ತುಪ್ಪದ ಸೋರೇಕಾಯಿ ಬೆಳೆ- ಲಾಭ ನಷ್ಟದ ಕಥೆ..!

Video Description

ಸಾವಯವ ಬೆಳೆಯಾಗಿ ತುಪ್ಪದ ಸೋರೆಕಾಯಿ ತುಪ್ಪದ ಸೋರೇಕಾಯಿ ಬೆಳೆ- ಲಾಭ ನಷ್ಟದ ಕಥೆ..! ಬೆಳೆಯ ಆವರ್ತನೆ, ಹಸಿರು- ಗೊಬ್ಬರ, ಮಿಶ್ರಗೊಬ್ಬರ, ಜೈವಿಕವಾಗಿ ಕೀಟಗಳ ನಿಯಂತ್ರಣ ವನ್ನು ಅವಲಂಬಿಸಿರುವ ಸಾವಯವ ಬೇಸಾಯವು ಮಣ್ಣಿನ ತಯಾರಿಕೆಯ ಸಾಮರ್ಥ್ಯವನ್ನು ಸರಿದೂಗಿಸುವಲ್ಲಿ ಮತ್ತು ಕೀಟಗಳನ್ನು ನಿಯಂತ್ರಿಸಲು, ಹಾಗೂ ಯಾಂತ್ರಿಕ ಬೇಸಾಯಕ್ಕಾಗಿ ರಾಸಾಯನಿಕ ಗೊಬ್ಬರಗಳು ಮತ್ತು ರಾಸಾಯನಿಕ ಕೀಟನಾಶಕಗಳು, ಗಿಡ ಬೆಳವಣಿಗೆ ನಿಯಂತ್ರಣಗಳು, ಜಾನುವಾರು ಮೇವು ಸೇರ್ಪಡೆಗಳು, ಮತ್ತು ತಳಿವಿಜ್ಞಾನ ಪ್ರಕಾರವಾಗಿ ಮಾರ್ಪಡಿಸಿದ ಸಾವಯವಗಳನ್ನು ಹೊರತುಪಡಿಸಿ ಅಥವಾ ಕಟ್ಟುನಿಟ್ಟಾಗಿ ನಿಯಮಿತಗೊಳಿಸುವ ವ್ಯವಸಾಯದ ಒಂದು ಭಾಗವಾಗಿದೆ. ಪೌಷ್ಠಿಕತೆ ಒದಗಿಸಿದ ನಂತರ ಕಳೆಯನ್ನು ಹತೋಟಿಯಲ್ಲಿರಿಸಿಕೊಳ್ಳುವುದು ಎರಡನೆಯ ಸ್ಥಾನವನ್ನು ಪಡೆಯುತ್ತದೆ. ಕಳೆಯನ್ನು ಹತೋಟಿಯಲ್ಲಿರಿಸಿಕೊಳ್ಳಲು ವಿವಿಧ ಬಗೆಯ ತಾಂತ್ರಿಕತೆಗಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಅವುಗಳಲ್ಲಿ ಕೈಯಿಂದ ಕಳೆ ಕೀಳುವುದು, ಒದ್ದೆ ಹುಲ್ಲನ್ನು ಬೇರುಗಳ ಬಳಿ ಹೊದಿಸುವುದು ಮೊದಲಾದ ವಿಧಾನಗಳನ್ನು ಬಳಸಿ ಬೆಳೆಯ ರಕ್ಷಣೆಯನ್ನು ಮಾಡಲಾಗುತ್ತದೆ. ಸಾವಯವ ತರಕಾರಿಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಇದ್ದೇ ಇದ್ದು ಹೆಚ್ಚಿನ ರೈತರು ಈಗ ಈ ದಿಸೆಯಲ್ಲಿ ಸಾವಯವ ತರಕಾರಿಗಳನ್ನೇ ಬೆಳೆದು ಮಾರುಕಟ್ಟೆಗೆ ಸರಬರಾಜು ಮಾಡುತ್ತಿದ್ದಾರೆ. ಸಾವಯವ ಬೆಳೆ ಅಂದರೆ ಇಲ್ಲಿ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಪ್ರಮಾಣದಲ್ಲಿ ಮಾಡುತ್ತಾರೆ. ಅಂತೆಯೇ ಮಾರುಕಟ್ಟೆಯಲ್ಲಿ ಇಂತಹ ಬೆಳೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇಂದಿನ ನಮ್ಮ ಲೇಖನದಲ್ಲಿ ತುಪ್ಪದ ಸೋರೆಕಾಯಿ ಬೆಳೆಯನ್ನು ಬೆಳೆದಿರುವ ಹೊಸಕೋಟೆ ತಾಲೂಕಿನ ವೆಂಕಟೇಶ ಮೂರ್ತಿಯವರ ಮನದಾಳದ ಮಾತುಗಳನ್ನು ಕೇಳೋಣ. ಈ ಸೋರೆಕಾಯಿ ಬೆಳೆಯಲುಮೊದಲು ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಬೇಕು. ನಂತರ ಇದಕ್ಕೆ ಅವರು ಬಳಸುವುದು ತಿಪ್ಪೆಗೊಬ್ಬರವಾಗಿದೆ. ವೆಂಕಟೇಶ್ ಹೇಳುವ ಹಾಗೆ ಈ ತರಕಾರಿಗೆ ಸೊಳ್ಳೆಯ ಹೊರತು ಬೇರೆ ಯಾವುದೇ ಕೀಟ ಬಾಧೆ ಇಲ್ಲ ಎಂದಾಗಿದೆ. ಸೊಳ್ಳೆ ನಿವಾರಕಗಳನ್ನು ವಾರಕ್ಕೊಮ್ಮೆ ಇವರು ತರಕಾರಿಗಳಿಗೆ ಸಿಂಪಡಿಸುತ್ತಾರೆ. ತಮ್ಮ ಅರ್ಧಎಕರೆ ಜಮೀನಿನಲ್ಲಿ ಅವರು ಸೋರೆಕಾಯಿ ಕೃಷಿಯನ್ನು ಮಾಡಿದ್ದಾರೆ. ಈ ಸೋರೆಕಾಯಿ ಮೂರು ತಿಂಗಳಿನಲ್ಲಿ ಫಸಲು ಕೊಡುವ ಬೆಳೆಯಾಗಿದೆ. 40-45 ದಿನಗಳಲ್ಲಿ ಕಾಯಿಕಟ್ಟಲು ಆರಂಭವಾಗುತ್ತದೆ ನಂತರ ಇದನ್ನು ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತದೆ. ನಾಲ್ಕು ಅಡಿಗೆ ಒಂದರಂತೆ ಬೆಳೆ ಬೆಳೆಯಲಾಗುತ್ತದೆ ಇವರು 12 ಅಡಿಗೆ ಒಂದು ಸಾಲಿನಂತೆ ಸೋರೆಕಾಯಿ ಬೆಳೆದಿದ್ದಾರೆ. ಈ ಸೋರೆಕಾಯಿ ರುಚಿ ಹೆಚ್ಚು ಮತ್ತು ಮನೆಯ ಬಳಕೆಗೆ ಇದರ ಬೆಳೆಯನ್ನು ಮಾಡಿಕೊಳ್ಳುತ್ತಿದ್ದೇನೆ ಎಂಬುದು ವೆಂಕಟೇಶ್ ಮಾತಾಗಿದೆ. ಸೋರೆಕಾಯಿಗೆ ಚಪ್ಪರ ಹಾಕಿ ಬೆಳೆ ಬೆಳೆಸಬೇಕು. ಇವರು ಹೇಳುವಂತೆ ಸೋರೆಕಾಯಿಯಲ್ಲಿ ಬೇರೆ ಬೇರೆ ವೈವಿಧ್ಯತೆಗಳಿವೆ. ಒಟ್ಟಿನಲ್ಲಿ ತುಪ್ಪದ ಸೋರೆಕಾಯಿ ವೆಂಕಟೇಶ್ ಮೂರ್ತಿಯವರ ಕೈ ಹಿಡಿದಿದೆ ಎಂದೇ ಹೇಳಬಹುದು. ಸಾವಯವ ವಿಧಾನದಲ್ಲಿ ಅವರು ಉತ್ತಮ ಲಾಭವನ್ನು ಈ ಕೃಷಿಯಿಂದ ಪಡೆದುಕೊಂಡಿದ್ದಾರೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.