ಕ್ಯಾಟ್ ಫಿಶ್ ಒಂದು ಸ್ಲೋ ಫಾಯ್ಸನ್..!

Video Description

ಅವ್ಯಾಹತವಾಗಿ ನಡೆಯುತ್ತಿರುವ ಕ್ಯಾಟ್ ಫಿಶ್ ಸಾಕಾಣೆ ದಂಧೆ ಕ್ಯಾಟ್ ಫಿಶ್ ತಿಂದರೆ ಅಪಾಯ ಕಟ್ಟಿಟ್ಟ ಬುತ್ತಿ ಆಫ್ರಿಕನ್ ಕ್ಯಾಶ್ ಫಿಶ್ ಒಂದು ವಿದೇಶಿ ಮೀನಿನ ತಳಿಯಾಗಿದ್ದು, ಅತಿಯಾದ ಮಾಂಸಾಹಾರಿ ಪ್ರವೃತ್ತಿಯನ್ನು ಹೊಂದಿದೆ. ಇದಕ್ಕೆ ಆಹಾರವಾಗಿ ಸತ್ತ ದನ, ನಾಯಿಯ ಮಾಂಸವನ್ನು ಹಾಕಲಾಗುತ್ತದೆ. ತನ್ನ ಸಂತಾನವನ್ನೇ ಆಹಾರವನ್ನಾಗಿ ತಿನ್ನುವ ಈ ಮೀನು ಕರೆ ಕಟ್ಟೆ ಮತ್ತು ನದಿಗಳಲ್ಲಿ ಅನ್ಯ ತಳಿಗಳನ್ನು ಬದುಕಲು ಬಿಡುವುದಿಲ್ಲ. ನೀರಿನಲ್ಲಿರುವ ಆಮ್ಲಜನಕದ ಜೊತೆಗೆ ವಾತಾವರಣದ ಆಮ್ಲಜನಕವನ್ನು ಉಸಿರಾಟಕ್ಕಾಗಿ ಬಳಸಿಕೊಳ್ಳುವ ವಿಶೇಷ ಗುಣವನ್ನು ಹೊಂದಿರುವ ಈ ಮೀನು ತಾನಿರುವ ಸ್ಥಳದಲ್ಲಿ ಆಹಾರ ಲಭ್ಯತೆ ಕಡಿಮೆಯಾದರೆ ಬೇರೆ ಕರೆ ಕಟ್ಟೆಗಳಿಗೆ ವಲಸೆ ಹೋಗುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಲವರು ಅನಧಿಕೃತವಾಗಿ ಈ ಮೀನಿನ ಪಾಲನೆಯಲ್ಲಿ ತೊಡಗಿಕೊಂಡಿದ್ದು ಅದಕ್ಕೆ ಮಾಂಸಾಹಾರವನ್ನು ನೀಡುವುದರಿಂದ ಸುತ್ತಮುತ್ತಲಿನ ಪರಿಸರದ ನೈರ್ಮಲ್ಯದ ಮೇಲೂ ಇದು ವಿಪರೀತ ಪರಿಣಾಮ ಬೀರುತ್ತದೆ. ‘ಗಲೀಜು ವಾತಾವರಣದಲ್ಲಿ ಬೆಳೆಯುವ ‘ಕ್ಯಾಟ್‌ ಫಿಶ್‌’ಗೆ ಪ್ರಮುಖವಾಗಿ ಮಾಂಸದ ತ್ಯಾಜ್ಯವನ್ನು ಆಹಾರವಾಗಿ ನೀಡುವುದರಿಂದ ಆ ಮೀನನ್ನು ಸೇವಿಸುವವರಲ್ಲಿ ಪ್ರಮುಖವಾಗಿ ಕರುಳಿಗೆ ಸಂಬಂಧಪಟ್ಟ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ದೀರ್ಘಾವಧಿ ಸೇವನೆಯಿಂದ ಕರುಳಿನ ಕ್ಯಾನ್ಸರ್‌ ಬರುವ ಸಾಧ್ಯತೆ ಇದೆ. ಸಣ್ಣ ಜಾತಿಯ ಕ್ಯಾಟ್‌ಫಿಶ್ (ಬ್ಯಾಂಜೊ ಕ್ಯಾಟ್‌ಫಿಶ್) ಕೇವಲ 0.39 ಇಂಚು ಉದ್ದವಿರುತ್ತದೆ. ಅತಿದೊಡ್ಡ ಪ್ರಭೇದಗಳು (ಮೆಕಾಂಗ್ ಕ್ಯಾಟ್‌ಫಿಶ್) ಸುಮಾರು 9 ಅಡಿ ಉದ್ದ ಮತ್ತು 646 ಪೌಂಡ್ ತೂಕವನ್ನು ತಲುಪಬಹುದು. ಕ್ಯಾಟ್ ಫಿಶ್ ಜಾತಿಯನ್ನು ಅವಲಂಬಿಸಿ ಬೆಳ್ಳಿ, ಬೂದು, ಬಿಳಿ, ಕಂದು, ಹಸಿರು ಅಥವಾ ಹಳದಿ ಬಣ್ಣದ್ದಾಗಿರಬಹುದು. ದೊಡ್ಡ, ಚಪ್ಪಟೆ ತಲೆ ಮತ್ತು ಉದ್ದವಾದ ದೇಹವನ್ನು ಹೊಂದಿರುತ್ತದೆ. ಅದರಲ್ಲೂ ಕ್ಯಾಟ್‌ ಫಿಶ್‌ಗಳನ್ನು ಸಾಕುವ ಕೊಳಗಳು ತುಂಬಾ ಕೊಳಕಾಗಿರುತ್ತವೆ ಮತ್ತು ಅವುಗಳ ಸಾಕಾಣೆಯನ್ನು ನೇರವಾಗಿ ನೋಡಿದವರು ಕ್ಯಾಟ್ ಫಿಶ್ ಅನ್ನು ತಿನ್ನುವುದು ಬಿಡಿ ಕಣ್ಣೆತ್ತಿ ಕೂಡ ನೋಡಲಾರರು. ಭಾರತದಲ್ಲಿ ಈ ಮೀನಿನ ಸಾಕಾಣೆಯನ್ನು ನಿರ್ಬಂಧಿಸಲಾಗಿದೆ. ಅದಾಗ್ಯೂ ಕೆಲವು ಕಡೆಗಳಲ್ಲಿ ಕಾನೂನಿನ ಕಣ್ಣಿಗೆ ಮಣ್ಣೆರಚಿ ಕ್ಯಾಟ್ ಫಿಶ್ ಸಾಕಾಣೆ ದಂಧೆಯನ್ನು ನಡೆಸಲಾಗುತ್ತಿದೆ. ಕ್ಯಾಟ್ ಫಿಶ್ ಅನ್ನು ಮನುಷ್ಯರು ತಿನ್ನುವುದರಿಂದ ಹಲವಾರು ರೀತಿಯ ಅಪಾಯಗಳಿವೆ ಈ ಮೀನುಗಳಲ್ಲಿ ಪಾದರಸದ ಅಂಶ ಹೆಚ್ಚು ಇರುವುದರಿಂದ ಇದು ನರವ್ಯೂಹವನ್ನು ತಿಂದು ಹಾಕುತ್ತದೆ ಮತ್ತು ಕ್ಯಾನ್ಸರ್ ಕಾರಕ ಅಂಶಗಳೂ ಈ ಮೀನುಗಳಲ್ಲಿವೆ. ಗರ್ಭಿಣಿಯರು ಈ ಮೀನನ್ನು ತಿನ್ನುವುದರಿಂದ ಹುಟ್ಟುವ ಮಗುವು ನರಸಂಬಂಧಿ ಕಾಯಿಲೆಗಳಿಂದ ಬಳಲುತ್ತದೆ. ರಕ್ತವನ್ನು ಹೆಪ್ಪುಗಟ್ಟಿಸುವ ಗುಣ ಈ ಮೀನಿನ ಮಾಂಸಕ್ಕೆ ಇರುವುದರಿಂದ ಇದನ್ನು ಸೇವಿಸುವುದರಿಂದ ಹೃದ್ರೋಗದಂತಹ ಪ್ರಾಣಾಪಾಯಗಳು ಉಂಟಾಗುವ ಸಾಧ್ಯತೆ ಇರುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.