ಬಾರ್ಲಿ- ಆರೋಗ್ಯಕರ ಲಾಭಗಳು..!

Video Description

ಸುಮಾರು ಹದಿನಾರರ ಶತಮಾನದಲ್ಲಿ ಗೋಧಿಗಿಂತಲೂ ಬಾರ್ಲಿಯೇ ಪ್ರಮುಖ ಆಹಾರವಾಗಿತ್ತು. ಅಂದಿನವರ ಆರೋಗ್ಯವನ್ನು ಇಂದಿನವರಿಗೆ ಹೋಲಿಸಿದರೆ ಅವರ ಆರೋಗ್ಯ ಎಷ್ಟೋ ಉತ್ತಮವಾಗಿತ್ತು. ಚೀನಾ, ಈಜಿಪ್ಟ್, ಗ್ರೀಸ್ ಮತ್ತು ರೋಮನ್ನರು ಅಂದಿನ ತಮ್ಮ ಆಹಾರದಲ್ಲಿ ಬಾರ್ಲಿಯ ಸೇವನೆಯನ್ನು ಇತಿಹಾಸದಲ್ಲಿ ದಾಖಲಿಸಿದ್ದಾರೆ. ಈಜಿಪ್ಟ್‌ನ ಇತಿಹಾಸದಲ್ಲಿ ತಿಳಿಸಿರುವ ಪ್ರಕಾರ ನಿತ್ಯವೂ ಬಾರ್ಲಿಯ ನೀರನ್ನು ಬಾರ್ಲಿ ನೀರು ಕುಡಿಯುವುದರಿಂದ ಉಂಟಾಗುವ ಪ್ರಯೋಜನಗಳೇನು? ಬಾರ್ಲಿ- ಆರೋಗ್ಯಕರ ಲಾಭಗಳು..! ಬಾರ್ಲಿ ಕುಡಿಯುವುದು ಆರೋಗ್ಯಕ್ಕೆ ಉತ್ತಮವಾಗಿದೆ. ಹಲವು ಐತಿಹಾಸಿಕ ಮತ್ತು ಪುರಾತನ ಗ್ರಂಥಗಳಲ್ಲಿ ಈ ಬಗ್ಗೆ ಸ್ಪಷ್ಟವಾಗಿ ವಿವರಿಸಲಾಗಿದೆ. ಬನ್ನಿ, ಈ ಉತ್ತಮ ಧಾನ್ಯದ ನೀರನ್ನು ಕುಡಿಯುವುದರ ಮೂಲಕ ಪಡೆಯಬಹುದಾದ ಅದ್ಭುತ ಪ್ರಯೋಜನಗಳನ್ನು ಮುಂದೆ ಓದಿ... ಬಾರ್ಲಿ ಒಂದು ಉತ್ತಮ ಮೂತ್ರವರ್ಧಕವಾಗಿದ್ದು ದೇಹದಿಂದ ಮೂತ್ರದ ಮೂಲಕ ವಿಷಕಾರಿ ವಸ್ತುಗಳು ಹೊರಹೋಗಲು ಸಹಕರಿಸುತ್ತದೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಸಹಕರಿಸುತ್ತದೆ ಬಾರ್ಲಿಯ ಸೇವನೆಯಿಂದ ದೇಹದ ಬೆವರು ಹೆಚ್ಚಿನ ಪ್ರಮಾಣದಲ್ಲಿ ಹೊರಹರಿಯಲು ನೆರವಾಗುತ್ತದೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಈ ಬೆವರು ಅಗತ್ಯವಾಗಿದೆ. ವಿಶೇಷವಾಗಿ ಬೇಸಿಗೆಯಲ್ಲಿ ಖಾರವಾದ ಊಟವನ್ನು ಸೇವಿಸಿದ ಬಳಿಕ ಹೊಟ್ಟೆಯಲ್ಲಿ ಉರಿಯುಂಟಾಗುವುದರಿಂದ ಬಾರ್ಲಿ ತಡೆಯುತ್ತದೆ. ಹಾಗಾಗಿ ಖಾರದ ಊಟದ ಬಳಿಕ ಬಾರ್ಲಿ ನೀರನ್ನು ಸೇವಿಸಲು ಮರೆಯದಿರಿ. ಬಾರ್ಲಿಯಲ್ಲಿರುವ ಬೀಟಾ ಗ್ಲುಕಾನ್ ಆಹಾರದಲ್ಲಿರುವ ಗ್ಲುಕೋಸ್ ಸಕ್ಕರೆಯನ್ನು ರಕ್ತದಲ್ಲಿ ಸೇರಿಸುವ ಗತಿಯನ್ನು ನಿಧಾನಗೊಳಿಸುವ ಕಾರಣ ಮಧುಮೇಹಿಗಳು ಸಹಾ ಸುರಕ್ಷಿತವಾಗಿ ಸೇವಿಸಬಹುದು. ಮಧುಮೇಹಿಗಳ ರಕ್ತದಲ್ಲಿ ಥಟ್ಟನೇ ಸಕ್ಕರೆಯ ಪ್ರಮಾಣ ಏರಿದರೆ ಅಪಾಯಕಾರಿಯಾದುದರಿಂದ ಬಾರ್ಲಿ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆ ನಿಧಾನವಾಗಿ ಲಭ್ಯವಾಗುವಂತೆ ಮಾಡಿ ಮಧುಮೇಹಿಗಳಿಗೆ ಸೂಕ್ತವಾದ ಆಹಾರವಾಗಿದೆ. ಬಾರ್ಲಿ ನೀರಿನಲ್ಲಿ ಹೆಚ್ಚಿನ ನಾರು ಇರುವುದರಿಂದ ಪಚನಕ್ರಿಯೆ ಮತ್ತು ರಕ್ತಸಂಚಾರ ಸುಗಮಗೊಳ್ಳುತ್ತದೆ. ಪರಿಣಾಮವಾಗಿ ರಕ್ತದಲ್ಲಿದ್ದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯಕ್ಕೆ ಹೆಚ್ಚಿನ ಒತ್ತಡ ನೀಡುವ ಅಗತ್ಯ ಕಡಿಮೆಯಾಗುತ್ತದೆ. ಮೂತ್ರಪಿಂಡಗಳಲ್ಲಿ ಉತ್ಪತ್ತಿಯಾಗುವ ಕಲ್ಲುಗಳಿಗೆ ಆಹಾರದಲ್ಲಿರುವ ಲವಣಗಳು ಕಾರಣವಾಗಿವೆ. ಒಂದು ಚಿಕ್ಕ ಕಣದಿಂದ ಪ್ರಾರಂಭವಾಗುವ ಇವು ದಿನಗಳೆದಂತೆ ದೊಡ್ಡದಾಗುತ್ತಾ ಹೋಗುತ್ತವೆ. ಒಂದು ನಿರ್ದಿಷ್ಟ ಪ್ರಮಾಣಕ್ಕೆ ಬೆಳೆದ ಬಳಿಕ ನೋವು ನೀಡಲು ಪ್ರಾರಂಭವಾಗುತ್ತದೆ. ಅಲ್ಲಿಯವರೆಗೂ ಈ ಕಲ್ಲುಗಳ ಇರುವಿಕೆಯೇ ಗೊತ್ತಾಗುವುದಿಲ್ಲ. ಪ್ರತಿದಿನ ಬಾರ್ಲಿ ನೀರನ್ನು ಕುಡಿಯುವುದರಿಂದ ಈ ಕಲ್ಲುಗಳು ನಿಧಾನವಾಗಿ ಕರಗುತ್ತವೆ. ಪರಿಣಾಮವಾಗಿ ಮೂತ್ರಪಿಂಡಗಳ ಕಾರ್ಯಕ್ಷಮತೆ ಹೆಚ್ಚುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.