ಹರಳೆಣ್ಣೆ ಬಗ್ಗೆ ನಿಮಗೆಷ್ಟು ಗೊತ್ತು

Video Description

ಹರಳೆಣ್ಣೆ ಎಂದರೆ ಮೂಗು ಮುರಿಯುವವರು ಸ್ವಲ್ಪ ಇತ್ತ ನೋಡಿ! ಹರಳೆಣ್ಣೆ ಬಗ್ಗೆ ನಿಮಗೆಷ್ಟು ಗೊತ್ತು ಹಿಂದಿನ ಕಾಲದಲ್ಲಿ, ಹರಳೆಣ್ಣೆ ಎಂದರೆ ಎತ್ತಿನಗಾಡಿಯ ಕೀಲುಗಳಿಗೆ ಹಾಕಲು ಅಥವಾ ತಲೆಗೆ ಮತ್ತು ಮಲಬದ್ಧತೆಗೆ ಔಷಧೀಯ ರೂಪದಲ್ಲಿ ಬಳಸಲಾಗುತ್ತಿತ್ತು. ಇದೇ ಕಾರಣಕ್ಕೆ ಹಳ್ಳಿಗಳಲ್ಲಿ 'ಹರಳೆಣ್ಣೆಯ' ಇನ್ನೊಂದು ಹೆಸರು ಎತ್ತಿನ ಗಾಡಿಯ ಎಣ್ಣೆ ಎಂದೇ ಪ್ರಸಿದ್ಧಿ ಪಡೆಯಿತು. ವಾಸ್ತವವಾಗಿ ಹರಳೆಣ್ಣೆ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿದೆ. ಅದರಲ್ಲೂ ಔಷಧಿಗಳು ವಾಸಿ ಮಾಡಲಾಗದಂತಹ ಕೆಲವು ವ್ಯಾಧಿಗಳನ್ನು ಈ ಹರಳೆಣ್ಣೆ ಸುಲಭವಾಗಿ ಗುಣಪಡಿಸುತ್ತದೆ. ಚರ್ಮದ ಕಂದು ಕಲೆ, ಸೊಂಟನೋವು, ಉಳುಕಿದ ಹಿಮ್ಮಡಿ ಮೊದಲಾದವುಗಳಿಗೆ ಹರಳೆಣ್ಣೆ ಅತ್ಯುತ್ತಮವಾಗಿದೆ. ಹರಳೆಣ್ಣೆಯನ್ನು ದೇಹಕ್ಕೆ ಲೇಪಿಸಿಕೊಂಡು ಅರ್ಧ ಗಂಟೆ ನಂತರ ಸ್ನಾನ ಮಾಡಿದರೆ ಮೈ ಕೈ ನೋವು ನಿವಾರಣೆಯಾಗುತ್ತದೆ ವಾರದಲ್ಲಿ ಒಂದು ಬಾರಿ ಈ ರೀತಿ ಮಾಡುವುದರಿಂದ ಚರ್ಮದ ಸಮಸ್ಯೆ ಯು ನಿವಾರಣೆಯಾಗುತ್ತದೆ. ಹೊಟ್ಟೆ ಉಬ್ಬರದಿಂದ ಬಳಲುತ್ತಿರುವ ಮಗುವಿಗೆ ಹರಳೆಣ್ಣೆ ಸವರಿದ ವೀಳ್ಯದೆಲೆಯನ್ನು ಬಿಸಿ ಮಾಡಿ ಹೊಟ್ಟೆಯ ಮೇಲೆ ಹಾಕುವುದರಿಂದ ನೋವು ನಿವಾರಣೆಯಾಗುತ್ತದೆ. ಮಲ ವಿಸರ್ಜನೆಯಾಗದೆ ಹೊಟ್ಟೆಯಲ್ಲಿ ನೋವಿದ್ದಾಗ ಅರ್ಧ ಸ್ಪೂನ್ ನಿಂಬೆ ರಸದೊಂದಿಗೆ ಅರ್ಧ ಸ್ಪೂನ್ ಹರಳೆಣ್ಣೆಯನ್ನು ಬೆರೆಸಿ ಸೇವಿಸುವುದರಿಂದ ಮಲವಿಸರ್ಜನೆ ಯಾಗಿ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಕಣ್ಣುಗಳು ಕೆಂಪಾಗಿದ್ದರೆ ಉರಿಯುತ್ತಿದ್ದರೆ ಹರಳೆಣ್ಣೆಯನ್ನು ಕಣ್ಣಿನ ಮೇಲೆ ಹಚ್ಚಿ ಮಸಾಜ್ ಮಾಡುವುದರಿಂದ ಕಣ್ಣಿನ ತೊಂದರೆ ನಿವಾರಣೆಯಾಗುತ್ತದೆ. ಪ್ರತಿದಿನ ರಾತ್ರಿ ಮಲಗುವ ಮೊದಲು ಹರಳೆಣ್ಣೆಯನ್ನು ಹುಬ್ಬು ಮತ್ತು ಕಣ್ಣರೆಪ್ಪೆಗಳ ಮೇಲೆ ಹಚ್ಚುತ್ತಿದ್ದರೆ ರೆಪ್ಪೆಯ ಕೂದಲು ಮತ್ತು ಹುಬ್ಬು ಗಳು ಸುಂದರವಾಗುತ್ತದೆ.ವಾರದಲ್ಲಿ ಎರಡು ಬಾರಿ ಹರಳೆಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡಿ ತಲೆ ಸ್ನಾನ ಮಾಡುವುದರಿಂದ ಕೂದಲುಗಳು ಉದುರುವುದಿಲ್ಲ ಮತ್ತು ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. ಮುಖದ ಮೇಲೆ ಕಪ್ಪು ಕಲೆಗಳಿದ್ದರೆ ಹರಳೆಣ್ಣೆಯನ್ನು ಬಳಸಿ ಮಸಾಜ್ ಮಾಡಿ ಅರ್ಧ ಗಂಟೆಯ ನಂತರ ತೊಳೆಯುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.