ಬಿಲ್ವಪತ್ರೆ - ನೀವರಿಯದ ಮಾಹಿತಿ..!

Video Description

ಶಿವನಿಗೆ ಅಚ್ಚುಮೆಚ್ಚಾದ ಬಿಲ್ವಪತ್ರೆಯಲ್ಲಡಗಿದೆ ಅತ್ಯದ್ಭುತ ಔಷಧೀಯ ಅಂಶಗಳು ಬಿಲ್ವಪತ್ರೆ - ನೀವರಿಯದ ಮಾಹಿತಿ ಬಿಲ್ವಪತ್ರೆ ಶಿವನಿಗೆ ಅಚ್ಚುಮೆಚ್ಚು. ಬಿಲ್ವ ದರ್ಶನ ಮತ್ತು ಸ್ಪರ್ಶನ ಮಾತ್ರದಿಂದಲೇ ಪಾಪಗಳು ನಾಶವಾಗುತ್ತವೆ ಎನ್ನುತ್ತದೆ ಬಿಲ್ವಾಷ್ಟಕ. ಬಿಲ್ವ ವೃಕ್ಷ ದ ಪ್ರತಿಯೊಂದು ಭಾಗವು ಔಷಧಿಯುಕ್ತವಾಗಿದೆ. ಮರದಲ್ಲಿನ ವಿವಿಧ ಭಾಗಗಳು ವಿವಿಧ ಔಷಧಿ ಗುಣ ಕರ್ಮಗಳನ್ನು ಹೊಂದಿರುವುದು ವಿಶೇಷ. ಬಿಲ್ವಪತ್ರೆ ಮೂರು ಉಪಪತ್ರೆಗಳಿಂದ ಕೂಡಿ ರೂಪಗೊಂಡಿದೆ. ಇದರ ಮೂರು ದಳಗಳು ತ್ರಿಗುಣಗಳ ತ್ರಿಮೂರ್ತಿಗಳ, ತ್ರಿಶಕ್ತಿಗಳ ಮತ್ತು ಓಂಕಾರ ಮೂಲ ಉತ್ಪತ್ತಿ ಅಕ್ಷ ರಗಳ ಸಂಖೇತವಾಗಿದೆ. ಏಕ ಬಿಲ್ವಂ ಅಂದರೆ ಮೂರು ಉಪಪತ್ರೆಗಳಿರುವ ಬಿಲ್ವಪತ್ರೆ ಎಂದು ತಿಳಿಯಬೇಕು. ಬಿಲ್ವಪತ್ರೆಯನ್ನು ಕ್ರಮವಾಗಿ ಸೇವಿಸಿದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಕಾರಣ ಬಿಲ್ವಪತ್ರೆಯ ಔಷಧಿ ಗುಣದಿಂದ ಕೂಡಿದೆ ಎಷ್ಟೋ ಕಾಯಿಲೆಗಳು ಈ ಬಿಲ್ವಪತ್ರೆಯ ಔಷಧಿಗುಣದಿಂದ ಕೂಡಿದ್ದು ಎಷ್ಟೋ ಕಾಯಿಲೆಗಳು ಈ ಬಿಲ್ವಪತ್ರೆ ಸೇವನೆಯಿಂದ ವಾಸಿಯಾಗಿದೆ. ಬಿಲ್ವಪತ್ರೆಯ ಹಣ್ಣಿನ ಸೇವನೆ ಮಾಡಿದರೆ ಅಜೀರ್ಣ, ತಿಸಾರ, ರಕ್ತದಿಂದಾಗುವ ತೊಂದರೆಗಳು ಪಿತ್ತ, ವಾತ, ಕಫ, ಕಡಿಮೆಯಾಗುತ್ತದೆ ಎಂದೂ ಪರಿಗಣಿಸಲಾಗುತ್ತದೆ. ಶುಕ್ರವಾರದಂದು ಈ ಬಿಲ್ವ ಫಲವನ್ನು ಪೂಜಿಸಿ ಮನೆಯಲ್ಲಿ ಇಟ್ಟರೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುತ್ತದೆ. ವ್ಯಾಪಾರ ವ್ಯವಹಾರಗಳು ಅಭಿವೃದ್ಧಿಯಾಗುತ್ತದೆ. ಆಯುರ್ವೇದದಲ್ಲಿ ಈ ಮರದ ಪ್ರತಿಯೊಂದು ಭಾಗವು ಔಷಧಿಯ ಗುಣದಿಂದ ಕೂಡಿದೆ ಎಂದು ಇದನ್ನು ಬೆಳೆಸುತ್ತಾರೆ. ಒಟ್ಟಿನಲ್ಲಿ ಎಲೆಯಿಂದ ಹಿಡಿದು ಪ್ರತಿಯೊಂದು ಭಾಗವು ಮಾನವನಿಗೆ ವರದಾನವಾಗಿ ದೊರಕಿದೆ. ಬಿಲ್ವವು ಸಂಗ್ರಾಹಿಕ (ಹಿಡಿದಿಟ್ಟುಕೊಳ್ಳುವ ಕ್ರಿಯೆ) ದೀಪನ (ಹಸಿವನ್ನು ಹೆಚ್ಚಿಸುವ) ಮತ್ತು ಕಫವಾತಶಾಮಕ ಮಾಡುವ ಔಷಧಿಗಳಲ್ಲೇ ಸರ್ವಶ್ರೇಷ್ಠ ಔಷಧಿ ಬಿಲ್ವ ಎಂದು ಚರಕ ಸಂಹಿತೆಯಲ್ಲಿ ಉಲ್ಲೇಖವಿದೆ. ಆದ್ದರಿಂದ ಇದು ಜೀರ್ಣಕ್ರಿಯೆಗಳಿಗೆ ಸಂಬಂಧಿದ ರೋಗಗಳಲ್ಲಿ ಹೆಚ್ಚು ಬಳಕೆಯಲ್ಲಿದೆ. ಬಿಲ್ವವು ಸಮಾನ್ಯವಾಗಿ ಲಘು,ರೂಕ್ಷ ಗುಣಗಳಿಂದ, ತಿಕ್ತ ರಸದಿಂದ ಕೂಡಿದ್ದು ಉಷ್ಣವೀರ್ಯ ಉಳ್ಳದ್ದು. ಜಠರಾಗ್ನಿಯನ್ನು ಮತ್ತು ಪಿತ್ತವನ್ನು ಹೆಚ್ಚು ಮಾಡುವುದು. ಕಫ ವಾತಹರವಾಗಿದೆ. ಆಹಾರವನ್ನು ಜೀರ್ಣಿಸುವಲ್ಲಿ ಪ್ರಮುಖ ಪಾತ್ರವಹಿಸುವುದು ಮತ್ತು ಬಲಕಾರಕವಾಗಿದೆ. ಬಿಲ್ವ ವೃಕ್ಷ ದ ಪ್ರತಿಯೊಂದು ಭಾಗವು ಔಷಧಿಯುಕ್ತವಾಗಿದೆ. ಮರದಲ್ಲಿನ ವಿವಿಧ ಭಾಗಗಳು ವಿವಿಧ ಔಷಧಿ ಗುಣ ಕರ್ಮಗಳನ್ನು ಹೊಂದಿರುವುದು ವಿಶೇಷ. ಬಿಲ್ವದ ಎಲೆ ಮತ್ತು ಹಣ್ಣಿನ ತಿರುಳು ಮತ್ತು ಬೀಜ ಯಕೃತ್ತನ್ನು ರಕ್ಷಿಸುತ್ತವೆ. ಎಲೆಗಳಲ್ಲಿ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮತ್ತು ಹಣ್ಣಿನ ತಿರುಳಿನಲ್ಲಿ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಗುಣವಿದೆ. ಎಲೆಗಳಲ್ಲಿ ನೋವು ನಿವಾರಕ, ನಂಜು ನಿವಾರಕ, ಮತ್ತು ಜ್ವರಹರ ಮತ್ತು ಕ್ಯಾನ್ಸರ್‌ ಗುಣಪಡಿಸುವ ಗುಣಗಳಿವೆ. ಎಲೆ ಹೈಪರ್‌ಥೈರಾಡಿಸಮ್‌ನಲ್ಲಿ ಪರಿಣಾಮಕಾರಿಯಾದ ಔಷಧಿಯಾಗಿದೆ. ಕ್ಯಾನ್ಸರ್‌ಗೆ ರೇಡಿಯೇಷನ್‌ನಿಂದ ಚಿಕಿತ್ಸೆ ನೀಡುವಾಗ ಹಲವಾರು ದುಷ್ಪಾರಿಣಾಗಳು ಉಂಟಾಗುತ್ತವೆ. ಇದರಿಂದ ಆರೋಗ್ಯವಂತ ಜೀವಕೋಶಗಳೂ ನಾಶವಾಗುತ್ತವೆ. ಬಿಲ್ವ ರೇಡಿಯೋ ಪ್ರೋಟೆಕ್ಟೀವ್‌ ಆಗಿ ಕೆಲಸ ಮಾಡುವುದು. ರೇಡಿಯೇಷನ್‌ ನಂತರದ ಅಡ್ಡಪರಿಣಾಮಗಳಿಗೆ ಬಿಲ್ವ ಆಶಾಕಿರಣವಾಗಿದೆ. ಬಿಲ್ವಪತ್ರೆಯಕಾಯಿ ಮತ್ತು ಅದರ ಬೀಜವನ್ನು ಬಳಸುವುದರಿಂದ ಹೊಟ್ಟೆಯಲ್ಲಿ ಅಲ್ಸರ್‌ ಗುಣವಾಗುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.