ, ಧಾರವಾಡ, ಚಿತ್ರದುರ್ಗ, ಕೋಲಾರ, ಶಿವಮೊಗ್ಗ, ಮೈಸೂರು ಮೊದಲಾದ ಪ್ರದೇಶಗಳಲ್ಲಿ ಈ ಕೃಷಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ನೀರು ಚೆನ್ನಾಗಿ ಬಸಿದು ಹೋಗುವ ಫಲವತ್ತಾದ ಪ್ರದೇಶ ಮೆಣಸಿನ ಕೃಷಿಗೆ ಹೇಳಿ ಮಾಡಿಸಿದ್ದು ಮೆಣಸು ಕೃಷಿ ಹೆಚ್ಚು ಲಾಭಕರ ಕೃಷಿಯಾಗಿದೆ ಎಂಬುದು ಕೃಷಿಕರ ಮಾತಾಗಿದೆ. ಇನ್ನು ಮರಳು ಮಿಶ್ರಿತ ಮಣ್ಣಿನಲ್ಲಿ ಕೂಡ ಮೆಣಸಿನ ಕೃಷಿ ನಡೆಯುತ್ತದೆ. ಕಪ್ಪು ಕೆಂಪು ಮಣ್ಣನ್ನು 2-4 ಬಾರಿ ಮಿಶ್ರ ಮಾಡಬೇಕು. 750 ಸೆಮಿ ನಲ್ಲಿ ಉಣಿಯಬೇಕು. 30 ಕೆಜಿಯಷ್ಟು ಕಳಿತ ಸೆಗಣಿಯನ್ನು ಕೃಷಿಗೆ ಬುಡಕ್ಕೆ ಹಾಕಲು ಬಳಸಲಾಗುತ್ತದೆ. ಇನ್ನು ಮಣ್ಣು ಹೆಂಟೆಯ ರೂಪದಲ್ಲಿದ್ದರೆ ಅದನ್ನು ಒಡೆದು ಸಮತಟ್ಟಾಗಿ ಮಾಡಬೇಕು. 250 ಸೆಮಿ 120 ಸೆಮಿನಂತೆ ಸಾಲು ನೆಡಬೇಕು ಮೆಣಸು ಕೃಷಿ ಹೆಚ್ಚಿನ ಲಾಭವನ್ನು ತರುತ್ತಿದೆ ಎಂಬುದು ಕೃಷಿಕರ ಮಾತಾಗಿದೆ. 4 ಅಡಿ ಸಾಲು ಗೊಬ್ಬರ ಹಾಕಿ ಉಣಬೇಕು, ಸಾಲು ಮಾಡಿ ಔಷಧಿ ಸ್ಪ್ರೆ ಮಾಡಬೇಕು ಬೂದಿ ರೋಗ ಬರದಂತೆ ನೋಡಬೇಕು. 30 ಕೆಜಿ ಸೆಗಣಿ ಗೊಬ್ಬರದೊಂದಿಗೆ 1/2 ಕೆಜಿ ಸಂಯುಕ್ತ ಗೊಬ್ಬರವನ್ನು ಮಿಶ್ರ ಮಾಡಿ ಸಸಿಗಳಿಗೆ ಬುಡಕ್ಕೆ ಹಾಕಬೇಕು. ಚೆನ್ನಾಗಿ ನೆರಳು ಇರಬೇಕು ಅಂತೆಯೇ ಸಂಜೆಯ ಸಮಯದಲ್ಲಿ ನೀರು ಹಾಯಿಸಬೇಕು. ಒಂದು ವಾರದಲ್ಲಿ 4-6 ಬಾರಿ ನಾಟಿ ಮಾಡಬೇಕು. ಇನ್ನು ರಂಜಕ, ಪೊಟಾಶಿಯಂ ಅನ್ನು ಸಮಪ್ರಮಾಣದಲ್ಲಿ ಬುಡಕ್ಕೆ ಹಾಕಬೇಕು. ತೆಳುವಾಗಿ ನೀರು ಹಾಯಿಸಬೇಕು. ಇದರ ಜೊತೆಗೆ ಮೇಲು ಗೊಬ್ಬರ ಹಾಕಬೇಕು ಅಂತೆಯೇ ಕಳೆಯಿಂದ ಸಸಿಯನ್ನು ಸಂರಕ್ಷಿಸಬೇಕು. 45-50 ದಿನದಲ್ಲಿ ಸಸಿ ಕಾಯಿ ಬಿಡಲು ಆರಂಭಿಸುತ್ತದೆ. 80-90 ದಿನಗಳಲ್ಲಿ ಹಣ್ಣಾದ ಮೆಣಸಿನ ಕಾಯಿಗಳನ್ನು ಕೊಯ್ದು ಮಾರುಕಟ್ಟೆಗೆ ಸರಬರಾಜು ಮಾಡಬಹುದು.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.